Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಸೇನಾ ಶಿಬಿರದಲ್ಲಿ ಗುಂಡಿನ ದಾಳಿ: ಜೆಸಿಒ ಹುತಾತ್ಮ

Spread the love

ಜಮ್ಮು- ಕಾಶ್ಮೀರದ ಸಾಂಬಾ ಜಿಲ್ಲೆಯ ಸೇನಾ ಶಿಬಿರದೊಳಗೆ ನಡೆದ ಗುಂಡಿನ ದಾಳಿಯಲ್ಲಿ ಸೇನೆಯ ಜೂನಿಯರ್ ಕಮಿಷನ್ಡ್ ಆಫೀಸರ್ (JCO) ಒಬ್ಬರು ಹುತಾತ್ಮರಾಗಿದ್ದಾರೆ ಎಂದು ರಕ್ಷಣಾ ವಕ್ತಾರರು ಬುಧವಾರ ತಿಳಿಸಿದ್ದಾರೆ.

ಈ ಘಟನೆ ನಿನ್ನೆ ತಡರಾತ್ರಿ ನಡೆದಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಗುಂಡಿನ ದಾಳಿಯ ಹಿಂದೆ ಯಾವುದೇ ಭಯೋತ್ಪಾದಕ ಕೃತ್ಯದ ಸಾಧ್ಯತೆಯನ್ನು ತಳ್ಳಿಹಾಕಿದ್ದಾರೆ.

ಸಾಂಬಾದಲ್ಲಿರುವ ಸೇನಾ ಘಟಕದ ಜೆಸಿಒ ಒಬ್ಬರು ಜಮ್ಮುವಿನಲ್ಲಿ ಕರ್ತವ್ಯದಲ್ಲಿದ್ದಾಗ ಗುಂಡೇಟಿನಿಂದ ತೀವ್ರವಾಗಿ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಹುತಾತ್ಮರಾಗಿದ್ದಾರೆ. ಈ ಹಂತದಲ್ಲಿ, ಭಯೋತ್ಪಾದಕ ಕೃತ್ಯದ ಶಂಕೆಯನ್ನು ತಳ್ಳಿಹಾಕಿದ್ದೇವೆ ಎಂದರು.

ಘಟನೆ ತನಿಖೆ ಹಂತದಲ್ಲಿದೆ ಎಂದು ವಕ್ತಾರರು ತಿಳಿಸಿದ್ದಾರೆ


Spread the love
Share:

administrator

Leave a Reply

Your email address will not be published. Required fields are marked *