ಕಬ್ಬು ದರಕ್ಕಾಗಿ ರೈತರ ಪಟ್ಟು: ಬೆಳಗಾವಿಯಲ್ಲಿ ಸಚಿವ ಹೆಚ್.ಕೆ. ಪಾಟೀಲ್ ಜೊತೆಗಿನ ಮಾತುಕತೆ ವಿಫಲ; ಮಾತುಕತೆ ಮುರಿದುಬಿದ್ದು ಶುಕ್ರವಾರಕ್ಕೆ ಡೆಡ್‌ಲೈನ್!

ಬೆಳಗಾವಿ: ಕಬ್ಬು ಬೆಲೆ ನಿಗದಿಗಾಗಿ ಬೆಳಗಾವಿಯ (Belagavi) ಗುರ್ಲಾಪೂರದಲ್ಲಿ ನಡೆಯುತ್ತಿರುವ ಪ್ರತಿಭಟನಾನಿರತ ರೈತ (Farmers) ಮುಖಂಡರೊಂದಿಗಿನ ಸಚಿವ ಎಚ್ ಕೆ ಪಾಟೀಲ್ (Sugarcane Farmers) ಮಾತುಕತೆ ಮುರಿದುಬಿದ್ದಿದೆ.

ಸರ್ಕಾರ ಹಾಗೂ ರೈತರ ಜೊತೆಗೆ ಸರಿಸುಮಾರು ಒಂದೂವರೆ ಗಂಟೆಗಳ ಸಂಧಾನ ವಿಫಲವಾಗಿದೆ. ಗುರುವಾರ ಸಂಜೆ 5 ಗಂಟೆಯವರೆಗೆ ಅಂತಿಮ ಹಂತದ ಗಡುವು ನೀಡಿದ್ದು ಒಂದು ವೇಳೆ ನಮ್ಮ ಬೇಡಿಕೆ ಇಡೇರದಿದ್ದರೆ ಶುಕ್ರವಾರ 7 ನೇ ತಾರೀಖಿನಂದು 50 ಲಕ್ಷ ರೈತ ಹೋರಾಟಗಾರರದಿಗೆ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ಮಾಡುತ್ತೇವೆ. ಪಂಜಾಬ್ ಮಾದರಿಯಲ್ಲ, ಗುರ್ಲಾಪೂರ ಮಾದರಿಯೊಂದಿಗೆ ಪ್ರತಿಭಟನೆ ಮಾಡಲಾಗುವುದು ಎಂದು ರೈತ ಮುಖಂಡ ಶಶಿಕಾಂತ ಗುರುಜಿ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ
ಇಂದು ಏನಾಯ್ತು?
ಹೆಚ್‌ಕೆ ಪಾಟೀಲ್ (HK Patel) ಮಾತನಾಡಿ, ಮುಖ್ಯಮಂತ್ರಿಗಳು ಜವಾಬ್ದಾರಿ ನೀಡಿ ಇಲ್ಲಿಗೆ ಕಳಿಸಿದ್ದಾರೆ. ನಿಮ್ಮಲ್ಲಿ 10-20 ರೈತರು-ಹೋರಾಟಗಾರರು ನಾಳೆ ಸಂಜೆ 6 ಗಂಟೆಗೆ ಬೆಂಗಳೂರಿಗೆ ಬನ್ನಿ, ಸಿಎಂ ಬಳಿ ಮಾತಾಡೋಣ. 7ನೇ ತಾರೀಖು 2 ಗಂಟೆಯೊಳಗೆ ನಿಮ್ಮ ಬೇಡಿಕೆಗೆ ಸರ್ಕಾರ ಪರಿಹಾರ ನೀಡುತ್ತದೆ. ನಿಮ್ಮ ಪರ ವಕೀಲನಾಗಿ ಸಿಎಂ ಮುಂದೆ ಮಾತನಾಡುತ್ತೇನೆ ಎಂದರು. ಇದನ್ನೂ ಓದಿ: ಕಬ್ಬು ಬೆಳೆಗಾರರ ಪ್ರತಿಭಟನೆ ಯಾಕೆ? ಮಹಾರಾಷ್ಟ್ರ, ಗುಜರಾತ್‌ನಲ್ಲಿ 1 ಟನ್ ಕಬ್ಬಿಗೆ ಎಷ್ಟು ಸಿಗುತ್ತೆ?
ಇದಕ್ಕೆ ಉತ್ತರಿಸಿದ ರೈತರು ನಾವು ಬೆಂಗಳೂರಿಗೆ ಬರುವುದಿಲ್ಲ. ನಾಳೆ ಸಂಜೆ ತನಕ ಡೆಡ್‌ಲೈನ್. ನಮ್ಮ ಪರವಾಗಿ ಡಿಸಿ-ಎಸ್‌ಪಿಯವರನ್ನು ಕರೆದು ನಿರ್ಧಾರ ಅಂತಿಮಗೊಳಿಸಿ ಅಂತ ಪಟ್ಟು ಹಿಡಿದರು. ಸಚಿವರ ಕಾರ್‌ಗೆ ಅಡ್ಡಲಾಗಿ ಮಲಗಿದರು
ಇದಕ್ಕೂ ಮುನ್ನ ಕೊರೆಯುವ ಚಳಿಯಲ್ಲೂ ಪ್ರತಿಭಟನೆ ಮುಂದುವರಿಸಿದ್ದರು. ರಸ್ತೆಯಲ್ಲಿಯೇ ಊಟ, ನಿದ್ದೆ ನಡೆಯುತ್ತಿದೆ. ಮೈಮೇಲೆ ಒಂದು ಟನ್ ಕಬ್ಬಿಗೆ ಮೂರೂವರೆ ಸಾವಿರ ಬೆಲೆ ನಿಗದಿ ಮಾಡಿ ಎಂಬ ಬರವಣಿಗೆ ಮೂಲಕ, ಬಾಯಿ ಬಾಯಿ ಬಡಿದುಕೊಳ್ಳುವ ಮೂಲಕ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಅರೆ ಬೆತ್ತಲೆ ಹೋರಾಟಕ್ಕಿಳಿದಿರುವ ರೈತರಿಗೆ ಜಿಲ್ಲೆಯ ವಿವಿಧ ಆಸ್ಪತ್ರೆಗಳ ವೈದ್ಯರು ಸಾಥ್ ನೀಡಿದ್ದಾರೆ. ಅಥಣಿ ಪಟ್ಟಣದಲ್ಲಿ ರೈತರು ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಪ್ರತಿಕೃತಿಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದರು ಬೆಳಗಾವಿ, ಚಿಕ್ಕೋಡಿ, ವಿಜಯಪುರ ಭಾಗದಲ್ಲೂ ರೈತರ ಕಿಚ್ಚು ಜೋರಾಗಿದೆ. ಹೋರಾಗಾರರಿಗೆ ಬಿಜೆಪಿಗರು, ಕರವೇ ಕಾರ್ಯಕರ್ತರೂ ಸಾಥ್ ಕೊಟ್ಟಿದ್ದಾರೆ. ನಾಳೆ ಕ್ಯಾಬಿನೆಟ್‌ನಲ್ಲಿ ಚರ್ಚೆ ಆಗುವ ಸಾಧ್ಯತೆ ಹೆಚ್ಚಿದೆ.