Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಲವ್ ಜಿಹಾದ್ ಆರೋಪಕ್ಕೆ ಫರ್ಮಾನ್ ತಿರುಗೇಟು: ಮದುವೆ ಹಾಗೂ ವೈರಲ್ ವಿಡಿಯೋದ ಅಸಲಿ ಸತ್ಯ ಬಹಿರಂಗ

Spread the love

ಕುಂಭಮೇಳದ ವೈರಲ್ ಹುಡುಗಿ ಮೊನಾಲಿಸಾ ಇತ್ತೀಚಿಗೆ ಪೋಷಕರ ವಿರೋಧದ ನಡುವೆಯೂ ಫರ್ಮಾನ್ ಖಾನ್ ಅವರನ್ನು ವಿವಾಹವಾದರು. ಇದನ್ನು ಕೆಲವರು ಲವ್ ಜಿಹಾದ್ ಎಂದು ಕರೆಯುತ್ತಿದ್ದಾರೆ.. ಆದರೆ ಈ ಜೋಡಿ ಮಾತ್ರ ತಾವು ಪರಸ್ಪರ ಪ್ರೀತಿಸುತ್ತಿರುವುದಾಗಿ ಹೇಳಿಕೊಂಡಿದ್ದು, ಧರ್ಮವನ್ನು ಬದಲಾಯಿಸಲಿಲ್ಲ ಎಂದು ಸ್ಪಷ್ಟ ಪಡಿಸಿದೆ..

ಹೌದು.. ಮೊನಾಲಿಸಾ ಅವರ ಪತಿ ಫರ್ಮಾನ್ ಖಾನ್ ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇದರಲ್ಲಿ ಅವರು ಕಲರ್‌ ಪಂಚೆ ಧರಿಸಿ ರೋಡ್‌ನಲ್ಲಿ ತೂರಾಡುತ್ತಿರುವುದನ್ನು ಕಾಣಬಹುದು. ಈ ವಿಡಿಯೋ ನೋಡಿ ಎಲ್ಲರೂ ಶಾಕ್ ಆಗಿದ್ದಾರೆ.

ವೀಡಿಯೊದಲ್ಲಿ, ಫರ್ಮಾನ್ ಕೆದರಿದ ಕೂದಲು, ಹರಿದ ಬಟ್ಟೆಗಳು ಧರಿಸಿದ್ದಾರೆ. ಅಲ್ಲದೆ, ಅವರ ಕೈಕಾಲುಗಳು ಮುರಿದಿದ್ದು, ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾರೆ. ಅಲ್ಲದೆ, ಕಂಬಕ್ಕೆ ತಲೆಗೆ ಹೊಡೆದುಕೊಳ್ಳುವುದನ್ನೂ ಸಹ ನೀವು ನೋಡಬಹುದು. ಒಟ್ಟಾರೆಯಾಗಿ, ನೋಡಲು ಮಾನಸಿಕ ಅಸ್ವಸ್ಥನಂತೆ ಕಾಣುತ್ತಿದ್ದಾರೆ..

ಈ ವಿಡಿಯೋವನ್ನು ಫರ್ಮಾನ್ ಖಾನ್ ಇನ್‌ಸ್ಟಾಗ್ರಾಮ್ ಖಾತೆಯಿಂದ ಪೋಸ್ಟ್ ಮಾಡಲಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ಈ ವಿಡಿಯೋ ಹಳೆಯದು ಎನ್ನಲಾಗಿದೆ. ನವೆಂಬರ್ 4, 2025 ರಂದು ಶೇರ್‌ ಮಾಡಲಾಗಿದೆ. ಸಿನಿಮಾವೊಂದರಲ್ಲಿ ಫರ್ಮಾನ್ ಪ್ರೀತಿಯಲ್ಲಿ ಮೋಸ ಹೋಗಿ ಮಾನಸಿಕ ಸಮತೋಲನ ಕಳೆದುಕೊಂಡ ವ್ಯಕ್ತಿಯ ಪಾತ್ರದಲ್ಲಿ ನಟಿಸಿದ್ದರು. ಅದರ ರೀಲ್‌ ಅನ್ನು ಹಂಚಿಕೊಂಡಿದ್ದರು. ಮಾಹಿತಿಯ ಪ್ರಕಾರ, ಫರ್ಮಾನ್‌ ಒರ್ವ ನಟನಾಗಿದ್ದು, ಅನೇಕ ದಕ್ಷಿಣ ಮತ್ತು ಭೋಜ್‌ಪುರಿ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.

ಲವ್‌ ಜಿಹಾದ್‌ ಅಲ್ಲ : ಈ ಜೋಡಿಗಳ ಮದುವೆಗೆ ಲವ್ ಜಿಹಾದ್ ಸಮಸ್ಯೆ ಅಂಟಿಕೊಂಡಿದೆ. ಈ ಆರೋಪಗಳಿಗೆ ಫರ್ಮಾನ್ ತೀಕ್ಷ್ಣವಾದಪ ಪ್ರತಿಕ್ರಿಯೆ ನೀಡಿದ್ದು, ನನಗೆ, ಎಲ್ಲಾ ಧರ್ಮಗಳು ಸಮಾನ. ನಾನು ತಪ್ಪು ಮಾಡಬೇಕೆಂದಿದ್ದರೆ, ಹಿಂದೂ ರೀತಿಯಲ್ಲಿ ಅದು ದೇವಾಲಯದಲ್ಲಿ ಏಕೆ ಮದುವೆಯಾಗುತ್ತಿದ್ದೆ? ಮೊನಾಲಿಸಾ ಹಿಂದೂ ಧರ್ಮವನ್ನು ಅನುಸರಿಸುತ್ತಾಳೆ, ನಾನು ನನ್ನ ಮುಸ್ಲಿಂ ಧರ್ಮವನ್ನು ಅನುಸರಿಸುತ್ತೇನೆ ಎಂದು ಹೇಳಿಕೊಂಡಿದ್ದಾರೆ..


Spread the love
Share:

administrator

Leave a Reply

Your email address will not be published. Required fields are marked *