Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಮಂಡ್ಯಕ್ಕೆ ಕಳಂಕ ತಂದಿದ್ದ ಭ್ರೂಣ ಹತ್ಯೆಗೆ ಬ್ರೇಕ್: ಆರೋಗ್ಯ ಇಲಾಖೆಯ ದಿಟ್ಟ ಕ್ರಮದಿಂದ ಜಿಲ್ಲೆಯ ಲಿಂಗಾನುಪಾತದಲ್ಲಿ ಗಣನೀಯ ಏರಿಕೆ!

Spread the love

ಮಂಡ್ಯ: ಜಿಲ್ಲೆಯಲ್ಲಿ ಎಗ್ಗಿಲ್ಲದೇ ನಡೆಯುತ್ತಿದ್ದ ಭ್ರೂಣ ಹತ್ಯೆಗೆ ಆರೋಗ್ಯ ಇಲಾಖೆ ಕಡಿವಾಣ ಹಾಕಿದ ನಂತರ ಇದೀಗ ಲಿಂಗಾನುಪಾತದಲ್ಲಿ (Sex Ratio) ಏರಿಕೆಯಾಗಿದೆ. ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚಳ ಕಂಡುಬಂದಿದೆ.

ಮಂಡ್ಯ, ಪಾಂಡವಪುರ, ನಾಗಮಂಗಲದಲ್ಲಿ ಸರಣಿ ಭ್ರೂಣ ಹತ್ಯೆ ಪ್ರಕರಣಗಳು ಬೆಳಕಿಗೆ ಬಂದಿದ್ದವು. ಹೆಣ್ಣು ಭ್ರೂಣ ಪತ್ತೆ ಹಾಗೂ ಹತ್ಯೆ ಪ್ರಕರಣ ಮಂಡ್ಯ ಜಿಲ್ಲೆಯನ್ನು ರಾಜ್ಯದ ಮುಂದೆ ತಲೆ ತಗ್ಗಿಸುವಂತೆ ಮಾಡಿತ್ತು. ಪಾಪಿಗಳು ಹಣದಾಸೆಗೆ ಸಾವಿರಾರು ಹೆಣ್ಯ ಭ್ರೂಣಗಳ ಮಾರಣಹೋಮ ನಡೆಸಿದ್ದರು. ಇದರಿಂದ ಜಿಲ್ಲೆಯ ಲಿಂಗಾನುಪಾತ ಇಳಿಕೆಯಾಗಿತ್ತು. ಬಳಿಕ ದಿಟ್ಟ ಕ್ರಮಕ್ಕೆ ಮುಂದಾದ ಆರೋಗ್ಯ ಇಲಾಖೆ ದಂಧೆಗೆ ಕಡಿವಾಣ ಹಾಕುವಲ್ಲಿ ಯಶಸ್ವಿಯಾಗಿದೆ

ಹೆಣ್ಣು ಭ್ರೂಣ ಪತ್ತೆ ಹಾಗೂ ಹತ್ಯೆ ದಂಧೆಯಿಂದ ಜಿಲ್ಲೆಯಲ್ಲಿ ಲಿಂಗಾನುಪಾತ ಇಳಿಕೆಯಾಗಿತ್ತು. ಆದರೆ ಇದೀಗ ಆರೋಗ್ಯ ಇಲಾಖೆ ದಿಟ್ಟ ಕ್ರಮಕ್ಕೆ ಲಿಂಗಾನುಪಾತ ಏರಿಕೆ ಆಗಿದೆ. ಕಳೆದ ವರ್ಷ ಪ್ರತಿ ಗಂಡಿಗೆ 869 ಇದ್ದ ಹೆಣ್ಣು ಮಕ್ಕಳ ಸಂಖ್ಯೆ ಈ ವರ್ಷ 930ಕ್ಕೆ ಏರಿಕೆ ಕಂಡಿದೆ.

ಜಿಲ್ಲಾ ಆರೋಗ್ಯ ಇಲಾಖೆ ಡಿಎಚ್‌ಓ ಡಾ.ಮೋಹನ್ ನೇತೃತ್ವದಲ್ಲಿ ಕಾರ್ಯತಂತ್ರಗಳನ್ನ ರೂಪಿಸಿ, ಭ್ರೂಣ ಹತ್ಯೆ ದಂಧೆಗೆ ಬ್ರೇಕ್ ಹಾಕಲಾಗಿತ್ತು. ಮೊದಲಿಗೆ ಖಾಸಗಿ ಆಸ್ಪತ್ರೆ, ಸ್ಕ್ಯಾನಿಂಗ್ ಸೆಂಟರ್‌ಗಳ ಮೇಲೆ ಹದ್ದಿನ ಕಣ್ಣಿಟ್ಟರು. ಬಳಿಕ ಮೂರು ತಿಂಗಳ ಬಳಿಕ ಸ್ಕ್ಯಾನಿಂಗ್‌ಗೆ ಬರುವ, ಮೊದಲು ಹೆಣ್ಣು ಮಗುವಿಗೆ ಜನ್ಮ ಕೊಟ್ಟ ಗರ್ಭಿಣಿಯರ ಮೇಲೆ ನಿಗಾವಹಿಸಿದರು. ಆರಂಭದಲ್ಲಿ ಹಲವು ಆರೋಪಿಗಳನ್ನ ಬಂಧಿಸಿದ್ದರೂ ಕೂಡ ದಂಧೆ ನಿಂತಿರಲಿಲ್ಲ. ಆಗ ಆರೋಗ್ಯ ಇಲಾಖೆ ಕೈಗೆತ್ತಿಕೊಂಡದ್ದು ಡೆಕಾಯ್ ಆಪರೇಷನ್. ಭ್ರೂಣ ಲಿಂಗ ದಂಧೆ ಪತ್ತೆ ಹಚ್ಚಲು ಇಲಾಖೆಯೇ ಓರ್ವ ಗರ್ಭಿಣಿಯನ್ನು ನೇಮಕ ಮಾಡಿದ್ರು. ಆ ಗರ್ಭಿಣಿ ಮೂಲಕವೇ ಆರೋಪಿಗಳ ಹೆಡೆಮುರಿ ಕಟ್ಟಿದ್ರು. ಆ ಮೂಲಕ ದಂಧೆಗೆ ಸಂಪೂರ್ಣ ಕಡಿವಾಣ ಹಾಕಿದ್ರು. ಇದರ ಪರಿಣಾಮ ಲಿಂಗಾನುಪಾತ ಪ್ರಮಾಣ ಗಣನೀಯವಾಗಿ ಏರಿಕೆ ಕಂಡಿತು.

ಜಿಲ್ಲೆಗೆ ಕಳಂಕ ತಂದಿದ್ದ ಭ್ರೂಣ ಲಿಂಗ ಪತ್ತೆ ದಂಧೆಗೆ ಬ್ರೇಕ್ ಹಾಕುವಲ್ಲಿ ಆರೋಗ್ಯ ಇಲಾಖೆ ಯಶಸ್ವಿಯಾಗಿದೆ.


Spread the love
Share:

administrator

Leave a Reply

Your email address will not be published. Required fields are marked *