ಬೆಂಗಳೂರು ಮೆಟ್ರೋ ಪ್ರಯಾಣಿಕರಿಗೆ ದರ ಏರಿಕೆ ಶಾಕ್: ಫೆಬ್ರವರಿಯಿಂದ ಶೇ. 5ರಷ್ಟು ಟಿಕೆಟ್ ದರ ಹೆಚ್ಚಳಕ್ಕೆ BMRCL ಸಿದ್ಧತೆ!

ಬೆಂಗಳೂರು: ಮತ್ತೆ ಬೆಂಗಳೂರಿನ ನಮ್ಮ ಮೆಟ್ರೋ ದರ ಏರಿಕೆಯಾಗುವ ಸಾಧ್ಯತೆಯಿದೆ. ಫೆಬ್ರವರಿಯಿಂದ ನಮ್ಮ ಮೆಟ್ರೋ (Namma Metro) ದರವನ್ನು ಏರಿಕೆ ಮಾಡಲು ಬೆಂಗಳೂರು ಮೆಟ್ರೋ ರೈಲ್ ಕಾರ್ಪೋರೇಷನ್ ಲಿಮಿಟೆಡ್ (BMRCL) ಮುಂದಾಗಿದೆ.


ಹೌದು. 2025 ರಲ್ಲಿ 71% ದರವನ್ನು ಏರಿಕೆ ಮಾಡಲಾಗಿತ್ತು. ಆದರೆ ಈಗ 5% ದರ ಏರಿಕೆಗೆ ಸಿದ್ಧತೆ ನಡೆಯುತ್ತಿದೆ. ಶುಲ್ಕ ನಿಗದಿ ಸಮಿತಿ (FFC) ಪ್ರತಿ ವರ್ಷ ಟಿಕೆಟ್ ಶುಲ್ಕದಲ್ಲಿ 5% ರಷ್ಟು ಹೆಚ್ಚಳವನ್ನು ಸೂಚಿಸಿದ ಕಾರಣ ಏರಿಕೆಯಾಗಲಿದೆ

ಮೆಟ್ರೋ ರೈಲು ನಿರ್ವಹಣೆ ಕಾಯ್ದೆ 2002 ರ 33 ರ ಅಡಿಯಲ್ಲಿ ಕಾನೂನುಬದ್ಧವಾಗಿ ಬದ್ಧವಾಗಿರುವ FFC ಯ ಶಿಫಾರಸುಗಳ ಆಧಾರದ ಮೇಲೆ ಪ್ರತಿ ವರ್ಷ ದರ ಏರಿಕೆ ಮಾಡಲು ಅವಕಾಶವಿದೆ
ಕಳೆದ ವರ್ಷ 71% ದರವನ್ನು ಏರಿಕೆ ಮಾಡಿ ಜನರ ಕೆಂಗಣ್ಣಿಗೆ ಗುರಿಯಾಗಿ ದೇಶದ ಅತ್ಯಂತ ದುಬಾರಿ ಸೇವೆ ನೀಡುವ ಸಂಸ್ಥೆಯಾಗಿ ಹೊರಹೊಮ್ಮಿತ್ತು.