Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ರಾಮನಗರದಲ್ಲಿ ನಕಲಿ ವೈದ್ಯನಿಂದ ಚಿಕಿತ್ಸೆ: 6 ತಿಂಗಳ ಮಗು ಸಾವು, ಆರೋಪಿ ಬಂಧನ

Spread the love

Free Photos | baby boy feet

ರಾಮನಗರ: ನಕಲಿ ವೈದ್ಯನಿಂದ ಚಿಕಿತ್ಸೆ ಪಡೆದ 6 ತಿಂಗಳ ಮಗು ಸಾವಿಗೀಡಾಗಿದ್ದು, ಪ್ರಕರಣ ಬಯಲಾಗುತ್ತಿದ್ದಂತೆ ಪೊಲೀಸರು ಆತನನ್ನು ಬಂಧಿಸಿದ್ದಾರೆ.

ನಗರದ ಮೋತಿನಗರ ನಿವಾಸಿ ಮಹಮ್ಮದ್ ಸೈಫ್‌ವುಲ್ಲಾ ಇಲ್ಲಿನ ಬಾಲಗೇರಿಯಲ್ಲಿ ಆಲ್-ಖೈರ್ ಪೌಂಡೇಷನ್‌ ಹೆಸರಿನಲ್ಲಿ ಕ್ಲಿನಿಕ್ ನಡೆಸುತ್ತಿದ್ದ.

ಪಟ್ಟಣದ ಚಾಮುಂಡೇಶ್ವರಿ ಬಡಾವಣೆಯ ಶಿವರಾಜು ಅವರು ಮಂಗಳವಾರ ಸಂಜೆ 6 ತಿಂಗಳ ಶರಣ್ಯಾಳ ಕಾಲಿನಲ್ಲಿ ಗಂಟು ಇದ್ದ ಕಾರಣಕ್ಕೆ ಈತನ ಬಳಿ ಹೋಗಿದ್ದರು. ನಕಲಿ ವೈದ್ಯ ಇಂಜೆಕ್ಷನ್‌ ನೀಡುತ್ತಿದ್ದಂತೆ ಅಸ್ವಸ್ಥಗೊಂಡಿದ್ದ ಮಗು ಬುಧವಾರ ಸಾವನ್ನಪ್ಪಿತ್ತು. ಹೆಚ್ಚಿನ ಪ್ರಮಾಣದಲ್ಲಿ ಸ್ಟಿರಾಯ್ಡ ನೀಡಿದ್ದೇ ಮಗುವಿನ ಸಾವಿಗೆ ಕಾರಣ ಎಂದು ಜಿಲ್ಲಾಸ್ಪತ್ರೆ ಮೂಲಗಳು ತಿಳಿಸಿವೆ.


Spread the love
Share:

administrator

Leave a Reply

Your email address will not be published. Required fields are marked *