ಮಗನನ್ನು ಶಾಲೆಗೆ ಕಳುಹಿಸಲು ತಂದೆಯ ತಂತ್ರ: ವಿಡಿಯೋ ವೈರಲ್

ಈ ಮಕ್ಕಳಿಗೆ ಹೋಮ್ ವರ್ಕ್ ಮಾಡಿಸುವುದು, ಬೆಳಗ್ಗೆ ಎಬ್ಬಿಸಿ ರೆಡಿ ಮಾಡಿ ಶಾಲೆಗೆ ಕಳುಹಿಸುವುದು ಅಮ್ಮಂದಿರ ಕಷ್ಟದ ಕೆಲಸ. ಈ ಪುಟಾಣಿಗಳು ಶಾಲೆಗೆ ಹೋಗಲ್ಲ ಎಂದು ಬೆಳ್ಳಗೆ ಅಳುತ್ತಾ ಕುಳಿತುಕೊಂಡರೆ ಹೆತ್ತವರ ಕಥೆ ಮುಗಿದೇ ಹೋಯ್ತು. ಅಮ್ಮಂದಿರಂತೂ ಸಮಾಧಾನ ಪಡಿಸಿ, ಟಿಫನ್ ಬಾಕ್ಸ್ ಗೆ ಫೇವರಿಟ್ ತಿಂಡಿಯನ್ನೇ ಮಾಡಿ ಶಾಲೆಗೆ ಕಳಿಸುತ್ತಾರೆ. ಆದರೆ ಇಲ್ಲೊಬ್ಬ ತಂದೆ (father) ಮಾತ್ರ ತಮ್ಮ ಮಗನನ್ನು ಶಾಲೆಗೆ ಕಳುಹಿಸಿದ ರೀತಿ ಮಾತ್ರ ವಿಭಿನ್ನ. ಅದೇಗೋ ಉಪಾಯ ಮಾಡಿ ಮಗನನ್ನು ಶಾಲಾ ಬಸ್ ಹತ್ತಿಸುವಲ್ಲಿ ಯಶಸ್ವಿಯಾಗಿದ್ದಾನೆ. ಈ ವಿಡಿಯೋ ಸದ್ಯ ಸಖತ್ ವೈರಲ್ ಆಗುತ್ತಿದೆ.

internetgoldcomments ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಳ್ಳಲಾದ ಈ ವಿಡಿಯೋದಲ್ಲಿ ಅಪ್ಪ ಹಾಗೂ ಮಗ ಪಾದಚಾರಿ ಮಾರ್ಗದಲ್ಲಿ ನಡೆದುಕೊಂಡು ಹೋಗುವುದನ್ನು ನೀವು ನೋಡಬಹುದು. ಆದರೆ ತಂದೆಯೂ ತನ್ನ ಮುದ್ದಿನ ಮಗನನ್ನು ಶಾಲೆಗೆ ಕಳುಹಿಸಲು ಉಪಾಯದಿಂದ ಮಾಡಿದ ಪ್ಲ್ಯಾನ್ ಇದಾಗಿದೆ. ಪ್ರಾರಂಭದಲ್ಲಿ ತಂದೆಯು ಪಾದಚಾರಿ ಮಾರ್ಗದಲ್ಲಿ ಸುಮ್ಮನೆ ನಡೆದುಕೊಂಡು ಹೋಗಿದ್ದು, ಮಗನು ತನ್ನ ಅಪ್ಪನನ್ನು ಹಿಂಬಾಲಿಸಿಕೊಂಡು ಹೋಗುವುದನ್ನು ಕಾಣಬಹುದು.
ಆದರೆ ಕೆಲವು ಕೆಲವು ಕ್ಷಣಗಳಲ್ಲಿ ತಂದೆ ದಾರಿಯನ್ನು ಬದಲಾಯಿಸುತ್ತಾ ರಸ್ತೆಯ ಕಡೆಗೆ ಹೋಗಿದ್ದು, ಮಗನು ತಂದೆಯ ಹಿಂದೆಯೇ ಹೋಗಿದ್ದಾನೆ. ಆ ವೇಳೆಯೇ ಶಾಲಾ ಬಸ್ ಬಂದಿದ್ದು, ತಕ್ಷಣವೇ ತನ್ನ ಮಗನನ್ನು ಬಸ್ಸಿನೊಳಗೆ ಕೂರಿಸಿದ್ದಾನೆ. ವಾಸ್ತವ ಸ್ಥಿತಿ ಅರ್ಥ ಮಾಡಿಕೊಳ್ಳುವುದರಲ್ಲಿ ಪುಟಾಣಿ ಶಾಲಾ ಬಸ್ ನಲ್ಲಿ ಕುಳಿತಾಗಿದೆ.
ಈ ವಿಡಿಯೋ ಸದ್ಯಕ್ಕೆ ವೈರಲ್ ಆಗುತ್ತಿದ್ದಂತೆ ಇದುವರೆಗೆ 3.3 ಮಿಲಿಯನ್ ಗೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು ಬಳಕೆದಾರರೊಬ್ಬರು, ಇಂತಹ ಐಡಿಯಾಗಳು ಖತರ್ನಾಕ್ ಅಪ್ಪಂದಿರಿಗೆ ಮಾತ್ರ ಹೊಳೆಯೋದು ಎಂದಿದ್ದಾರೆ. ಇನ್ನೊಬ್ಬರು, ನಾವೆಲ್ಲಾ ಅಪ್ಪಂದಿರಿಗೆ ಭಯ ಪಡುತ್ತಿದ್ದೆವು, ಆದರೆ ಇಗ ಕಾಲ ಬದಲಾಗಿದೆ. ಅಪ್ಪ ಹಾಗೂ ಮಕ್ಕಳು ಸ್ನೇಹಿತರಂತೆ ಇರುವುದನ್ನು ಕಾಣಬಹುದು ಎಂದು ಹೇಳಿದ್ದಾರೆ. ಅಯ್ಯೋ ದೇವ್ರೇ, ಇದನ್ನೂ ಮಾತ್ರ ಊಹಿಸಿರಲಿಲ್ಲ ಎಂದು ಮತ್ತೊಬ್ಬ ಬಳಕೆದಾರ ಕಾಮೆಂಟ್ ಮಾಡಿದ್ದಾರೆ.
