Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

‘ಲಾಲ್ ಪರಿ’ ಹಾಡಿಗೆ ನಾಲ್ಕು ಖರೀದಿದಾರರು? ಹನಿಸಿಂಗ್‌ ವಿರುದ್ಧ ಗಂಭೀರ ಆರೋಪ

Spread the love

ಮಹಾರಾಷ್ಟ್ರ : ಜನಪ್ರಿಯ ರ್ಯಾಪರ್ ಮತ್ತು ಸಂಗೀತಗಾರ. ಹಲವು ಸಿನಿಮಾಗಳಿಗೆ ಸೂಪರ್ ಹಿಟ್ ಹಾಡುಗಳನ್ನು ಹನಿಸಿಂಗ್‌ ನೀಡಿದ್ದಾರೆ. ಆದರೆ ಇದೀಗ ಹನಿ ಸಿಂಗ್ ತಮ್ಮ ಹಾಡೊಂದನ್ನು ಹಣಕ್ಕಾಗಿ ನಾಲ್ಕು ವಿವಿಧ ನಿರ್ಮಾಣ ಸಂಸ್ಥೆ ಮತ್ತು ಆಡಿಯೋ ಕಂಪೆನಿಗಳಿಗೆ ಆರೋಪ ಎದುರಿಸುತ್ತಿದ್ದಾರೆ.

ಇತ್ತೀಚೆಗಷ್ಟೆ ಅಕ್ಷಯ್ ಕುಮಾರ್, ಅಭಿಷೇಕ್ ಬಚ್ಚನ್, ರಿತೇಶ್ ದೇಶ್ಮುಖ್, ನಾನಾ ಪಾಟೇಕರ್ ಅವರುಗಳು ನಟಿಸಿರುವ ‘ಹೌಸ್ಫುಲ್ 5’ ಸಿನಿಮಾ ಟೀಸರ್ ಬಿಡುಗಡೆ ಆಗಿತ್ತು. ಟೀಸರ್ನಲ್ಲಿ ಹನಿ ಸಿಂಗ್ ಅವರ ‘ಲಾಲ್ ಪರಿ’ ಹಾಡು ಇತ್ತು. ಇದೀಗ ವಿವಾದಕ್ಕೆ ಕಾರಣವಾಗಿದೆ.

ಟೀಸರ್ನಲ್ಲಿ ‘ಲಾಲ್ ಪರಿ’ ಹಾಡು ಬಳಸಿರುವ ಕಾರಣಕ್ಕೆ ಮೊಫೂಶನ್ ಮ್ಯೂಸಿಕ್ ಸ್ಟುಡಿಯೋ ದೂರು ಸಲ್ಲಿಸಿದ್ದು ಹಕ್ಕುಚ್ಯುತಿ ಉಲ್ಲಂಘನೆ ಆರೋಪ ಮಾಡಿತ್ತು. ಯೂಟ್ಯೂಬ್ಗೆ ಸಹ ದೂರು ನೀಡಲಾಗಿತ್ತು. ದೂರು ಸ್ವೀಕರಿಸಿದ್ದ ಯೂಟ್ಯೂಬ್, ‘ಹೌಸ್ಫುಲ್ 5’ ಟೀಸರ್ ಅನ್ನು ಯೂಟ್ಯೂಬ್ನಿಂದ ತೆಗೆದು ಹಾಕಿತ್ತು. ಕೆಲ ವರದಿಗಳ ಪ್ರಕಾರ ಇದೇ ‘ಲಾಲ್ ಪರಿ’ ಹಾಡನ್ನು ಹನಿ ಸಿಂಗ್, ಜೀ ಮ್ಯೂಸಿಕ್, ದಿನೇಶ್ ಪ್ರೊಡಕ್ಷನ್ಗೂ ಮಾರಾಟ ಮಾಡಿದ್ದರು ಅದೇ ಹಾಡನ್ನು ನಾಡಿಯಾವಾಲ ನಿರ್ಮಾಣ ಸಂಸ್ಥೆಗೂ ಮಾರಾಟ ಮಾಡಿದ್ದಾರೆ ಎನ್ನಲಾಗಿದೆ.

