ಚಿತ್ರ ನಿರ್ದೇಶಕ ಸನೋಜ್ ಮಿಶ್ರಾ ಅತ್ಯಾಚಾರ ಆರೋಪದಲ್ಲಿ ಬಂಧನ

ದೆಹಲಿ : ಚಿತ್ರನಿರ್ದೇಶಕ ಸನೋಜ್ ಮಿಶ್ರಾ ಅತ್ಯಾಚಾರ ಪ್ರಕರಣದಲ್ಲಿ ಬಂಧನ
ಘಜ್ನವಿ, ಶ್ರೀನಗರ, ಶಶಾಂಕ್ ಸಿನಿಮಾಗಳ ನಿರ್ದೇಶಕ ಸನೋಜ್ ಮಿಶ್ರಾ ಅವರನ್ನು ನಬಿ ಕರೀಂ ಪೊಲೀಸರು ಅತ್ಯಾಚಾರ ಪ್ರಕರಣದಲ್ಲಿ ಬಂಧಿಸಿದ್ದಾರೆ. 28 ವರ್ಷದ ಆಕಾಂಕ್ಷ ನಟಿಯೊಬ್ಬರಿಗೆ ಚಿತ್ರದಲ್ಲಿ ಅವಕಾಶ ನೀಡುವ ನೆಪದಲ್ಲಿ ದೌರ್ಜನ್ಯ ಎಸಗಿದ ಆರೋಪ ಮಿಶ್ರಾ ವಿರುದ್ಧ ಕೇಳಿಬಂದಿದೆ.
“ಡೈರಿ ಆಫ್ ವೆಸ್ಟ್ ಬಂಗಾಳ” ಸಿನಿಮಾದಲ್ಲಿ “ಮಹಾ ಕುಂಭ” ವೈರಲ್ ಗರ್ಲ್ ಮೋನಾಲಿಸಾ ಭೋನ್ಸ್ಲೆ ಗೆ ಪಾತ್ರದ ಆಫರ್ ನೀಡಿದ್ದ ಮಿಶ್ರಾ ಈಗ ಅತ್ಯಾಚಾರ, ಹಲ್ಲೆ ಮತ್ತು ಬೆದರಿಕೆ ಆರೋಪಗಳಡಿ ಎಫ್ಐಆರ್ ಎದುರಿಸುತ್ತಿದ್ದಾರೆ.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಮಿಶ್ರಾ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.