ನಕಲಿ ಐಪಿಎಸ್ ಅಧಿಕಾರಿ ಬಂಧನ: ಐಜಿ ಸಮವಸ್ತ್ರ, ನೀಲಿ ಬೀಕನ್ ಕಾರು ವಶ

ಅಲ್ವಾರ್: ಹಿರಿಯ ಐಪಿಎಸ್ ಅಧಿಕಾರಿ ರೀತಿ ಪೊಲೀಸ್ ಡ್ರೇಸ್ ಮತ್ತು ಕಾರಿನಲ್ಲಿ ಮೂರು ಸ್ಟಾರ್ ಗಳನ್ನು ಹಾಕಿಕೊಂಡು ತಿರುಗಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಬಂಧಿತನನ್ನು ಪಶ್ಚಿಮ ಬಂಗಾಳದ ನಿವಾಸಿ ಸುಪ್ರಿಯೋ ಮುಖರ್ಜಿ ಎಂದು ಗುರುತಿಸಲಾಗಿದೆ. ಬಂಧಿತನಿಂದ ನೀಲಿ ಬೀಕನ್, ಏರ್ ರಿವಾಲ್ವರ್, ಏರ್ ಪಿಸ್ತೂಲ್ ಮತ್ತು ಎರಡು ಏರ್ ರೈಫಲ್ಗಳನ್ನು ಹೊಂದಿರುವ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಭರತ್ಪುರ ವಲಯದ ಐಜಿ ಕೈಲಾಶ್ ಚಂದ್ರ ಬಿಷ್ಣೋಯ್ ಮತ್ತು ಧೋಲ್ಪುರ ಪೊಲೀಸ್ ವರಿಷ್ಠಾಧಿಕಾರಿ ವಿಕಾಸ್ ಸಂಗ್ವಾನ್ ಅವರ ನಿರ್ದೇಶನದ ಮೇರೆಗೆ, ಸದರ್ ಪೊಲೀಸ್ ಠಾಣೆ ಬಳಿಯ ಆಗ್ರಾ-ಮುಂಬೈ ರಾಷ್ಟ್ರೀಯ ಹೆದ್ದಾರಿಯ ಸಮೀಪ ಸ್ಥಳೀಯ ಪೊಲೀಸರು ಚೆಕ್-ಪೋಸ್ಟ್ ಸ್ಥಾಪಿಸಿದ್ದಾರೆ.
ಈ ವೇಳೆ ನೀಲಿ ಬೀಕನ್ ಹೊಂದಿರುವ ವಾಹನವು ಅತಿ ವೇಗವಾಗಿ ಬರುತ್ತಿದೆ ಮತ್ತು ಅನುಮಾನಾಸ್ಪದ ವ್ಯಕ್ತಿಗಳನ್ನು ಹೊಂದಿರಬಹುದು ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿತು ಎಂದು ಸಿಂಗ್ ಹೇಳಿದರು. ಪೊಲೀಸರು ಕಾರನ್ನು ತಡೆದರು, ಅದರಲ್ಲಿ ತ್ರೀ ಸ್ಟಾರ್ ಹೊಂದಿರುವ ಐಜಿ ರ್ಯಾಂಕ್ ಪೊಲೀಸ್ ಸಮವಸ್ತ್ರದಲ್ಲಿದ್ದ ವ್ಯಕ್ತಿಯೊಬ್ಬರು ಚಲಾಯಿಸುತ್ತಿದ್ದರು. ಪೊಲೀಸರು ಕಾರನ್ನು ತಡೆದು ವಿಚಾರಣೆ ನಡೆಸಿದ ವೇಳೆ ಇವರು ನಕಲಿ ಐಪಿಎಸ್ ಅಧಿಕಾರಿ ಎಂದು ತಿಳಿದು ಬಂದಿದೆ. ಬಳಿಕ ಆರೋಪಿಯನ್ನು ಅರೆಸ್ಟ್ ಮಾಡಿದ ಪೊಲೀಸರು ಆರೋಪಿಯ ಕಾರಿನಲ್ಲಿದ್ದ ಒಂದು ಏರ್ ಪಿಸ್ತೂಲ್, ಒಂದು ಏರ್ ರಿವಾಲ್ವರ್, ಎರಡು ಏರ್ ರೈಫಲ್ಗಳು, 138 ಏರ್ ಕಾರ್ಟ್ರಿಡ್ಜ್ಗಳು, ಎರಡು ಮೊಬೈಲ್ ಫೋನ್ಗಳು, ಎರಡು ಲ್ಯಾಪ್ಟಾಪ್ಗಳು, ಒಂದು ಟ್ಯಾಬ್ಲೆಟ್ ಮತ್ತು ನಾಲ್ಕು ವಿಭಿನ್ನ ಫೋಟೋ ಗುರುತಿನ ಚೀಟಿಗಳನ್ನು ಕಂಡುಕೊಂಡರು ಎಂದು ಅವರು ಹೇಳಿದರು.
ಆರೋಪಿಗಳು ಪ್ರಭಾವ ಬೀರಲು, ಟೋಲ್ ತೆರಿಗೆಯನ್ನು ತಪ್ಪಿಸಲು ಮತ್ತು ಚೆಕ್-ಪಾಯಿಂಟ್ಗಳನ್ನು ತಪ್ಪಿಸಲು ಸಮವಸ್ತ್ರವನ್ನು ಬಳಸಿದ್ದಾರೆ ಎಂದು SHO ಹೇಳಿದರು
