ವಿವಾಹವಾದ ಹತ್ತು ದಿನಕ್ಕೇ ಪ್ರಾಣ ಕಳೆದುಕೊಂಡ ಖ್ಯಾತ ಫುಟ್ಬಾಲ್ ತಾರೆ

ಇಂಗ್ಲೆಂಡ್ನ ಲಿವರ್ಪೂಲ್ ಫುಟ್ಬಾಲ್ ಕ್ಲಬ್ನ ಪ್ರಮುಖ ಆಟಗಾರ ಹಾಗೂ ಪೋರ್ಚುಗಲ್ ರಾಷ್ಟ್ರೀಯ ತಂಡದ ಫಾರ್ವರ್ಡ್ ಆಟಗಾರ ಡಿಯೋಗೊ ಜೋಟಾ(28) ಅವರು ಸ್ಪೇನ್ನ ಝಮೋರಾ ಪ್ರಾಂತ್ಯದಲ್ಲಿ ನಡೆದ ಭೀಕರ ಕಾರು ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಈ ದುರಂತದಲ್ಲಿ ಅವರ ಸಹೋದರ ಆಂಡ್ರೆ ಸಿಲ್ವಾ (26) ಕೂಡ ಪ್ರಾಣ ಕಳೆದುಕೊಂಡಿದ್ದಾರೆ.


ಹತ್ತು ದಿನಗಳ ಹಿಂದೆ ವಿವಾಹ
ಈ ಘಟನೆಯಾಗುವುದಕ್ಕೆ ಕೇವಲ 10 ದಿನಗಳ ಮೊದಲು ಡಿಯಾಗೋ ಜೋಟಾ ತಮ್ಮ ಬಹುಕಾಲದ ಗೆಳತಿ ರೂಟ್ ಕಾರ್ಡೊಸೊ ಅವರೊಂದಿಗಿನ ವಿವಾಹವಾಗಿದ್ದರು. ಸದ್ಯ ವಿವಾಹವಾಗಿ ಕೇವಲ 10 ದಿನದಲ್ಲಿ ಅವರು ನಿಧನರಾಗಿರುವುದು ಅವರ ಕುಟುಂಬಕ್ಕೆ ಇನ್ನಷ್ಟು ದುಃಖಕ್ಕೆ ಕಾರಣವಾಗಿದೆ.
28 ಡಿಯೋಗೊ ಜೋಟಾ ತಮ್ಮ ಫುಟ್ಬಾಲ್ ವೃತ್ತಿಜೀವನದಲ್ಲಿ ಅತ್ಯಂತ ಪ್ರತಿಭಾವಂತ ಆಟಗಾರರಾಗಿ ಗುರುತಿಸಿಕೊಂಡಿದ್ದರು. ಲಿವರ್ಪೂಲ್ ತಂಡದಲ್ಲಿ ಫಾರ್ವರ್ಡ್ ಆಟಗಾರನಾಗಿ ಆಡುತ್ತಿದ್ದರು. ತಮ್ಮ ವೇಗ, ಚತುರತೆ ಮತ್ತು ಗೋಲು ಗಳಿಕೆಯ ಕೌಶಲ್ಯದಿಂದ ಫುಟ್ಬಾಲ್ ಅಭಿಮಾನಿಗಳ ಹೃದಯದಲ್ಲಿ ಸ್ಥಾನ ಪಡೆದಿದ್ದರು. ಅವರು 2020 ರಲ್ಲಿ ವೋಲ್ವರ್ಹ್ಯಾಂಪ್ಟನ್ ವಾಂಡರರ್ಸ್ನಿಂದ ಲಿವರ್ಪೂಲ್ಗೆ ಸೇರಿಕೊಂಡಿದ್ದರು ಮತ್ತು ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಪೋರ್ಚುಗಲ್ ರಾಷ್ಟ್ರೀಯ ತಂಡದಲ್ಲೂ ಜೋಟಾ ತಮ್ಮ ಕೊಡುಗೆಯಿಂದ ಗಮನ ಸೆಳೆದಿದ್ದರು.
