‘ನಾಚಿಕೆಗೇಡು ದಾಳಿ’ ಎಂದ ಫವಾದ್ ಖಾನ್ – ಭಾರತದ ಸೆಲೆಬ್ರಿಟಿಗಳಿಂದ ತೀವ್ರ ವಿರೋಧ

ಪಾಕಿಸ್ತಾನ: ಪಾಕ್ ನಟ ಫವಾದ್ ಖಾನ್ ಅವರು ಭಾರತದ ಸಿನಿಮಾಗಳಲ್ಲಿ ನಟಿಸಿ ಫೇಮಸ್ ಆಗಿದ್ದಾರೆ. ಭಾರತದಲ್ಲಿ ಅವರಿಗೆ ಅಭಿಮಾನಿಗಳು ಇದ್ದಾರೆ. ಆದರೆ ಭಾರತ ಮತ್ತು ಪಾಕಿಸ್ತಾನ ನಡುವೆ ಯುದ್ಧದ ವಾತಾವರಣ ನಿರ್ಮಾಣ ಆಗಿರುವುದರಿಂದ ಪಾಕ್ ನಟರನ್ನು ಭಾರತದಲ್ಲಿ ಬ್ಯಾನ್ ಮಾಡಲಾಗಿದೆ.

ಸದ್ಯ ಆಗುತ್ತಿರುವ ಘಟನೆಗಳ ಬಗ್ಗೆ ಎರಡೂ ದೇಶದ ಸೆಲೆಬ್ರಿಟಿಗಳು ಪ್ರತಿಕ್ರಿಯೆ ನೀಡುತ್ತಿದ್ದಾರೆ. ಭಾರತ ನಡೆಸಿದ ‘ಆಪರೇಷನ್ ಸಿಂದೂರ್’ ಬಗ್ಗೆ ಫವಾದ್ ಖಾನ್ ಅವರು ಹೇಳಿಕೆ ನೀಡಿದ್ದು, ಅವರ ಮಾತಿಗೆ ಭಾರತದಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.
ಪಹಲ್ಗಾಮ್ನಲ್ಲಿ ಉಗ್ರರು ಅಮಾಯಕರ ಪ್ರಾಣವನ್ನು ಬಲಿ ತೆಗೆದುಕೊಂಡರು. ಅದಕ್ಕೆ ಪ್ರತಿಯಾಗಿ ಪಾಕಿಸ್ತಾನದ ಉಗ್ರರ ನೆಲೆಯ ಮೇಲೆ ಭಾರತ ದಾಳಿ ಮಾಡಿತು. ‘ಆಪರೇಷನ್ ಸಿಂದೂರ್’ ಹೆಸರಿನಲ್ಲಿ ನಡೆದ ಈ ದಾಳಿಯನ್ನು ಫವಾದ್ ಖಾನ್ ಖಂಡಿಸಿದ್ದಾರೆ. ‘ಎಕ್ಸ್’ ಖಾತೆಯಲ್ಲಿ ಅವರು ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.
‘ನಾಚಿಕೆಗೇಡು ದಾಳಿಯಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬದವರಿಗೆ ನನ್ನ ಸಂತಾಪಗಳು. ಮಡಿದವರಿಗಾಗಿ ನಾನು ಪ್ರಾರ್ಥಿಸುತ್ತೇನೆ. ಅವರ ಕುಟುಂಬಕ್ಕೆ ನೋವು ಭರಿಸುವ ಶಕ್ತಿ ಸಿಗಲಿ. ಉರಿಯುವ ಬೆಂಕಿಗೆ ತುಪ್ಪ ಸುರಿಯಬೇಡಿ ಅಂತ ನಾನು ಎಲ್ಲರಲ್ಲೂ ಪ್ರಾರ್ಥಿಸುತ್ತೇನೆ’ ಎಂದು ಫವಾದ್ ಖಾನ್ ಟ್ವೀಟ್ ಮಾಡಿದ್ದರು.
ಫವಾದ್ ಖಾನ್ ಅವರು ‘ನಾಚಿಕೆಗೇಡು ದಾಳಿ’ ಎಂದು ಹೇಳಿದ್ದರಿಂದ ಭಾರತದ ಸೆಲೆಬ್ರಿಟಿಗಳು ಅವರಿಗೆ ಛೀಮಾರಿ ಹಾಕುತ್ತಿದ್ದಾರೆ. ‘ನಿನ್ನಂಥವರು ಭಾರತದ ಸಿನಿಮಾದಲ್ಲಿ ಕೆಲಸ ಮಾಡಿದ್ದು ನಾಚಿಕೆಗೇಡು’ ಎಂದು ನಟಿ ರೂಪಾಲಿ ಗಂಗೂಲಿ ಅವರು ತಿರುಗೇಟು ನೀಡಿದ್ದಾರೆ. ಅದೇ ರೀತಿ ನೆಟ್ಟಿಗರು ಕೂಡ ಫವಾದ್ ಖಾನ್ಗೆ ಛೀಮಾರಿ ಹಾಕಿದ್ದಾರೆ.
[
