ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಅರ್ಜುನ್ ಭಂಡಾರ್ಕರ್ ಅವರಿಗೆ ಅಭಿನಂದನಾ ಪ್ರವಾಹ

ಮಂಗಳೂರು:ನವೆಂಬರ್ 15, 2025 ರಂದು ಕುಳಾಯಿ ಮಹಿಳಾ ಮಂಡಲದಲ್ಲಿ, ಸಮಾಜ ಸೇವೆಗಾಗಿ ಪ್ರತಿಷ್ಠಿತ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದ, ಸೇವಾ ರತ್ನ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಶ್ರೀ ಅರ್ಜುನ್ ಭಂಡಾರ್ಕರ್ ಅವರಿಗೆ ಕುಳಾಯಿ ಗ್ರಾಮದ ಗಣ್ಯಾತಿ ಗಣ್ಯರು ಹಾಗೂ ಊರಿನ ಮತ್ತು ಪರ ಊರಿನ ಸಮಸ್ತ ಸಂಘ ಸಂಸ್ಥೆಗಳ ವತಿಯಿಂದ ಅದ್ದೂರಿ ಅಭಿನಂದನಾ ಸಮಾರಂಭವನ್ನು ಏರ್ಪಡಿಸಲಾಗಿತ್ತು. ಯುವ ನಾಯಕ ಶ್ರೀ ನಂದನ್ ಮಲ್ಯ ಚಳಕೇಡು ಸೇರಿದಂತೆ ಹಲವಾರು ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಶ್ರೀ ಭಂಡಾರ್ಕರ್ ಅವರ ಸಾಧನೆಯನ್ನು ಶ್ಲಾಘಿಸಿದರು. ಈ ಕಾರ್ಯಕ್ರಮವು ಸಮಿತಿಯ ಪ್ರಮುಖರಾದ ಶ್ರೀ ಸಂದೀಪ್ ಶೆಟ್ಟಿ ಅವರ ಸಾರಥ್ಯದಲ್ಲಿ, ಶ್ರೀ ಗಿರೀಶ್ ಕುಳಾಯಿ, ಶ್ರೀ ಸಂಜೀವ ಸುವರ್ಣ, ಶ್ರೀ ದಿನೇಶ್ ದೇವಾಡಿಗ, ಶ್ರೀ ಮೋನಪ್ಪ ಕರ್ಕೇರ ಹಾಗೂ ಇತರ ಸದಸ್ಯರ ಸಕ್ರಿಯ ಸಹಕಾರದಿಂದ ಯಶಸ್ವಿಯಾಗಿ ನೆರವೇರಿತು.
