ಮಹಾರಾಷ್ಟ್ರದ ಈ ಗ್ರಾಮಕ್ಕೆ ಇದೇ ಮೊದಲ ಬಾರಿಗೆ ಬಸ್ ಸೇವೆ

ಮಹಾರಾಷ್ಟ್ರ: ಸ್ವಾತಂತ್ರ್ಯ ನಂತರ ಈವರೆಗೂ ಸಾರ್ವಜನಿಕ ಸಾರಿಗೆ ಬಸ್ ಪ್ರವೇಶ ಇಲ್ಲದ ಮಹಾರಾಷ್ಟ್ರದ ಅಬುಜ್ಮರ್ಹ ತಪ್ಪಲಿನ ಗಡ್ಚಿರೋಲಿ ಜಿಲ್ಲೆಯ ಮರಾಕ್ನರ್ ಎಂಬ ಹಳ್ಳಿಗೆ ಮೊದಲ ಬಾರಿಗೆ ಸಾರಿಗೆ ಬಸ್ ಸೇವೆ ಆರಂಭವಾಗಿದೆ. ಮಹಾರಾಷ್ಟ್ರ ಸಾರಿಗೆ ಸಂಸ್ಥೆಯ ಸಂಘಟಿತ ಪ್ರಯತ್ನದ ಫಲವಾಗಿ ಬುಧವಾರದಿಂದ ಬಸ್ ಸೇವೆ ಆರಂಭವಾಗಿದೆ.

ಮರಾಕ್ನರ್ ಗ್ರಾಮದ ನಿವಾಸಿಗಳು ಸಾರಿಗೆ ಸೇವೆ ಇಲ್ಲದೆ ಬಸ್ ಸಂಪರ್ಕ ಸಾಧಿಸಲು ಹತ್ತಿರದ ಕೋತಿ ಗ್ರಾಮ ತಲುಪಲು 5 ರಿಂದ 6 ತಾಸು ದಟ್ಟವಾದ ಕಾಡಿನಲ್ಲಿ ನಡೆದು ತಲುಪಬೇಕಾಗಿತ್ತು. ಕಳೆದ ವರ್ಷ ಮರಾಕ್ನರ್ವರೆಗೂ ರಸ್ತೆ ನಿರ್ಮಿಸಿದ್ದರೂ ಬಸ್ ಸೇವೆ ಆರಂಭವಾಗಿರಲಿಲ್ಲ, ನಿನ್ನೆ ಬುಧವಾರ ಬಸ್ ಸೇವೆ ಪ್ರಾರಂಭವಾಗಿದ್ಧು, ಹಳ್ಳಿಯ ಜನ ಸಂತೋಷದಿಂದ ಸಂಭ್ರಮಿಸಿದರು.
ವಿದ್ಯಾರ್ಥಿಗಳು, ರೋಗಿಗಳು, ರೈತರು ಸೇರಿದಂತೆ ಸುಮಾರು 1,200ಕ್ಕೂ ಹೆಚ್ಚು ಜನ ಸಾರಿಗೆ ಬಸ್ ಸೇವೆ ಪಡೆಯುವ ಸಾಧ್ಯತೆ ಇದೆ. ಗಡ್ಚಿರೋಲಿ ಪೊಲೀಸರ ಪ್ರಕಾರ, ಮರಾಕ್ನರ್ನಿಂದ ಅಹೇರಿಗೆ ಹೊಸ ಬಸ್ ಮಾರ್ಗವು ಹತ್ತಿರದ ಗ್ರಾಮಗಳಾದ ಮುರುಂಬುಶಿ, ಫುಲಾನಾರ್, ಕೊಪರ್ಶಿ, ಪೊಯಾರ್ಕೋಟಿ ಹಾಗೂ ಗುಂಡುರ್ವಾಹಿ ಗ್ರಾಮದ ಜನರಿಗೂ ಪ್ರಯೋಜನವಾಗಲಿದೆ.
ಮರಾಕ್ನರ್ ಗ್ರಾಮ ನಕ್ಸಲ್ ಪೀಡಿತ ಗ್ರಾಮವಾಗಿದ್ದು ಛತ್ತೀಸ್ಗಡ ಗಡಿಯಿಂದ ಕೇವಲ 6 ಕಿಮೀ ಗಡಿಯಲ್ಲಿದೆ. ಇತ್ತೀಚೆಗೆ ಪೊಲೀಸ್ ಇಲಾಖೆ ಸಮ್ಮುಖದಲ್ಲಿ ಅಭಿವೃದ್ಧಿ ಹೊಂದುತ್ತಿರುವ ಗ್ರಾಮಗಳಲ್ಲಿ ಒಂದಾಗಿದೆ. ಫೆ. 9ರಂದು ಗ್ರಾಮಸ್ಥರು ಮಾವೋವಾದಿಗಳನ್ನ ಬೆಂಬಲಿಸದಿರಲು ಒಮ್ಮತದಿಂದ ನಿರ್ಣಯ ತೆಗೆದುಕೊಂಡಿದ್ದರು
