300 ಜನರ ದೋಣಿಗೆ ಹತ್ತಿತು ಬೆಂಕಿ –ಜೀವ ರಕ್ಷಣೆಗೆ ಸಮುದ್ರಕ್ಕೆ ಹಾರಿದ ಪ್ರಯಾಣಿಕರು

ಇಂಡೋನೇಷ್ಯಾದ ಉತ್ತರ ಸುಲವೇಸಿಯಲ್ಲಿರುವ ತಾಲಿಸ್ ದ್ವೀಪದ ಬಳಿ ಇಂದು (20) ಮನಾಡೊ ಬಂದರಿಗೆ ಹೋಗಲು, ಸುಮಾರು 300 ಜನರನ್ನು ಹೊತ್ತೊಯ್ಯುತ್ತಿದ್ದ ದೋಣಿಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಕನಿಷ್ಠ ಐದು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ಬೆಂಕಿಯಿಂದ ಪಾರಾಗಲು ಕೆಲವು ಪ್ರಯಾಣಿಕರು ಸಮುದ್ರಕ್ಕೆ ಹಾರಿದ್ದು, ಅನೇಕರು ಕೆಎಂ ಬಾರ್ಸಿಲೋನಾ ವಿಎ ಹೆಸರಿನ ದೋಣಿಯಲ್ಲಿ ಸಿಲುಕಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಘಟನೆಯಲ್ಲಿ 150 ಜನರನ್ನು ರಕ್ಷಿಸಲಾಗಿದ್ದು, ಅವರನ್ನು ರಕ್ಷಣಾ ಸಿಬ್ಬಂದಿ ಮತ್ತು ಸ್ಥಳೀಯ ಮೀನುಗಾರಿಕಾ ದೋಣಿಗಳ ಜಂಟಿ ತಂಡವು ರಕ್ಷಣೆ ಮಾಡಿದೆ. ರಕ್ಷಣಾ ಕಾರ್ಯಾಚರಣೆಗಳು ಇನ್ನೂ ಮುಂದುವರೆದಿದ್ದು, ನಾಪತ್ತೆಯಾದ ಇತರೆ ಪ್ರಯಾಣಿಕರನ್ನು ಪತ್ತೆಹಚ್ಚಲು ಕಾರ್ಯಾಚರಣೆ ಮುಂದುವರೆದಿದೆ.
