Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ನಕಲಿ ಬಂಗಾರ ನೀಡಿ ಲಕ್ಷಾಂತರ ವಂಚನೆ:ಆರೋಪಿ ಬಂಧನ

Spread the love

ಹೊಳೆಹೊನ್ನೂರು: ನಕಲಿ ಬಂಗಾರ ನೀಡಿ ಲಕ್ಷಾಂತರ ವಂಚಿಸಿದ್ದ ಆರೋಪ ಸಂಬಂಧ ರಾಮಪ್ಪ ಅಲಿಯಾಸ್‌ ಬೆಂಕಿ ರಾಮಪ್ಪ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಚನ್ನಗಿರಿ ತಾಲ್ಲೂಕಿನ ಸಂತೇಬೆನ್ನೂರಿನ ರಾಮಪ್ಪ ವಿಜಯನಗರ ಜಿಲ್ಲೆಯ ಹೊಸಪೇಟೆಯ ನಿವಾಸಿ ರಾಜೇಶ್ ಅವರಿಗೆ ಸುರೇಶ್ ಎಂದು ಪರಿಚಯಿಸಿಕೊಂಡಿದ್ದ.

ನಂತರ, ಕಾಮಗಾರಿ ವೇಳೆ ನನಗೆ ಬಂಗಾರ ಸಿಕ್ಕಿದೆ. ಅದನ್ನು ನಿಮಗೆ ಮಾರಾಟ ಮಾಡುತ್ತೇನೆ ಎಂದು ಅವರನ್ನು ನಂಬಿಸಿದ್ದ ಎಂದು ಪೊಲೀಸ್‌ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಬಂಗಾರ ಕೊಡುವುದಾಗಿ ಹೇಳಿ ಹೊಳೆಹೊನ್ನೂರಿಗೆ ಬರಲು ತಿಳಿಸಿದ್ದ. ಬಳಿಕ ನಕಲಿ ಬಂಗಾರ ನೀಡಿ 4 ಲಕ್ಷ ರೂ. ಪಡೆದಿದ್ದ. ಈ ಸಂಬಂಧ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿ ರಾಮಪ್ಪನನ್ನು ಬಂಧಿಸಿದ ಪೊಲೀಸರು, 3.08 ಲಕ್ಷ ರೂ. ಹಣ ವಶಪಡಿಸಿಕೊಂಡಿದ್ದಾರೆ.

ಸಿಪಿಐ ಲಕ್ಷ್ಮೀಪತಿ ನೇತೃತ್ವದಲ್ಲಿ ಸಬ್ ಇನ್‌ಸ್ಪೆಕ್ಟರ್‌ಗಳಾದ ಮಂಜುನಾಥ್ ಎಸ್.ಕುರಿ, ಸಿಬ್ಬಂದಿ ಎಚ್.ಸಿ. ಅಣ್ಣಪ್ಪ, ಪ್ರಕಾಶ್ ನಾಯ್ಕ್, ಮಂಜುನಾಥ್, ಪ್ರಸನ್ನ, ವಿಶ್ವನಾಥ್ ಅವರ ತಂಡ ಆರೋಪಿ ಬಂಧನ ಕಾರ್ಯಾಚರಣೆ ನಡೆಸಿತ್ತು.


Spread the love
Share:

administrator

Leave a Reply

Your email address will not be published. Required fields are marked *