Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಕ್ಯಾನ್ಸರ್ ಪೀಡಿತ ಪತಿ – ಪತ್ನಿಗೆ ಗುಂಡು ಹಾರಿಸಿ ತಾನೂ ಆತ್ಮಹತ್ಯೆ

Spread the love

ಲಕ್ನೋ: ಕ್ಯಾನ್ಸರ್ ನಿಂದ ಬಳಲುತ್ತಿದ್ದ ರಿಯಲ್ ಎಸ್ಟೇಟ್ ಏಜೆಂಟ್ ಒಬ್ಬರು ತನ್ನ ಪತ್ನಿಗೆ ಗುಂಡು ಹಾರಿಸಿ ಬಳಿಕ ತಾನು ಕೂಡಾ ಆತ್ಮಹತ್ಯೆ ಮಾಡಿಕೊಂಡಿರುವಂತಹ ಶಾಕಿಂಗ್‌ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ನಡೆದಿದೆ.
ಬುಧವಾರ ಬೆಳಗ್ಗೆ 11 ಗಂಟೆ ವೇಳೆಗೆ ಈ ಘಟನೆ ನಡೆದಿದ್ದು, ಸ್ಥಳದಲ್ಲಿ ಡೆತ್‌ ನೋಟ್‌ ಕೂಡಾ ಪತ್ತೆಯಾಗಿದೆ. ಅದರಲ್ಲಿ ಬರೆದಿದ್ದ ವಿಚಾರಗಳು ಕುಟುಂಬಸ್ಥರನ್ನು ಬೆಚ್ಚಿ ಬೀಳಿಸುವಂತೆ ಮಾಡಿದೆ.

ಡೆತ್‌ ನೋಟ್‌ನಲ್ಲಿ, ನಾನು ಕ್ಯಾನ್ಸರ್ ನಿಂದ ಬಳಲುತ್ತಿದ್ದೇನೆ, ಮತ್ತು ನನ್ನ ಕುಟುಂಬಕ್ಕೆ ಅದರ ಬಗ್ಗೆ ತಿಳಿದಿಲ್ಲ. ನಾನು ಬದುಕುಳಿಯುವುದು ಅನಿಶ್ಚಿತವಾಗಿರುವುದರಿಂದ ನನ್ನ ಚಿಕಿತ್ಸೆಗೆ ಹಣ ವ್ಯರ್ಥವಾಗುವುದನ್ನು ನಾನು ಬಯಸುವುದಿಲ್ಲ. ನಾವು ಶಾಶ್ವತವಾಗಿ ಒಟ್ಟಿಗೆ ಇರಲು ಪ್ರತಿಜ್ಞೆ ಮಾಡಿದ್ದರಿಂದ ನಾನು ನನ್ನ ಹೆಂಡತಿಯನ್ನು ಕರೆದುಕೊಂಡು ಹೋಗುತ್ತಿದ್ದೇನೆ. ಇದು ನನ್ನ ನಿರ್ಧಾರ ಮಾತ್ರ. ಯಾರೂ ವಿಶೇಷವಾಗಿ ನನ್ನ ಮಕ್ಕಳು ತಪ್ಪಿತಸ್ಥರಲ್ಲ ಎಂದು ಬರೆದಿದ್ದಾಗಿ ಪೊಲೀಸರು ತಿಳಿಸಿದ್ದಾರೆ.

ಘಟನೆಯ ಸಂದರ್ಭ ದಂಪತಿಯ ಇಬ್ಬರು ಪುತ್ರರು ಮೊದಲ ಮಹಡಿಯಲ್ಲಿದ್ದರು. ಗುಂಡಿನ ಶಬ್ದ ಕೇಳಿ ಕೆಳಗೆ ಓಡಿ ಬಂದಾಗ ವಿಚಾರ ಬೆಳಕಿಗೆ ಬಂದಿದೆ. ನಂತರ ಇಬ್ಬರೂ ಪೋಷಕರನ್ನು ಮರಿಯಮ್ ಆಸ್ಪತ್ರೆಗೆ ಸಾಗಿಸಲಾಗಿದ್ದು, ಅಲ್ಲಿ ವೈದ್ಯರು ಇಬ್ಬರೂ ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದಾರೆ. ಪೊಲೀಸರು ಪಿಸ್ತೂಲನ್ನು ವಶಪಡಿಸಿಕೊಂಡು ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *