ದೇವಾಲಯಕ್ಕೆ ಹೋಗುತ್ತಿದ್ದ ತಂದೆ-ಮಗಳು ಹಿಟ್ ಆ್ಯಂಡ್ ರನ್‌ಗೆ ಬಲಿ

ಬಾಗಲಕೋಟೆ: ಹಿಟ್ ಆ್ಯಂಡ್ ರನ್‌ಗೆ ತಂದೆ ಮತ್ತು ಮಗಳು ಸ್ಥಳದಲ್ಲೇ ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯ ಬಾದಾಮಿ ತಾಲೂಕಿನ ಕುಳಗೇರಿ ಕ್ರಾಸ್ ಬಳಿ ನಡೆದಿದೆ. ಅಪರಿಚಿತ ವಾಹನ ಡಿಕ್ಕಿಯಾಗಿ ಬಸವರಾಜ ಬಂಡಿವಡ್ಡರ್(26) ಮತ್ತಿ ಹುಲಿಗೆಮ್ಮ(3) ಮೃತಪಟ್ಟಿದ್ದಾರೆ. ತಂದೆ, ಮಗಳು ಹಳಗೇರಿ ಆಂಜನೇಯ ದೇವಸ್ಥಾನಕ್ಕೆ ಹೊರಟಿದ್ದಾಗ ದುರಂತ ಸಂಭವಿಸಿದೆ. ಘಟನಾ ಸ್ಥಳಕ್ಕೆ ಬಾದಾಮಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.