ಸ್ವಂತ ಮಗಳಿಗೆ ಅತ್ಯಾ*ಚಾರ ಮಾಡಿ ಮದುವೆಯಾಗಿದ್ದ ತಂದೆಗೆ ಜೀವಾವಧಿ ಶಿಕ್ಷೆ

ಲಕ್ನೋ: ಅತ್ಯಾಚಾರ ಮಾಡಿ ಮಗಳನ್ನು ಮದುವೆಯಾಗಿದ್ದ ದುಷ್ಟ ತಂದೆಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ನೀಡಿ ತೀರ್ಪು ಪ್ರಕಟಿಸಿದೆ. ಉತ್ತರ ಪ್ರದೇಶದ ಫಿರೋಜಾಬಾದ್ ಮೂಲದ 51 ವರ್ಷದ ವ್ಯಕ್ತಿ ಶಿಕ್ಷೆಗೆ ಒಳಗಾಗಿದ್ದಾನೆ. ಮಗಳು 12 ವರ್ಷದವಳಾಗಿದ್ದಲೇ ಆಕೆ ಮೇಲೆ ಅತ್ಯಾಚಾರ ಮಾಡಿದ್ದನು.

ಮಗಳು ಗರ್ಭಿಣಿಯಾದ ವಿಷಯ ತಿಳಿಯುತ್ತಿದ್ದಂತೆ ಆಕೆಯನ್ನು ಮದುವೆಯಾಗುತ್ತಾನೆ. ಸಂತ್ರಸ್ತೆ 2014ರಲ್ಲಿ ಮಗುವಿಗೆ ಜನ್ಮ ನೀಡಿದ್ದಾಳೆ. ಇದೀಗ ನ್ಯಾಯಾಲಯ ಅಪರಾಧಿ ತಂದೆಗೆ 71 ಸಾವಿರ ರೂ. ದಂಡ ವಿಧಿಸಿ, ಜೀವಾವಧಿ ಶಿಕ್ಷ ನೀಡಿ ಆದೇಶಿಸಿದೆ.
ದೂರು ದಾಖಲಿಸುವ ವೇಳೆ ಸಂತ್ರಸ್ತೆ ವಯಸ್ಕ
ಈ ಪ್ರಕರಣದ ಕುರಿತು ಮಾತನಾಡಿರುವ ಎಡಿಜಿಸಿ ಮನೋಜ್ ಕುಮಾರ್, ಸಂತ್ರಸ್ತೆ ತನ್ನ ತಾಯಿಯೊಂದಿಗೆ ಪೊಲೀಸ್ ಠಾಣೆಗೆ ಆಗಮಿಸಿ ದೂರು ದಾಖಲಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. 3ನೇ ಮೇ 2019ರಂದು ದೋಷಿಯ ಪತ್ನಿ ಮತ್ತು ಮಗಳು ದೂರು ದಾಖಲಿಸಿದ್ದರು. ದೂರಿನ ಅನ್ವಯ ಐಪಿಸಿ ಸೆಕ್ಷನ್ 376, 323 ಮತ್ತು 506ರ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಸಂತ್ರಸ್ತೆ ದೂರು ದಾಖಲಿಸುವ ಸಂದರ್ಭದಲ್ಲಿ ವಯಸ್ಕಳಾಗಿದ್ದ ಕಾರಣ ಪೋಕ್ಸೋ ಅಡಿ ಕೇಸ್ ದಾಖಲಾಗಿರಲಿಲ್ಲ ಎಂದು ಹೇಳಿದ್ದಾರೆ.
