ಬ್ರಾಂಡೆಡ್ ಪನ್ನೀರ್ ಹಾಗೂ ನೀರಿನ ಬಾಟಲಿಗಳ ನಕಲಿ ವಿತರಣೆ: ಆಹಾರ ಸುರಕ್ಷತಾ ಇಲಾಖೆಯಿಂದ ದಾಳಿ, ವಸ್ತುಗಳ ಸೀಜ್

ಉತ್ತರ ಪ್ರದೇಶ: ಬ್ರಾಂಡೆಂಡ್ ಪುಡ್, ಬ್ರಾಂಡೆಂಡ್ ವಾಟರ್ ಬಾಟಲಿ ಹಾಗೆ ಹೀಗೆ ಅಂತ ಯೋಚಿಸಿ ಗ್ರಾಹಕರಾದ ನೀವುಗಳೇನೋ ಖರೀದಿಸುತ್ತೀರಿ. ಆದರೇ ಅದೇ ಬ್ರಾಂಡೆಂಡ್ ಹೆಸರಿನಲ್ಲಿ ನಕಲಿ ಪನ್ನೀರ್, ನಕಲಿ ಬಾಟಲ್ ನೀರು ಮಾರಾಟ ಮಾಡುತ್ತಿದ್ದದ್ದನ್ನು ಆಹಾರ ಸುರಕ್ಷತಾ ಇಲಾಖೆಯ ಅಧಿಕಾರಿಗಳು ಪತ್ತೆ ಹಚ್ಚಿ ಸೀಜ್ ಮಾಡಿದ್ದಾರೆ.

ಇನ್ನೂ ಪನ್ನೀರ್ ತಯಾರಿಕಾ ಘಟಕದಿಂದ 10ಕ್ಕೂ ಹೆಚ್ಚು ಮಾದರಿಯನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಪರೀಕ್ಷೆಗಾಗಿ ಕಳುಹಿಸಿಕೊಡಲಾಗಿದೆ. ಜೊತೆಗೆ ಪನ್ನೀರ್ ಗೆ ಬಳಸುವಂತ ಬಣ್ಣ, ಸ್ಯಾಕ್ರರಿನ್ ಸೇರಿದಂತೆ ದೊಡ್ಡ ಪ್ರಮಾಣದ ಹಾನಿಕಾರಕ ವಸ್ತುಗಳನ್ನು ಸಹ ಆಹಾರ ಸುರಕ್ಷತಾ ಇಲಾಖೆಯ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಅಂದಹಾಗೇ ಪನೀರ್ ತಯಾರಿಕೆಯಲ್ಲಿ ಸ್ಯಾಕ್ರರಿನ್ ಬಿಳಿ, ಸ್ಫಟಿಕದಂತಹ ಕೃತಕ ಸಿಹಿಕಾರಕವಾದಂತ ಹಾನಿಕಾರಕ ವಸ್ತುಗಳನ್ನು ಬಳಕೆ ಮಾಡುತ್ತಿದ್ದದ್ದು ಪತ್ತೆ ಹಚ್ಚಲಾಗಿದೆ. ನಕಲಿ, ಹಾನಿಕಾರಕ ವಸ್ತುಗಳನ್ನು ಬಳಸಿ ಪನ್ನೀರ್ ತಯಾರಿಸಿ, ಬ್ರಾಂಡೆಂಡ್ ಹೆಸರಿನಲ್ಲಿ ಮಾರಾಟ ಮಾಡುತ್ತಿದ್ದರು ಎಂಬುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಇದಲ್ಲದೇ ಮೇ.29ರ ನಿನ್ನೆ ಗೌತಮ್ ಬುದ್ಧ ನಗರದಲ್ಲಿ ಬಾಟಲಿ ನೀರು ತಯಾರಿಕೆ ಕಾರ್ಖಾನೆಯ ಮೇಲೆ ದಾಳಿ ಮಾಡಲಾಗಿದ್ದು, 13,076 ಲೀಟರ್ ಬ್ರಾಂಡೆಂಡ್ ಹೆಸರಿನ ಲೇಬಲ್ ಹೊಂದಿದ್ದಂತ ನಕಲಿ ವಾಟರ್ ಬಾಟಲಿಯನ್ನು ಸೀಜ್ ಮಾಡಿದ್ದಾರೆ. ಎಫ್ ಎಸ್ ಎಸ್ ಎ ಐ ಪರವಾನಿಗೆ ಪಡೆಯದೇ ವಾಟರ್ ಬಾಟಲಿ ನೀರು ತಯಾರಿಸುತ್ತಿದ್ದಂತ ಕಂಪನಿಯನ್ನು ಸೀಜ್ ಮಾಡಲಾಗಿದೆ.
ಬಿಲ್ಸೇರಿ, ಬ್ಲೆಸ್ರಿ ನಂತಹ ಲೇಬಲ್ ಅಂಟಿಸಿ ನಕಲಿ ವಾಟರ್ ಬಾಟಲಿಯನ್ನು ಮಾರಾಟ ಮಾಡುತ್ತಿದ್ದರು. ಇವರು ಮಾರಾಟ ಮಾಡುತ್ತಿದ್ದಂತ ನೀರಿನ ಬಾಟಲಿ ಜನಪ್ರಿಯ ಬಿಸ್ಲೇರಿ ಬ್ರ್ಯಾಂಡಿಗೆ ಹೋಲುತ್ತಿತ್ತಂತೆ. ಈ ವಾಟರ್ ಬಾಟಲಿಯ ನೀರನ್ನು ಸಂಗ್ರಹಿಸಿರುವಂತ ಆಹಾರ ಸುರಕ್ಷತಾ ಇಲಾಖೆಯ ಅಧಿಕಾರಿಗಳು ಪ್ರಯೋಗಾಲಯಕ್ಕೆ ಪರೀಕ್ಷೆಗೆ ಕಳುಹಿಸಿಕೊಟ್ಟಿದ್ದಾರೆ.