ನಾಡಿಯಾವಾಲ, ‘ಹೌಸ್ಫುಲ್ 5’ ಸಿನಿಮಾನಲ್ಲಿ ‘ಲಾಲ್ ಪರಿ’ ಹಾಡು ಬಳಸಿದ್ದು, ಚಿತ್ರೀಕರಣ ಸಹ ಆಗಿರುವ ಕಾರಣ ಇತರೆ ಮೂರು ಸಂಸ್ಥೆಗಳಿಗೆ ಕೋಟ್ಯಂತರ ಹಣ ನೀಡಿ ಹಾಡನ್ನು ಮರು ಖರೀದಿ ಮಾಡಬೇಕಿದೆ ಎಂದು ವರದಿಯಾಗಿತ್ತು. ವಿವಾದ ಭುಗಿಲೆದ್ದ ಬೆನ್ನಲ್ಲೆ ನಾಡಿಯಾವಾಲ ಸಂಸ್ಥೆಗೆ ಲಿಖಿತ ಪ್ರಮಾಣ ನೀಡಿರುವ ಹನಿಸಿಂಗ್, ‘ಹಾಡಿನ ಹಕ್ಕು ತಮ್ಮ ಬಳಿಯೇ ಇದೆ’ ಎಂದಿದ್ದಾರೆ.

ಇದೀಗ ಹನಿಸಿಂಗ್ ಅವರ ಲಿಖಿತ ಪ್ರಮಾಣದ ಬಳಿಕ ನಾಡಿಯಾವಾಲ ಸಂಸ್ಥೆಯು ಮೊಫೂಶನ್ ಮ್ಯೂಸಿಕ್ ಸ್ಟುಡಿಯೋ ಹಾಗೂ ಯೂಟ್ಯೂಬ್ ವಿರುದ್ಧ ಮಾನನಷ್ಟ ಪ್ರಕರಣ ದಾಖಲಿಸಿದೆ. ಎರಡೂ ಸಂಸ್ಥೆಗಳ ಮೇಲೆ ತಲಾ 25 ಕೋಟಿ ರೂಪಾಯಿಯ ಮೊಕದ್ದಮೆ ದಾಖಲಿಸಿದೆ. ಕಾಪಿರೈಟ್ ದೂರು ಬಂದ ಕೂಡಲೇ ಯೂಟ್ಯೂಬ್, ನಾಡಿಯಾವಾಲ ನಿರ್ಮಾಣ ಸಂಸ್ಥೆಯನ್ನು ಸಂಪರ್ಕ ಮಾಡದೇ ತಮ್ಮ ಟೀಸರ್ ಅನ್ನು ತೆಗೆದು ಹಾಕಿದ್ದ ಅಕ್ಷಮ್ಯ ಎಂದಿದೆ ನಿರ್ಮಾಣ ಸಂಸ್ಥೆ, ನಾಡಿಯಾವಾಲ ಯೂಟ್ಯೂಬ್ ಚಾನೆಲ್ಗೆ 16 ಲಕ್ಷಕ್ಕೂ ಹೆಚ್ಚು ಸಬ್ಸ್ಕ್ರೈಬರ್ಗಳಿದ್ದು, ಭಾರತದ ಟಾಪ್ ನಿರ್ಮಾಣ ಸಂಸ್ಥೆಗಳಲ್ಲಿ ಅದೂ ಸಹ ಒಂದಾಗಿದೆ.

‘ಹೌಸ್ಫುಲ್ 5’ ಸಿನಿಮಾನಲ್ಲಿ ಅಕ್ಷಯ್ ಕುಮಾರ್, ಅಭಿಷೇಕ್ ಬಚ್ಚನ್, ರಿತೇಶ್ ದೇಶ್ಮುಖ್, ನಾನಾ ಪಾಟೇಕರ್, ಸಂಜಯ್ ದತ್, ಜಾಕಿ ಶ್ರಾಫ್, ಕೃತಿ ಸನೊನ್, ಜಾಕ್ವೆಲಿನ್ ಫರ್ನಾಂಡೀಸ್, ಸೌಂದರ್ಯಾ ಶರ್ಮಾ, ನೋರಾ ಫತೇಹಿ ಇನ್ನೂ ಕೆಲವರು ನಟಿಸಿದ್ದಾರೆ. ಹಾಸ್ಯಮತ ಥ್ರಿಲ್ಲರ್ ಸಿನಿಮಾ ಇದಾಗಿದೆ.


Spread the love
Share:

administrator

Leave a Reply

Your email address will not be published. Required fields are marked *