ನಕಲಿ ವೈದ್ಯನ ನಿಜಮುಖ: ಅಪ್ರಾಪ್ತೆಯ ಮೇಲಿನ ದೌರ್ಜನ್ಯಕ್ಕೆ ನಾಗರಹಾವು ಅಸ್ತ್ರ

ಕೋಟಾ: ಮನೆಯಲ್ಲಿ ಅಕ್ರಮವಾಗಿ ಇರಿಸಿದ್ದ ನಾಗರಹಾವನ್ನು ತೋರಿಸಿ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ, ಜನರನ್ನು ವಂಚಿಸಿದ ಆರೋಪದ ಮೇಲೆ 29 ವರ್ಷದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ರಾಜಸ್ಥಾನದ ಕೋಟಾದಲ್ಲಿ ಉತ್ತರ ಪ್ರದೇಶದ ಝಾನ್ಸಿ ಮೂಲದ ಮೊಹಮ್ಮದ್ ಇಮ್ರಾನ್ (29) ಎಂಬಾತ ಅಕ್ರಮವಾಗಿ ನಾಗರಹಾವು ಇರಿಸಿಕೊಂಡಿದ್ದೂ ಅಲ್ಲದೇ ಆ ಹಾವನ್ನು ತೋರಿಸಿ ತನ್ನದೇ ಅಪ್ರಾಪ್ತ ಸೊಸೆಗೆ ಬೆದರಿಸಿ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ.
ಅಲ್ಲದೆ ಅಪ್ರಾಪ್ತೆಯ ತಂದೆಗೆ 1.36 ಲಕ್ಷ ರೂ.ಗಳನ್ನು ವಂಚಿಸಿದ್ದಾನೆ ಎಂದು ಕೋಟಾ ನಗರ ಎಸ್ಪಿ ಅಮೃತಾ ದುಹಾನ್ ಹೇಳಿದ್ದಾರೆ.

ರೈಲ್ವೆ ಕಾಲೋನಿ ಪೊಲೀಸ್ ಠಾಣೆಯಲ್ಲಿ ಇಮ್ರಾನ್ ವಿರುದ್ಧ ದೂರು ದಾಖಲಾಗಿದ್ದು, ಸಂತ್ರಸ್ಥ ಬಾಲಕಿಯೇ ಆತನ ವಿರುದ್ಧ ದೂರು ನೀಡಿದ್ದಾಳೆ. ದೂರಿನಲ್ಲಿ ಆತ ಸಂತ್ರಸ್ಥೆಗೆ ನಾಗರಹಾವು ತೋರಿಸಿ ಅದರಿಂದ ಕಚ್ಚಿಸುವುದಾಗಿ ಬೆದರಿಸಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ.
ಅಲ್ಲದೆ ಅವಳೊಂದಿಗೆ ಅಶ್ಲೀಲ ವೀಡಿಯೊಗಳನ್ನು ಚಿತ್ರೀಕರಿಸಿದ್ದಾನೆ. ಈ ವಿಡಿಯೋಗಳನ್ನು ತೋರಿಸಿ ಸಂತ್ರಸ್ಥೆಯ ತಂದೆಯ ಬಳಿ 1.36 ಲಕ್ಷ ರೂ.ಗಳನ್ನು ವಂಚಿಸಿದ್ದಾನೆ. ತನಗೆ ನಡೆದ ದೌರ್ಜನ್ಯವನ್ನು ಬೇರೆಯವರಿಗೆ ತಿಳಿಸಿದರೆ, ನಾಗರಹಾವಿನಿಂದ ಕೊಲ್ಲುವುದಾಗಿ ಇಮ್ರಾನ್ ಬೆದರಿಕೆ ಹಾಕುತ್ತಿದ್ದ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಪೊಲೀಸ್ ಮೂಲಗಳ ಪ್ರಕಾರ ಉತ್ತರ ಪ್ರದೇಶದ ಝಾನ್ಸಿ ಮೂಲದ ಮೊಹಮ್ಮದ್ ಇಮ್ರಾನ್ (29) ರೈಲ್ವೆ ಕಾಲೋನಿ ಪೊಲೀಸ್ ಠಾಣೆ ವ್ಯಾಪ್ತಿಯ ಬಾಡಿಗೆ ಮನೆಯಲ್ಲಿ ತನ್ನ ಪತ್ನಿಯೊಂದಿಗೆ ವಾಸಿಸುತ್ತಿದ್ದ. ಮೊಹಮ್ಮದ್ ಇಮ್ರಾನ್ ಮಹಿಳೆಯರು ಮತ್ತು ಹುಡುಗಿಯರನ್ನು ಬೆದರಿಸಲು ಮತ್ತು ಜನರನ್ನು ವಂಚಿಸಲು ತನ್ನ ಕೋಣೆಯಲ್ಲಿ ನಾಗರಹಾವನ್ನು ಇಟ್ಟುಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಬುಧವಾರ ಆರೋಪಿ ಇಮ್ರಾನ್ ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಮೇ 23 ರವರೆಗೆ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಇಮ್ರಾನ್ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (POCSO) ಕಾಯ್ದೆ, BNS, ಮಾಹಿತಿ ತಂತ್ರಜ್ಞಾನ (IT) ಕಾಯ್ದೆ ಮತ್ತು ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಎಸ್ಪಿ ಹೇಳಿದರು.
ಪತ್ನಿ ವಿರುದ್ಧವೂ ಪ್ರಕರಣ ದಾಖಲು
ಇಮ್ರಾನ್ ಮಾತ್ರವಲ್ಲದೇ ಆತನ ಅವರ ಪತ್ನಿ ಅಸ್ಮೀನ್ (25) ಅವರ ಮೇಲೂ ಪೋಕ್ಸೊ ಕಾಯ್ದೆ ಮತ್ತು ಐಟಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಆದರೆ ಈ ವರೆಗೂ ಆಕೆಯನ್ನು ಬಂಧಿಸಲಾಗಿಲ್ಲ. ತನ್ನ ಪತಿಯ ಕುಕೃತ್ಯಕ್ಕೇ ಇದೇ ಅಸ್ಮೀನ್ ಸಾಥ್ ನೀಡುತ್ತಿದ್ದಳು. ಪತಿ ಅಪ್ರಾಪ್ತ ಬಾಲಕಿ ಜೊತೆಗಿನ ಕೃತ್ಯಗಳನ್ನು ಮೊಬೈಲ್ ಫೋನ್‌ನಲ್ಲಿ ಚಿತ್ರೀಕರಿಸುತ್ತಿದ್ದಳು ಎಂದು ಅಧಿಕಾರಿ ಸ್ಪಷ್ಟನೆ ನೀಡಿದರು.
ಅರಣ್ಯ ಅಧಿಕಾರಿಗಳ ತಂಡದ ನೆರವಿನಿಂದ ಆರೋಪಿ ಇಮ್ರಾನ್ ಕೋಣೆಯಲ್ಲಿದ್ದ ನಾಗರಹಾವನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಇಮ್ರಾನ್ ಮೊಬೈಲ್ ಫೋನ್ ಅನ್ನು ಪರಿಶೀಲಿಸಿದಾಗ ಅವರ ಆತನ ಮೊಬೈಲ್ ನಲ್ಲಿ ಸಾಕಷ್ಟು ಅಶ್ಲೀಲ ವಿಡಿಯೋಗಳಿದ್ದವು. ಅವುಗಳಲ್ಲಿ ದೂರುದಾರೆ ಅಪ್ರಾಪ್ತೆಯ ವಿಡಿಯೋಗಳೂ ಕೂಡ ಇದ್ದವು. ಈತ ನಕಲಿ ವೈದ್ಯನಾಗಿಯೂ ಕೆಲಸ ಮಾಡುತ್ತಿದ್ದ. ಜನರಿಗೆ ಔಷಧೀಯ ಸಸ್ಯಗಳಿಂದ ಚಿಕಿತ್ಸೆ ನೀಡುವುದಾಗಿ ಹೇಳಿಕೊಂಡು ಹಣ ಸಂಪಾದಿಸುತ್ತಿದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ
