ಚೆನ್ನೈನಲ್ಲಿ ಮೊದಲ AC ಲೋಕಲ್ ರೈಲು ಸೇವೆ ಪ್ರಾರಂಭ

ಚೆನ್ನೈ:ಹಲವು ನಗರದಲ್ಲಿ ಲೋಕಲ್ ಟ್ರೈನ್ ವ್ಯವಸ್ಥೆ ಇದೆ. ಮುಂಬೈ, ಚೆನ್ನೈ ಸೇರಿದಂತೆ ಭಾರತದ ಪ್ರಮುಖ ನಗರಗಳು ಸ್ಥಳೀಯ ರೈಲು ಸಾರಿಗೆ ಸಂಪರ್ಕವನ್ನು ಉತ್ತಮವಾಗಿ ಬಳಸಿಕೊಳ್ಳುತ್ತಿದೆ. ಇದೀಗ ಭಾರತೀಯ ರೈಲ್ವೇ ಲೋಕಲ್ ಎಸಿ ರೈಲು ಪರಿಟಚಯಿಸುತ್ತಿದೆ. ಇದೀಗ ಚೆನ್ನೈನಲ್ಲಿ ಎಸಿ ಲೋಕಲ್ ಟ್ರೈನ್ ಆರಂಭಗೊಂಡಿದೆ. ಚೆನ್ನೈನಲ್ಲಿ ಟ್ರಾಫಿಕ್ ಕಡಿಮೆ ಮಾಡೋಕೆ ಲೋಕಲ್ ರೈಲುಗಳು ತುಂಬಾ ಉಪಯೋಗ. 5 ರೂಪಾಯಿ ಟಿಕೆಟ್‌ನಲ್ಲಿ ದೂರ ಪ್ರಯಾಣ ಮಾಡಬಹುದು. ಈ ರೈಲು ಚೆನ್ನೈ ಬೀಚ್‌ನಿಂದ ಚೆಂಗಲ್ಪಟ್ಟು, ಚೆನ್ನೈ ಸೆಂಟ್ರಲ್‌ನಿಂದ ಮೂರ್ ಮಾರ್ಕೆಟ್-ತಿರುವಳ್ಳೂರ್-ಅರಕ್ಕೋಣಂ, ಬೀಚ್‌ನಿಂದ ವೇಳಚೇರಿವರೆಗೂ ಓಡಾಡುತ್ತೆ. ಸ್ಕೂಲ್, ಕಾಲೇಜ್ ಹೋಗೋ ಸ್ಟೂಡೆಂಟ್ಸ್, ಆಫೀಸ್‌ಗೆ ಹೋಗೋರು, ವ್ಯಾಪಾರಿಗಳು ಹೀಗೆ ಲಕ್ಷಾಂತರ ಜನ ಈ ರೈಲನ್ನ ಉಪಯೋಗಿಸ್ತಾರೆ. ಚೆನ್ನೈನ ಸುತ್ತಮುತ್ತಲಿನ ಏರಿಯಾಗಳನ್ನ ಕನೆಕ್ಟ್ ಮಾಡೋದ್ರಲ್ಲಿ ಲೋಕಲ್ ರೈಲುಗಳ ಪಾತ್ರ ತುಂಬಾ ಮುಖ್ಯ.

ಆದ್ರೆ ಈ ರೂಟ್‌ನಲ್ಲಿ AC ಇಲ್ಲದ ನಾರ್ಮಲ್ ಲೋಕಲ್ ರೈಲುಗಳೇ ಓಡಾಡುತ್ತಿದೆ. ಹಾಗಾಗಿ ಈ ಮಾರ್ಗಗಳಲ್ಲಿ AC ಲೋಕಲ್ ರೈಲು ಬೇಕು ಅಂತ ಪ್ರಯಾಣಿಕರು ಬಹಳ ದಿನಗಳಿಂದ ಒತ್ತಾಯಿಸಿದ್ದರು ಈಗ ಪ್ರಯಾಣಿಕರ ಕೋರಿಕೆ ಒಪ್ಪಿಕೊಂಡು ಚೆನ್ನೈ ಬೀಚ್ – ಚೆಂಗಲ್ಪಟ್ಟು ರೂಟ್‌ನಲ್ಲಿ AC ಲೋಕಲ್ ರೈಲು ಓಡಾಡಲಿದೆ ಇದಕ್ಕಾಗಿ AC ರೈಲು ರೆಡಿ ಮಾಡಿ ಈ ಮೊದಲು ಟ್ರಯಲ್ ರನ್ ಮಾಡಲಾಗಿದೆ.
ಚೆನ್ನೈನಲ್ಲಿ ಮೊದಲ ಬಾರಿಗೆ EMU AC Train Chennai – Chengalpattu
ಈಗ ತಮಿಳುನಾಡಿನ ಮೊದಲ AC ಲೋಕಲ್ ರೈಲು ಪ್ರಯಾಣಿಕರಿಗೆ ಸಿಗಲಿದೆ. ಬಿಸಿಲು ತುಂಬಾ ಇರೋದ್ರಿಂದ ACಯಲ್ಲಿ ಪ್ರಯಾಣ ಮಾಡೋಕೆ ಜನ ಆಸಕ್ತಿ ತೋರಿಸ್ತಾರೆ ಅಂತ ಅಂದುಕೊಳ್ಳಬಹುದು.
ಟಿಕೆಟ್ ಬೆಲೆ
ಚೆನ್ನೈ ಫೋರ್ಟ್, ಚೆನ್ನೈ ಪಾರ್ಕ್, ಎಗ್ಮೋರ್ ₹35, ಮಾಂಬಲಂ ₹40, ಗಿಂಡಿ, ಪರಂಗಿಮಲೈ, ತಿರುಸೂಲಂ ₹60, ತಾಂಬರಂ, ಪೆರುಂಗಳತ್ತೂರ್ ₹85, ಕೂಡುವಾಂಚೇರಿ ₹90, ಸಿಂಗಪೆರುಮಾಳ್ ಕೋಯಿಲ್ ₹100, ಪರನೂರ್, ಚೆಂಗಲ್ಪಟ್ಟು ₹105 ಟಿಕೆಟ್ ಬೆಲೆ ನಿಗದಿ ಮಾಡಿದ್ದಾರೆ.
EMU AC Train Chennai – Chengalpattu ಟೈಮಿಂಗ್ಸ್
ಚೆನ್ನೈ ಬೀಚ್‌ನಿಂದ ಬೆಳಿಗ್ಗೆ 7 ಗಂಟೆ, ಮಧ್ಯಾಹ್ನ 3.45, ರಾತ್ರಿ 7.35ಕ್ಕೆ AC ರೈಲು ಚೆಂಗಲ್ಪಟ್ಟುಗೆ ಹೋಗುತ್ತೆ. ಚೆಂಗಲ್ಪಟ್ಟುನಿಂದ ಬೆಳಿಗ್ಗೆ 9, ಸಾಯಂಕಾಲ 5.45, ತಾಂಬರಂನಿಂದ ಬೆಳಿಗ್ಗೆ 5.45ಕ್ಕೆ AC ರೈಲು ಚೆನ್ನೈ ಬೀಚ್‌ಗೆ ಬರುತ್ತೆ.
