ಶಾರ್ಟ್ ಸರ್ಕ್ಯೂಟ್‌ನಿಂದ ವಸತಿಗೃಹದಲ್ಲಿ ಬೆಂಕಿ ಅವಘಡ; ಅನೇಕ ಉಪಕರಣಗಳು ಧ್ವಂಸ

ಮಂಗಳೂರು : ನಗರದ ಬಂದರು ಪ್ರದೇಶದ ವಸತಿಗೃಹವೊಂದರಲ್ಲಿ ಶನಿವಾರ ಅಗ್ನಿ ಅವಘಡ ಸಂಭವಿಸಿ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ. ವ್ಯಕ್ತಿಯೋರ್ವರು ವಸತಿಗೃಹದ ಎರಡನೇ ಮಹಡಿಯಲ್ಲಿ ಕೊಠಡಿ ಪಡೆದಿದ್ದರು. ಮಧ್ಯಾಹ್ನ ವೇಳೆ ಲಾಕ್ ಮಾಡಿ ಹೊರಗೆ ಹೋಗಿದ್ದರು. ಸಂಜೆ ಕೊಠಡಿಯಲ್ಲಿ ಹೊಗೆ ಕಂಡುಬಂದಿದೆ ಅಗ್ನಿಶಾಮಕ ದಳದವರು ಬಂದು ನೋಡಿದಾಗ ಟಿ.ವಿ., ಹಾಸಿಗೆ, ಪೀಠೊಪಕರಣಗಳು ಸುಟ್ಟು ಹೋಗಿವೆ. ಎಸಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಉಂಟಾಗಿರಬಹುದೆಂದು ಅಗ್ನಿಶಾಮಕ ದಳದವರು ಅಂದಾಜಿಸಿದ್ದಾರೆ.
