Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ದೇಶಾದ್ಯಾಂತ ಹರಡಿದ ನಕಲಿ 500 ರೂ. ನೋಟುಗಳು: ಗೃಹ ಸಚಿವಾಲಯದಿಂದ ಎಚ್ಚರಿಕೆ

Spread the love

ನವದೆಹಲಿ: ನಿಮ್ಮ ಕಣ್ಣನ್ನು ನಿಮಗೆ ನಂಬಲು ಸಾಧ್ಯವಾಗದಂತೆ ಹೊಸ 500 ರೂ. ಮುಖಬೆಲೆಯ ನಕಲಿ ನೋಟುಗಳು ದೇಶದಲ್ಲಿ ಚಲಾವಣೆಗೆ ಬಂದಿದ್ದು, ಈ ಬಗ್ಗೆ ಎಚ್ಚರಿಕೆಯಿಂದಿರಿ ಎಂದು ನಾಗರಿಕರಿಗೆ ಕೇಂದ್ರ ಗೃಹ ಸಚಿವಾಲಯ ಸೂಚಿಸಿದೆ. ಈ ನಕಲಿ ನೋಟುಗಳು ಗುಣಮಟ್ಟ, ಮುದ್ರಣ ಸೇರಿದಂತೆ ಎಲ್ಲ ಅಂಶಗಳಲ್ಲೂ ಅಸಲಿ ನೋಟಿಗೆ ಹೋಲುತ್ತದೆ.

ಹೀಗಾಗಿ ಅದು ನಕಲಿಯೋ, ಅಸಲಿಯೋ ಎಂದು ಪತ್ತೆಹಚ್ಚುವುದೂ ಕಷ್ಟಸಾಧ್ಯವಾಗಿದೆ ಎಂದೂ ಗೃಹ ಸಚಿವಾಲಯ ಹೇಳಿದೆ.

ಈ ಅಲರ್ಟ್ ಅನ್ನು ಗೃಹ ಇಲಾಖೆಯು ಕಂದಾಯ ಗುಪ್ತಚರ ನಿರ್ದೇಶನಾಲಯ, ಎಫ್‌ಐಯು, ಸಿಬಿಐ, ಎನ್‌ಐಎ, ಸೆಬಿ ಮುಂತಾದ ಸಂಸ್ಥೆಗಳೊಂದಿಗೂ ಹಂಚಿಕೊಂಡಿದೆ.
ಈ ನಕಲಿ ನೋಟುಗಳು ನೋಡಲು ಅಸಲಿ 500 ರೂ.ಗಳ ನೋಟುಗಳಂತೆಯೇ ಕಾಣುತ್ತದೆ. ಆದರೆ ಸಣ್ಣದಾದ ಕಾಗುಣಿತ ದೋಷವು ಅದರಲ್ಲಿದ್ದು, ಅದರ ಮೂಲಕ ಅವುಗಳನ್ನು ಪತ್ತೆಹಚ್ಚಬಹುದಾಗಿದೆ. “ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ” ಎಂಬ ಪದಗುಚ್ಛದಲ್ಲಿರುವ “RESERVE” ನಲ್ಲಿ “E” ಅಕ್ಷರವನ್ನು ಬದಲಾಯಿಸಿ “A” ಎಂದು ಅಂದರೆ RESARVE ಎಂದು ಬರೆಯಲಾಗಿದೆ.

“ಈ ಸೂಕ್ಷ್ಮ ತಪ್ಪು ಸರಿಯಾಗಿ ಗಮನಿಸಿದರಷ್ಟೇ ಕಂಡುಬರುತ್ತದೆ. ಹೀಗಾಗಿ ನಕಲಿ ನೋಟುಗಳು ವ್ಯಾಪಕವಾಗಿ ಜನರಿಗೆ ಗೊತ್ತಾಗದೇ ಚಲಾವಣೆಯಾಗುವ ಅಪಾಯವಿದೆ” ಎಂದು ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಹಣಕಾಸು ಸಂಸ್ಥೆಗಳು, ಬ್ಯಾಂಕುಗಳು ಮತ್ತು ಸಂಬಂಧಿತ ಏಜೆನ್ಸಿಗಳನ್ನು ಹೆಚ್ಚಿನ ಎಚ್ಚರಿಕೆಯಲ್ಲಿರುವಂತೆ ಸೂಚಿಸಲಾಗಿದ್ದು, ಈ ನಕಲಿ ನೋಟುಗಳಲ್ಲಿ ಹೆಚ್ಚಿನ ಸಂಖ್ಯೆಯ ಈಗಾಗಲೇ ಮಾರುಕಟ್ಟೆಯನ್ನು ಪ್ರವೇಶಿಸಿರಬಹುದು ಎಂಬ ಅನುಮಾನ ವ್ಯಕ್ತಪಡಿಸಲಾಗಿದೆ. ಸಾರ್ವಜನಿಕರಿಗೆ ನಕಲಿ ನೋಟು ಮತ್ತು ಅಸಲಿ ನೋಟನ್ನು ಗುರುತಿಸಲು ಸಹಾಯ ಮಾಡುವ ಸಲುವಾಗಿ ನಕಲಿ ಕರೆನ್ಸಿಯ ಛಾಯಾಚಿತ್ರವನ್ನೂ ಸಾರ್ವಜನಿಕರ ವೀಕ್ಷಣೆಗೆ ಬಿಡಲಾಗಿದೆ.

ನಾಗರಿಕರು ಮತ್ತು ಸಂಸ್ಥೆಗಳು ಈ ನಕಲಿ ನೋಟುಗಳ ವಿಚಾರದಲ್ಲಿ ಜಾಗರೂಕರಾಗಿರಬೇಕು ಮತ್ತು ಯಾವುದೇ ಅನುಮಾನಾಸ್ಪದ ಕರೆನ್ಸಿ ಕಂಡುಬಂದರೆ ಮಾಹಿತಿ ನೀಡಬೇಕೆಂದು ಅಧಿಕಾರಿಗಳು ಸೂಚಿಸಿದ್ದಾರೆ.

ಉಗ್ರರಿಗೆ ಹಣಕಾಸು ನೆರವು ಪ್ರಕರಣಗಳ ತನಿಖೆಯಲ್ಲಿ ತೊಡಗಿರುವ ಹಿರಿಯ ಅಧಿಕಾರಿಯೊಬ್ಬರ ಪ್ರಕಾರ, ಎಷ್ಟು ನಕಲಿ ನೋಟುಗಳು ಚಲಾವಣೆಯಲ್ಲಿವೆ ಎಂದು ತಿಳಿಯಲು ಯಾವುದೇ ಸಂಸ್ಥೆಗೆ ಸಾಧ್ಯವಿಲ್ಲ. ಸಾರ್ವಜನಿಕರು ಬ್ಯಾಂಕಿಗೆ ಸಲ್ಲಿಸಿದ ನಕಲಿ ನೋಟುಗಳೂ ಸೇರಿ ಬೇರೆ ಬೇರೆ ಮೂಲಗಳಿಂದ ಬಂದ ನೋಟುಗಳಿಂದಾಗಿಯೇ ಈ ವಿಚಾರ ಬೆಳಕಿಗೆ ಬಂದಿವೆ. ಆದರೆ, ನಕಲಿ ನೋಟುಗಳ ನೈಜ ಸಂಖ್ಯೆ ಅಂದಾಜಿಸಲು ಸಾಧ್ಯವಾಗಿಲ್ಲ ಎಂದಿದ್ದಾರೆ


Spread the love
Share:

administrator

Leave a Reply

Your email address will not be published. Required fields are marked *