ಪ್ರಿಯಕರನೊಂದಿಗೆ ಸೇರಿ ಮಾಜಿ ಬಿಜೆಪಿ ನಾಯಕಿಯಿಂದ ಮಗಳಿಗೆಯೇ ಲೈಂಗಿಕ ದೌರ್ಜನ್ಯ

ಹರಿದ್ವಾರ- ಯಾತ್ರಾ ಸ್ಥಳ ಪವಿತ್ರ ಭೂಮಿ ಹರಿದ್ವಾರದಲ್ಲಿ ಮಾಜಿ ಬಿಜೆಪಿ ನಾಯಕಿ ಅನೈತಿಕ ಕೃತ್ಯ ಬೆಳಕಿಗೆ ಬಂದಿದೆ. ಬಿಜೆಪಿ ನಾಯಕಿಯ ಅಪ್ರಾಪ್ತ ಮಗಳು ತನ್ನ ತಾಯಿಯ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾಳೆ. ತಾನು ಹೆತ್ತ ಮಗಳ ಮೇಲೆ ತಾಯಿ ತನ್ನ ಪ್ರಿಯಕರನಿಂದ ಮಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದಳು ಎಂದು ಆರೋಪಿಸಲಾಗಿದೆ. ಸಂತ್ರಸ್ತ ಹುಡುಗಿಯ ದೂರಿನ ಮೇರೆಗೆ ಪೆÇಲೀಸರು ಪ್ರಕರಣ ದಾಖಲಿಸಿಕೊಂಡು
ಬಿಜೆಪಿ ಮಹಿಳಾ ಮೋರ್ಚಾದ ಮಾಜಿ ಜಿಲ್ಲಾ ಅಧ್ಯಕ್ಷೆ ಮತ್ತು ಆಕೆಯ ಗೆಳೆಯನನ್ನು ತಮ್ಮ ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರ ಮಾಡಿದ ಆರೋಪದ ಮೇಲೆ ಬಂಧಿಸಲಾಗಿದೆ. ಆರೋಪಿ ಮಹಿಳೆಯನ್ನು ಬಿಜೆಪಿ ಪಕ್ಷದಿಂದ ಹೊರಹಾಕಿದೆ.
ಮತ್ತೊಬ್ಬ ಆರೋಪಿ ಇನ್ನೂ ತಲೆಮರೆಸಿಕೊಂಡಿದ್ದು, ಪೆÇಲೀಸರು ಆತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಆರೋಪಿ ಮಹಿಳೆ ತನ್ನ ಪತಿಯೊಂದಿಗೆ ಬಹಳ ದಿನಗಳಿಂದ ಜಗಳವಾಡುತ್ತಿದ್ದಳು ಎಂದು ಪೆÇಲೀಸ್ ತನಿಖೆಯಲ್ಲಿ ತಿಳಿದುಬಂದಿದೆ. ಸಂತ್ರಸ್ತೆ ತನ್ನ ತಂದೆಯೊಂದಿಗೆ ಒಂದು ತಿಂಗಳಿನಿಂದ ವಾಸಿಸುತ್ತಿದ್ದು. ಲವಲವಿಕೆಯಿಂದ ಇದ್ದ ಮಗಳು ತುಂಬಾ ಮೌನವಾಗಿರುವುದನ್ನು ಕಂಡು ತಂದೆ ಮಗಳನ್ನು ಪ್ರಶ್ನಿಸಿದ್ದಾರೆ.ಆಗ ಮಗಳು ನಡೆದ ಸಂಗತಿ ಕುರಿತು ತಂದೆಯ ಬಳಿ ಹೇಳಿದ್ದಾಳೆ.ಮಗಳು ಹೇಳಿದ ವಿಷಯ ಕೇಳಿ ತಂದೆ ತೀವ್ರ ಆಘಾತಕ್ಕೆ ಒಳಗಾಗಿದ್ದಾರೆ.
ತನ್ನ ತಾಯಿ ಆಕೆಯ ಪ್ರಿಯಕರ ಮತ್ತು ಇತರರು ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಅಪ್ರಾಪ್ತ ಬಾಲಕಿ ಆರೋಪಿಸಿದ್ದಾರೆ. ಸಂತ್ರಸ್ತೆ ಪೆÇಲೀಸರಿಗೆ ಲಿಖಿತ ದೂರು ಸಹ ನೀಡಿದ್ದು ದೂರಿನ ಆಧಾರದ ಮೇಲೆ ಪೆÇಲೀಸರು ಪ್ರಕರಣದ ತನಿಖೆ ನಡೆಸಿ ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ. ಇದಲ್ಲದೆ, ಸೆಕ್ಷನ್ 164 ರ ಅಡಿಯಲ್ಲಿ ಸಂತ್ರಸ್ತೆಯ ಹೇಳಿಕೆಯನ್ನು ಸಹ ದಾಖಲಿಸಲಾಗಿದೆ. ತನಿಖೆ ಮತ್ತು ವೈದ್ಯಕೀಯ ಪರೀಕ್ಷೆಯಲ್ಲಿ ಎಲ್ಲಾ ಆರೋಪಗಳು ನಿಜವೆಂದು ಕಂಡುಬಂದಿದೆ.
ಇದರ ನಂತರ, ಪೆÇಲೀಸರು ಆರೋಪಿ ತಾಯಿ ಮತ್ತು ಆಕೆಯ ಪ್ರಿಯಕರನನ್ನು ಬಂಧಿಸಿದ್ದಾರೆ. ಅಲ್ಲದೆ, ಒಬ್ಬ ಆರೋಪಿ ತಲೆಮರೆಸಿಕೊಂಡಿದ್ದು, ಪೆÇಲೀಸರು ಆತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.