ಆಂಧ್ರ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್‌ಗಾಗಿ ಕರ್ನಾಟಕದಿಂದ 4 ಆನೆಗಳ ಹಸ್ತಾಂತರ

ಬೆಂಗಳೂರು: ಇದು ದಸರಾ ಮಹೋತ್ಸವ ಅಲ್ಲ, ಬ್ಯಾಗ್ರೌಂಡ್ ನಲ್ಲಿ ಕಾಣುತ್ತಿರೋದು ಮೈಸೂರು ಕೂಡ ಅಲ್ಲ, ಅದ್ಯಾಕೆ ಊರಲ್ಲಿ ಅನೆಗಳು ಅಂತ ನೀವು ಆಶ್ಚರ್ಯಚಕಿತರಾಗಿದ್ದರೆ ಅದು ತಪ್ಪಲ್ಲ. ಯಾಕೆಂದರೆ ಒಂದಲ್ಲ ನಾಲ್ಕು ಆನೆಗಳನ್ನು ಶಿಬಿರದಿಂದ ವಿಧಾನಸೌಧದ ಆವರಣಕ್ಕೆ ತಂದು ಕಟ್ಟಿಹಾಕಲಾಗಿದೆ. ವಿಷಯವೇನೆಂದರೆ ಆಂಧ್ರ ಪ್ರದೇಶದ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರು ತಮ್ಮ ರಾಜ್ಯದ ಒಂದಷ್ಟು ಆನೆಗಳನ್ನು ಪಳಗಿಸಲು ಕರ್ನಾಟಕದಿಂದ ಅನೆಗಳನ್ನು ಕೇಳಿದ್ದರು. ಅವರ ಮನವಿಗೆ ಒಪ್ಪಿರುವ ಕರ್ನಾಟಕ ಸರ್ಕಾರ ಜ್ಯೂನಿಯರ್ ಅಭಿಮನ್ಯು, ಕೃಷ್ಣಾ, ದೇವಾ ಮತ್ತು ರಂಜನ್ ಹೆಸರಿನ 4 ಅನೆಗಳನ್ನು ಹಸ್ತಾಂತರಿಸುತ್ತಿದೆ.
