Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಮಗುವಿನ ಮೇಲೆ ಮಲಗಿದ ತಂದೆ:ಹೈದರಾಬಾದ್‌ನಲ್ಲಿ ಹೃದಯವಿದ್ರಾವಕ ಘಟನೆ

Spread the love

ಹೈದರಾಬಾದ್: ನಿದ್ದೆ ಮಬ್ಬಲ್ಲಿ ತಂದೆಯೋರ್ವ ತನ್ನ ಮಗುವಿನ ಮೇಲೆ ಮಲಗಿದ ಕಾರಣ 28 ದಿನಗಳ ಹೆಣ್ಣು ಮಗು ಉಸಿರುಗಟ್ಟಿ ಸಾವನ್ನಪ್ಪಿದ ಘಟನೆ ಹೈದರಾಬಾದ್ನಲ್ಲಿ ನಡೆದಿದೆ. ಸುಭಾಷ್‌ನಗರ ಕಾಲೋನಿಯ ನಿವಾಸಿಗಳಾದ ಶೇಖರ್ ಮತ್ತು ಸುಜಾತಾ ದಂಪತಿಗೆ ಮಗು ಜನಿಸಿತ್ತು. ಮಗು ಜನಿಸಿದಾಗಿನಿಂದ, ಶೇಖರ್ ಆಗಾಗ್ಗೆ ಕುಡಿದು ಮನೆಗೆ ಬರುತ್ತಿದ್ದ ಎಂದು ಹೇಳಲಾಗುತ್ತಿದೆ.

ಮಂಗಳವಾರ ಬೆಳಗ್ಗೆ 5 ಗಂಟೆ ಸುಮಾರಿಗೆ, ಸುಜಾತಾ ಮತ್ತು ಮಗು ಮಲಗಿದ್ದ ಮಲಗುವ ಕೋಣೆಗೆ ಹೋದ ತಂದೆ, ಮಗುವಿನ ಇರುವುದು ಗೊತ್ತಿದ್ದರೂ ಹಾಸಿಗೆಯ ಮೇಲೆ ಮಲಗಿದ್ದಾನೆ.

ಮರುದಿನ ಬೆಳಗ್ಗೆ, ಮಗು ರಾಜೇಶ್ವರಿಯನ್ನು ಎಬ್ಬಿಸಲು ಪ್ರಯತ್ನಿಸಿದರೂ ಎಚ್ಚರವಾಗಲಿಲ್ಲ. ನಂತರ ತಾಯಿ ಸುಜಾತಾ ಎದ್ದು ನೋಡಿದಾಗ ಮಗುವಿನ ಮೂಗಿನಿಂದ ರಕ್ತ ಬರುತ್ತಿರುವುದನ್ನು ಗಮನಿಸಿದ್ದಾಳೆ. ಜೊತೆಗೆ ಕಿವಿ ಮತ್ತು ಕುತ್ತಿಗೆಯ ಸುತ್ತಲೂ ಊತವೂ ಇತ್ತು. ಆಗ್ಲೇ ಹೆಣ್ಣು ಮಗು ಮೃತಪಟ್ಟಿರುವುದು ದೃಢಪಟ್ಟಿತ್ತು.

ತಾಯಿ ಸುಜಾತಾ ಅಲ್ಲೆಪು ರಾಜಮಣಿ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ ಮಗು ಉಸಿರುಗಟ್ಟಿ ಸಾವನ್ನಪ್ಪಿದೆ ಎಂದು ತಿಳಿದುಬಂದಿದೆ.


Spread the love
Share:

administrator

Leave a Reply

Your email address will not be published. Required fields are marked *