ನ್ಯಾಯಾಧೀಶರ ಮುಂದೆ CrPC 164 ಹೇಳಿಕೆ ದಾಖಲಿಸಿದ್ದ ಸಂತ್ರಸ್ತೆ
ಸಂತ್ರಸ್ತೆ ನ್ಯಾಯಾಧೀಶರ ಮುಂದೆ ಹಾಜರಾಗಿ CrPC 164 ಹೇಳಿಕೆಯನ್ನು ದಾಖಲಿಸಿದ್ದರು. ನಾನು 12 ವರ್ಷದವಳಾಗಿದ್ದ (ಅಂದ್ರೆ 2012ರಲ್ಲಿ) ತಂದೆ ನನ್ನ ಮೇಲೆ ಅತ್ಯಾಚಾರ ಮಾಡಲು ಆರಂಭಿಸಿದ್ದರು. 2014 ಏಪ್ರಿಲ್‌ನಲ್ಲಿ ತಂದೆಯೇ ನನ್ನನ್ನು ಮದುವೆಯಾದರು. ನಂತರ ನಾನು ಮಗುವಿಗೆ ಜನ್ಮ ನೀಡಿದೆ. ಇದಾದ ಬಳಿಕ ಮತ್ತೆ ನನ್ನ ಮೇಲೆ ಅತ್ಯಾಚಾರ ಮಾಡಲು ಪ್ರಯತ್ನಿಸಿದರು. ಕೊನೆಗೆ ಇದಕ್ಕೆಲ್ಲಾ ಪೂರ್ಣವಿರಾಮ ಇಡಬೇಕೆಂದು ನಿರ್ಧರಿಸಿ ದೂರು ದಾಖಲಿಸಿದ್ದೆ ಎಂದು ಸಂತ್ರಸ್ತೆ ತನ್ನ ಹೇಳಿಕೆಯನ್ನು ದಾಖಲಿಸಿದ್ದರು.
2019 ಸೆಪ್ಟೆಂಬರ್ ಚಾರ್ಜ್‌ಶೀಟ್ ಸಲ್ಲಿಕೆ
ಸಂತ್ರಸ್ತೆ ಹೇಳಿಕೆಯನ್ನು ದಾಖಲಾದ ಬಳಿಕ ಪೊಲೀಸರು ಕಾಮುಕ ತಂದೆಯನ್ನು ಬಂಧಿಸಿ ತನಿಖೆ ಆರಂಭಿಸಿದ್ದರು. ಟೆಕ್ನಿಕಲ್ ಸಾಕ್ಷ್ಯ, ತಾಯಿಯ ಹೇಳಿಕೆ, ವೈದ್ಯಕೀಯ ವರದಿ ಸಂಗ್ರಹಿಸಿದ ಪೊಲೀಸರು 2019 ಸೆಪ್ಟೆಂಬರ್‌ನಲ್ಲಿ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದ್ದರು.
ಕಾಮುಕ ತಂದೆ, ತನ್ನ ಮೇಲೆ ಮಾಡಲಾಗಿರುವ ಎಲ್ಲಾ ಆರೋಪಗಳು ಸುಳ್ಳು ಎಂದು ಹೇಳಿಕೆ ನೀಡಿದ್ದನು. ಕುಟುಂಬದ ಸದಸ್ಯರು ನನ್ನನ್ನು ವಿರೋಧಿಸುತ್ತಾರೆ. ಹಾಗಾಗಿ ನನ್ನ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಲಾಗಿದೆ. ಮಗಳು ಮದುವೆಗೂ ಮುಂಚೆಯೇ ಆಕೆಯ ಗಂಡನಿಂದ ಸಂಬಂಧ ಹೊಂದಿದ್ದಳು. ಆ ಆಕ್ರಮ ಸಂಬಂಧಕ್ಕೆ ಆಕೆಯ ಮಗುವೇ ಸಾಕ್ಷಿ ಎಂದಿದ್ದನು.
ನ್ಯಾಯಾಲಯ ಹೇಳಿದ್ದೇನು?
ಪ್ರಕರಣದ ವಿಚಾರಣೆ ನಡೆಸಿದ್ದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಶ್ಯಾಮ್ ಬಾಬು ಅವರು, ನ್ಯಾಯಾಲಯವು ಪೊಲೀಸ್ ತನಿಖಾ ವರದಿ, ವೈದ್ಯಕೀಯ ವರದಿಗಳು ಮತ್ತು ಎಲ್ಲಾ ಸಾಕ್ಷ್ಯಗಳನ್ನು ಪರಿಗಣಿಸುತ್ತದೆ ಎಂದು ಆರೋಪಿಯ ಮನವಿಯನ್ನು ತಿರಸ್ಕರಿಸಿದ್ದರು. ಕಾಮುಕ ತಂದೆಯನ್ನು ಅಪರಾಧಿ ಎಂದು ಘೋಷಿಸಿದ ಬಳಿಕ ಶುಕ್ರವಾರ ಶಿಕ್ಷೆ ಪ್ರಕಟ ಮಾಡಿದೆ. ಅಪರಾಧಿ ಶಿಕ್ಷೆಯನ್ನು ಪಾವತಿಸಲು ವಿಫಲವಾದರೆ, ಅವನು ಹೆಚ್ಚುವರಿ ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ ನ್ಯಾಯಾಲಯ ಹೇಳಿದೆ.
