ವೀಸಾ ಇಲ್ಲದೆ ವಿದೇಶ ಪ್ರವಾಸ: ಭಾರತೀಯರು ಹೋಗಬಹುದಾದ 58 ದೇಶಗಳು

ಇನ್ನೇನು ಮಕ್ಕಳಿಗೆ ದಸರಾ ರಜೆ, ಕ್ರಿಸ್ಮಸ್ ರಜೆ ಹತ್ತಿರದಲ್ಲಿಯೇ ಇದೆ. ಅದನ್ನು ಬಿಟ್ಟರೆ ಬೇಸಿಗೆ ರಜೆಯೂ ಬರುತ್ತದೆ. ಇಂಥ ಸಂದರ್ಭಗಳಲ್ಲಿ ವಿದೇಶ ಪ್ರವಾಸದ ಪ್ಲ್ಯಾನ್ ಮಾಡುವವರು ಹಲವರು ಇರಬಹುದು. ಆದರೆ ವೀಸಾ ಮಾಡಿಸಿಕೊಳ್ಳುವುದೇ ದೊಡ್ಡ ತಲೆನೋವಿನ ಕೆಲಸ ಅಂದುಕೊಂಡು ಸುಮ್ಮನೇ ಇರುವವರೇ ಹೆಚ್ಚು. ಅಷ್ಟಕ್ಕೂ ಸಿಂಗಪುರ ಮತ್ತು ಜಪಾನಿಗರು 190 ದೇಶಗಳಿಗೆ ದೇಶಗಳಿಗೆ ವೀಸಾ ಇಲ್ಲದೇ ಹೋಗುವ ಅದೃಷ್ಟ ಪಡೆದುಕೊಂಡಿದ್ದಾರೆ. ನಾವು ಭಾರತೀಯರು ಅಷ್ಟೊಂದು ಅದೃಷ್ಟವಂತರಲ್ಲದಿದ್ದರೂ, 58 ದೇಶಗಳಿಗೆ ವೀಸಾ ಇಲ್ಲದೇ ಹೋಗಬಹುದಾಗಿದೆ. ಅಷ್ಟಕ್ಕೂ, ಯಾವುದೇ ಒಂದು ದೇಶಕ್ಕೆ ಪ್ರಯಾಣಿಸಲು ಪಾಸ್ಪೋರ್ಟ್ ಅಂತೂ ಬೇಕೇ ಬೇಕು. ಅದರ ಜೊತೆ ವೀಸಾ ಇಲ್ಲದಿದ್ದರೆ ವಿದೇಶಗಳಿಗೆ ಹೋಗುವುದು ಸಾಧ್ಯವೇ ಇಲ್ಲ. ಇವುಗಳು ಇಲ್ಲದೆ ಇದ್ದರೆ ಹೊರ ದೇಶಗಳಿಗೆ ಪ್ರವೇಶಿಸಲು ಸಾಧ್ಯವಾಗುವುದಿಲ್ಲ. ಆದರೆ ಕೆಲವೊಂದು ದೇಶಗಳು ಕೆಲವು ದೇಶಗಳ ಪ್ರಜೆಗಳಿಗೆ ವೀಸಾ ಮುಕ್ತವಾಗಿ ಪ್ರವೇಶಿಸಲು ಅನುಮತಿ ನೀಡುತ್ತದೆ.

58 ದೇಶಗಳಿಗೆ ವೀಸಾ ಬೇಡ
58 ದೇಶಗಳಲ್ಲಿ ಇನ್ನು ಮುಂದೆ ಪ್ರವಾಸ ಮಾಡಬಹುದಾಗಿದೆ. ಇದರಿಂದ ಹೆಚ್ಚೆಚ್ಚು ಜನರು ವೀಸಾ ಫ್ರೀ ನೀಡಿದ ದೇಶಗಳಿಗೆ ಪ್ರವಾಸ ಮಾಡುತ್ತಾರೆ. ಇದರಿಂದ ಸಹಜವಾಗಿಯೇ ಪ್ರವಾಸಿಗರ ಒಳಹರಿವು ಹೆಚ್ಚಾಗುತ್ತದೆ. ಆದ್ದರಿಂದಲೇ ಕೆಲವು ದೇಶಗಳು ವೀಸಾಫ್ರೀ ಸೌಲಭ್ಯ ಕೊಡುತ್ತದೆ. ಇದೀಗ ಭಾರತವು ವಿಶ್ವದಲ್ಲಿಯೇ ಮಿಂಚುತ್ತಿರುವ ಹಿನ್ನೆಲೆಯಲ್ಲಿ, ಅದನ್ನು ಗಮನದಲ್ಲಿ ಇಟ್ಟುಕೊಂಡು 58 ದೇಶಗಳು ವೀಸಾಫ್ರೀ ಮಾಡಿದೆ. ಈ ಸೌಲಭ್ಯ ಬಂದು ಕೆಲ ತಿಂಗಳುಗಳೇ ಕಳೆದಿದ್ದು, ಹಲವರು ಇದರ ಪ್ರಯೋಜನ ಕೂಡ ಪಡೆದುಕೊಳ್ಳುತ್ತಿದ್ದಾರೆ.
ಹಾಗಿದ್ದರೆ ಯಾವ ದೇಶಗಳಿಗೆ ವೀಸಾ ಇಲ್ಲದೇ ಹೋಗಬಹುದು ಎನ್ನುವುದನ್ನು ಇಲ್ಲಿ ತಿಳಿಸಲಾಗಿದೆ. ಅನೇಕ ಜನಪ್ರಿಯ ರಜಾ ತಾಣಗಳು ಇನ್ನೂ ಭಾರತೀಯ ಪ್ರಯಾಣಿಕರನ್ನು ವೀಸಾ ಇಲ್ಲದೆ ಸ್ವಾಗತಿಸುತ್ತವೆ. ಇದರಲ್ಲಿ ನಿಮ್ಮ ನೆಚ್ಚಿನ ದೇಶ ಯಾವುದು ಎನ್ನುವುದಕ್ಕೆ ಗುರುತು ಹಾಕಿಟ್ಟುಕೊಂಡು ಮುಂದಿನ ರಜೆಗೆ ಪ್ಲ್ಯಾನ್ ಮಾಡಿಕೊಳ್ಳಬಹುದಾಗಿದೆ.
82 ದೇಶಗಳು ಯಾವುವು?
ಅಂಗೋಲಾ, ಬಾರ್ಬಡೋಸ್, ಭೂತಾನ್, ಬೊಲಿವಿಯಾ, ಬ್ರಿಟಿಷ್ ವರ್ಜಿನ್ ದ್ವೀಪಗಳು, ಬುರುಂಡಿ, ಕಾಂಬೋಡಿಯಾ, ಕೇಪ್ ವರ್ಡೆ ದ್ವೀಪಗಳು, ಕೊಮೊರೊ ದ್ವೀಪಗಳು, ಕುಕ್ ದ್ವೀಪಗಳು, ಜಿಬೌಟಿ, ಡೊಮಿನಿಕಾ, ಇಥಿಯೋಪಿಯಾ, ಫಿಜಿ, ಗ್ರೆನಡಾ, ಗಿನಿಯಾ-ಬಿಸ್ಸಾ, ಜಮಾಖ್, ಇಂಡೋನೇಷಿಯಾ, ಜಮಾಖ್, ಜಮಾಖ್, ಜಮಾಖ್, ಜಮಾಖ್, ಹೈಟಿ ಕೀನ್ಯಾ, ಕಿರಿಬಾತಿ, ಲಾವೋಸ್, ಮಕಾವೊ , ಮಡಗಾಸ್ಕರ್, ಮಲೇಷ್ಯಾ, ಮಾಲ್ಡೀವ್ಸ್, ಮಾರ್ಷಲ್ ದ್ವೀಪಗಳು, ಮಾರಿಷಸ್, ಮೈಕ್ರೋನೇಷಿಯಾ, ಮಂಗೋಲಿಯಾ, ಮೊಂಟ್ಸೆರಾಟ್, ಮೊಜಾಂಬಿಕ್, ಮ್ಯಾನ್ಮಾರ್, ನಮೀಬಿಯಾ, ನೇಪಾಳ, ನಿಯು, ಪಲಾವ್ ದ್ವೀಪಗಳು, ಕತಾರ್, ರುವಾಂಡಾ, ಸೇಂಟ್ ಸೀಚೆಲ್, ಸಿಮಲ್, ಸಿಮಲ್, ಶ್ರೀಲಂಕಾ, ಸಿಮಲ್, ಹೆಲೆನಾ. ಸೇಂಟ್ ಕಿಟ್ಸ್ ಮತ್ತು ನೆವಿಸ್ ಲೂಸಿಯಾ, ಸೇಂಟ್ ಲೂಯಿಸ್ ವಿನ್ಸೆಂಟ್ ಮತ್ತು ಗ್ರೆನಡೈನ್ಸ್, ತಾಂಜಾನಿಯಾ, ಥೈಲ್ಯಾಂಡ್, ಟಿಮೋರ್-ಲೆಸ್ಟೆ, ಟ್ರಿನಿಡಾಡ್ ಮತ್ತು ಟೊಬಾಗೊ, ಟುವಾಲು, ವನವಾಟು ಮತ್ತು ಜಿಂಬಾಬ್ವೆ ದೇಶಗಳು ಇಲ್ಲಿವೆ.
