ಶಿವರಾತ್ರಿಗೆ ಮನೆ ಬಂದ ಮಗಳು, ಅಳಿಯನ ಮೇಲೆ ತಂದೆಯ ಚಾಕು ದಾಳಿ; ತಾನು ವಿಷ ಸೇವಿಸಿದ ಘಟನೆ

ಶಿರಸಿ: ಶಿವರಾತ್ರಿ ಹಬ್ಬಕ್ಕೆ ಮನೆಗೆ ಬಂದಿದ್ದ ಮಗಳು, ಅಳಿಯನಿಗೆ ಚಾಕು ಇರಿದ ತಂದೆ ಬಳಿಕ ತಾನೂ ವಿಷ ಸೇವಿಸಿದ ಘಟನೆ ತಾಲೂಕಿನ ದಾಸನಕೊಪ್ಪ ರಂಗಾಪುರದಲ್ಲಿ ಫೆ. 26ರ ಬುಧವಾರ ನಡೆದಿದೆ.

ಮಗಳು ಕವನ ಹಾಗೂ ಅಳಿಯ ಮನೋಜ ಕಮಾಟಿ ಎಂಬವರ ಮೇಲೆ ಚಾಕು ಇರಿದ ತಂದೆ ಶಂಕರ ಹನುಮಂತ ಕಮ್ಮಾರ ಬದನಗೋಡು (53) ತಾನೂ ವಿಷ ಸೇವಿಸಿದ್ದಾನೆ.
ಮಗಳು ಕವನ ಶಿರಸಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ಹೆಚ್ಚಿನ ಚಿಕಿತ್ಸೆಗಾಗಿ ತಂದೆಯನ್ನ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಳಿಯ ಸಣ್ಣಪುಟ್ಟ ಗಾಯಗಳಿಂದ ಪರಾಗಿದ್ದಾರೆ.
ಕವನ ತನ್ನ ಮನೆಯವರಿಗೆ ಮನಸ್ಸಿಲ್ಲದೇ ಇದ್ದರೂ ಮದುವೆ ಆಗಿದ್ದಳು. ಗರ್ಭಿಣಿಯಾಗಿದ್ದ ಮಗಳು ಶಿವರಾತ್ರಿ ಹಬ್ಬಕ್ಕೆಂದು ಮನೆಗೆ ಬಂದ ಸಂದರ್ಭ ಮಗಳು ಹಾಗೂ ಅಳಿಯನ ಮೇಲೆ ತಂದೆ ಚಾಕುವಿನಿಂದ ದಾಳಿ ನಡೆಸಿದ್ದಾನೆ.
ಸಿಪಿಐ ಶಶಿಕಾಂತ ವರ್ಮಾ ಮಾರ್ಗದರ್ಶನದಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.