Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಆರೋಗ್ಯಕ್ಕೆ ಹಾನಿಕಾರಕವಾಗಬಹುದಾದ ಮೀನುಗಳು: ತಜ್ಞರಿಂದ ಎಚ್ಚರಿಕೆ

Spread the love

ಮಾಂಸಾಹಾರ ಸೇವನೆ ಮಾಡುವವರು ಮೀನು ತಿನ್ನುವುದನ್ನು ಹೆಚ್ಚಾಗಿ ಇಷ್ಟಪಡುತ್ತಾರೆ. ಫಿಶ್ ಕರಿ, ಫ್ರೈ, ಗ್ರಿಲ್ ಮತ್ತು ಫಿಶ್ ಬಿರಿಯಾನಿ ಹೀಗೆ ವಿವಿಧ ರೀತಿಯಲ್ಲಿ ಖಾದ್ಯ ತಯಾರಿಸಿ ಸೇವನೆ ಮಾಡುತ್ತಾರೆ. ಇವು ನಾಲಿಗೆಗೆ ರುಚಿ ನೀಡುವುದರ ಜೊತೆ ಜೊತೆಗೆ ಆರೋಗ್ಯಕ್ಕೂ ಅನೇಕ ರೀತಿಯಲ್ಲಿ ಪ್ರಯೋಜನಗಳನ್ನು ನೀಡುತ್ತದೆ. ಮೀನಿನಲ್ಲಿ ಒಮೆಗಾ-3 ಕೊಬ್ಬಿನಾಮ್ಲಗಳು, ವಿಟಮಿನ್ ಡಿ, ವಿಟಮಿನ್ ಬಿ2, ಕ್ಯಾಲ್ಸಿಯಂ, ರಂಜಕ, ಕಬ್ಬಿಣ, ಸತು, ಅಯೋಡಿನ್ ಮತ್ತು ಪ್ರೋಟೀನ್‌ಗಳು ಸಮೃದ್ಧವಾಗಿವೆ. ಇಷ್ಟು ಪ್ರಯೋಜನವಿದ್ದರೂ ಕೂಡ ಕೆಲವು ರೀತಿಯ ಮೀನುಗಳು ಆರೋಗ್ಯಕ್ಕೆ ಒಳ್ಳೆಯದಲ್ಲ, ಅವುಗಳನ್ನು ಸೇವನೆ ಮಾಡುವುದರಿಂದ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ಅಂತಹ ವಿಷಕಾರಿ ಮೀನುಗಳಿಂದ ದೂರವಿದ್ದಷ್ಟು ಒಳ್ಳೆಯದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಹಾಗಾದರೆ ಆ ಮೀನುಗಳು ಯಾವವು? ಯಾಕೆ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬುದನ್ನು ತಿಳಿದುಕೊಳ್ಳಿ.

ಈ ರೀತಿಯ ಮೀನುಗಳು ಆರೋಗ್ಯಕ್ಕೆ ಹಾನಿಕಾರಕ

ಮೀನು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದರೆ ಅವುಗಳಲ್ಲಿ ಕೆಲವು ರೀತಿಯ ಮೀನುಗಳು ನಮ್ಮ ಆರೋಗ್ಯಕ್ಕೆ ಹಾನಿಕಾರಕ ಎಂದು ತಜ್ಞರು ಹೇಳುತ್ತಾರೆ. ಕಿಂಗ್ ಮ್ಯಾಕೆರೆಲ್ ಎನ್ನುವ ಮೀನಿನಲ್ಲಿ ಹೆಚ್ಚಿನ ಮಟ್ಟದ ಪಾದರಸ ಇರುತ್ತದೆ ಎಂದು ಹೇಳಲಾಗುತ್ತದೆ, ಇದು ನರಮಂಡಲದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ವಿಶೇಷವಾಗಿ ಪೆಸಿಫಿಕ್ ಮಹಾಸಾಗರದಲ್ಲಿ ಕಂಡುಬರುವಂತಹ ಈ ಕಿಂಗ್ ಮ್ಯಾಕೆರೆಲ್ ಅನ್ನು ಮಕ್ಕಳು ಮತ್ತು ಗರ್ಭಿಣಿಯರು ಸೇವಿಸಲೇಬಾರದು ಎಂದು ಹೇಳಲಾಗುತ್ತದೆ. ಇವುಗಳನ್ನು ಸೇವನೆ ಮಾಡುವುದರಿಂದ ಮೂತ್ರಪಿಂಡ ಮತ್ತು ನರಮಂಡಲದ ಮೇಲೆ ಪರಿಣಾಮ ಬೀರಬಹುದು. ಬಾಸಾ ಮೀನು ಕೂಡ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುವ ಹಾನಿಕಾರಕ ಕೊಬ್ಬಿನಾಮ್ಲಗಳನ್ನು ಹೊಂದಿದ್ದು ಇವುಗಳ ಸೇವನೆಯಿಂದ ಉಸಿರಾಟದ ತೊಂದರೆಗಳು ಅಥವಾ ಸಂಧಿವಾತ ಸಮಸ್ಯೆ ಮತ್ತಷ್ಟು ಹೆಚ್ಚಾಗುತ್ತದೆ ಹಾಗಾಗಿ ಈ ಮೀನುಗಳಿಂದ ದೂರವಿರುವುದು ಬಹಳ ಉತ್ತಮ.

ಸಾರ್ಡೀನ್‌ ಕೂಡ ಸಾಗರ ಮೀನುಗಳು. ಇವುಗಳಲ್ಲಿ ಹೆಚ್ಚಿನ ಪ್ರಮಾಣದ ಯೂರಿಕ್ ಆಮ್ಲವೂ ಇರುತ್ತದೆ. ಇವುಗಳನ್ನು ಸೇವಿಸುವುದರಿಂದ ಗಂಭೀರ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು ಎಂದು ತಜ್ಞರು ಹೇಳುತ್ತಾರೆ. ಅದರಲ್ಲಿಯೂ ಅತಿಯಾಗಿ ಸೇವನೆ ಮಾಡುವುದರಿಂದ ಮೆದುಳಿನ ಆರೋಗ್ಯಕ್ಕೆ ಹಾನಿಯಾಗುತ್ತದೆ ಎಂದು ಹೇಳಲಾಗುತ್ತದೆ. ಹಾಗಾಗಿ ಇವುಗಳನ್ನು ಚಿಕ್ಕ ಮಕ್ಕಳು ಮತ್ತು ಗರ್ಭಿಣಿಯರಿಗೆ ಯಾವುದೇ ಕಾರಣಕ್ಕೂ ನೀಡಬಾರದು. ಈ ರೀತಿಯ ಮೀನುಗಳಿಂದ ದೂರವಿರಬೇಕು. ಇಲ್ಲವಾದಲ್ಲಿ ಇದು ನರಗಳ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು.


Spread the love
Share:

administrator

Leave a Reply

Your email address will not be published. Required fields are marked *