Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಮಗನ ನೆನಪಲ್ಲಿ 6 ಕೋಟಿ ಮೌಲ್ಯದ ಬಿಎಂಡಬ್ಲ್ಯೂ ಕಾರು ಸಮಾಧಿ ಮಾಡಿದ ತಂದೆ!

Spread the love

ಮಾಸ್ಕೋ: ಪುತ್ರನ ಸಾವಿನ ಶೋಕದಲ್ಲಿದ್ದ ತಂದೆ ಆತನಿಗೆ ಬರ್ತ್‌ಡೇ ಗಿಫ್ಟ್‌ ಆಗಿ ನೀಡಿದ್ದ 6 ಕೋಟಿ ರೂ. ಮೌಲ್ಯದ ಬಿಎಂಡಬ್ಲ್ಯೂ ಕಾರನ್ನು (BMW Car) ಸಮಾಧಿ ಮಾಡಿರುವ ಘಟನೆ ಮಾಸ್ಕೋದಲ್ಲಿ (Moscow) ನಡೆದಿದೆ.
ಈ ಭಾವನಾತ್ಮಕ ದೃಶ್ಯದ ವೀಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ವ್ಯಕ್ತಿಯ ಈ ನಿರ್ಧಾರದ ಬಗ್ಗೆ ಪರ-ವಿರೋಧದ ಕಾಮೆಂಟ್‌ಗಳು ಹರಿದುಬರುತ್ತಿವೆ. ತಂದೆ ತನ್ನ ಮಗನಿಗೆ ಬರ್ತ್‌ಡೇ ಗಿಫ್ಟ್‌ ಆಗಿ ಬಿಎಂಡಬ್ಲ್ಯೂ ಕಾರು ನೀಡಿದ್ದರು. ಆದರೆ, ಕೆಲವೇ ದಿನಗಳ ನಂತರ ಮಗ ಮೃತಪಟ್ಟಿದ್ದಾನೆ. ಆ ಕಾರು ನೋಡಿದಾಗಲೆಲ್ಲ ಪುತ್ರನ ನೆನೆದು ತಂದೆ ಶೋಕಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಕಾರನ್ನು ಸಮಾಧಿ ಮಾಡಿದ್ದಾರೆ.ವ್ಯಕ್ತಿಯ ನಡೆಗೆ ಅನೇಕ ನೆಟ್ಟಿಗರು ವಿರೋಧ ವ್ಯಕ್ತಪಡಿಸಿದ್ದಾರೆ. ‘ಆ ಕಾರನ್ನು ಮಾರಿ ಬಂದ ಹಣವನ್ನು ಯಾವುದಾದರು ದತ್ತಿ ಸಂಸ್ಥೆಗಳಿಗೆ ನೀಡಬಹುದಿತ್ತು’ ಎಂದು ಕೆಲವರು ಹೇಳಿದ್ದಾರೆ. ‘ಕಾರನ್ನು ಮಾರಾಟ ಮಾಡಿ ಆ ಹಣವನ್ನು ನಿರ್ಗತಿಕರಿಗೆ ದಾನ ಮಾಡಬಹುದಿತ್ತು’ ಎಂದು ಇನ್ನೂ ಕೆಲವರು ಕಾಮೆಂಟ್‌ ಮಾಡಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *