Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

‘ಫರ್ಜಿ’ ವೆಬ್ ಸರಣಿ ಪೋಷಕ ನಟ ಮಾದಕವಸ್ತು ಜಾಲದಲ್ಲಿ ಬಂಧನ

Spread the love

ಜನಪ್ರಿಯ ವೆಬ್ ಸರಣಿಗಳಾದ ‘ದಿ ಫ್ಯಾಮಿಲಿ ಮ್ಯಾನ್’ ಮತ್ತು ‘ಫರ್ಜಿ’ಯಲ್ಲಿ ಪೋಷಕ ಪಾತ್ರಗಳನ್ನು ನಿರ್ವಹಿಸಿದ್ದ ನಟ ಮಾನ್ ಸಿಂಗ್ ನನ್ನು ಎಂಡಿಎಂಎ (MDMA) ಮಾದಕವಸ್ತು ಕಳ್ಳಸಾಗಣೆ ಜಾಲಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಮಾದಕವಸ್ತು ವಿರೋಧಿ ಕಾರ್ಯಪಡೆ (UP ANTF) ಬಂಧಿಸಿದೆ. NDPS ಕಾಯ್ದೆಯಡಿ ಆಗ್ರಾದ ನ್ಯೂ ಆಗ್ರಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವೊಂದರಲ್ಲಿ ಸುಮಾರು ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ಈತನನ್ನು, ಡಿಸೆಂಬರ್ 11ರಂದು ಮುಂಬೈನಲ್ಲಿ ಬಂಧಿಸಿ ಆಗ್ರಾಕ್ಕೆ ಕರೆತರಲಾಗಿದೆ. ತಾನು ಮೂಲತಃ ದೆಹಲಿಯ ರಾಜೌರಿ ಗಾರ್ಡನ್ ನಿವಾಸಿ ಎಂದು ವಿಚಾರಣೆ ವೇಳೆ ಮಾನ್ ಸಿಂಗ್ ಹೇಳಿದ್ದು, ಮುಂಬೈನಲ್ಲಿ ಮಾದಕವಸ್ತು ಕಳ್ಳಸಾಗಣೆಯಲ್ಲಿ ತೊಡಗಿದ್ದ ವ್ಯಕ್ತಿಯ ಸಂಪರ್ಕ ಬೆಳೆಸಿಕೊಂಡು, ತನ್ನ ಸಹಚರರೊಂದಿಗೆ ಸೇರಿ ಆಗ್ರಾದಲ್ಲಿ ಇನ್ನೊಬ್ಬ ವ್ಯಕ್ತಿಗೆ ಹಲವು ಬಾರಿ ಎಂಡಿಎಂಎ ಪೂರೈಕೆ ಮಾಡಿದ್ದಾನೆ ಎಂಬ ಆರೋಪವಿದೆ. ಈತನ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯ ವಿವಿಧ ಕಲಂಗಳಡಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.


Spread the love
Share:

administrator

Leave a Reply

Your email address will not be published. Required fields are marked *