Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ನಷ್ಟದಲ್ಲಿರುವ ಮೆಟ್ರೋಗೆ ದುಂದುವೆಚ್ಚ: ಪಿಲ್ಲರ್‌ಗಳಿಗೆ ಲೈಟಿಂಗ್ ಹಾಕಿದರೆ ಪ್ರಯೋಜನವೇ?

Spread the love

ಬೆಂಗಳೂರು: ನಮ್ಮ ಮೆಟ್ರೋ ನಿರ್ವಹಣಾ ವೆಚ್ಚ ಹೆಚ್ಚಾಗಿದೆ. ಮೆಟ್ರೋ ಲಾಸ್​ನಲ್ಲಿದೆ ಎಂದು ಇತ್ತೀಚೆಗೆ ಟಿಕೆಟ್ ದರವನ್ನು ದುಪ್ಪಟ್ಟು ಏರಿಕೆ ಮಾಡಲಾಗಿತ್ತು. ಆದರೆ ಇದೀಗ ಆ ಹಣವನ್ನು ಬಿಎಂಆರ್​ಸಿಎಲ್​​  ಅಧಿಕಾರಿಗಳು ಪಿಲ್ಲರ್​​ಗಳಿಗೆ ಕಲರ್ ಲೈಟಿಂಗ್ಸ್ ಹಾಕಿಸುವ ಮೂಲಕ ದುಂದುವೆಚ್ಚಕ್ಕೆ ಮುಂದಾಗಿದ್ದಾರೆಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ‌.

ನಮ್ಮ ಮೆಟ್ರೋದ ಕಥೆ ಹೇಗಿದೆ ಅಂದರೆ ಹೊಟ್ಟೆಗೆ ಹಿಟ್ಟಿಲ್ಲ, ಜುಟ್ಟಿಗೆ ಮಲ್ಲಿಗೆ ಹೂವು ಅನ್ನೋ ರೀತಿ ಆಗಿದೆ. ಮೆಟ್ರೋ ಪಿಲ್ಲರ್​ಗಳಿಗೆ ಸುಣ್ಣ ಬಣ್ಣ ಮಾಡಲು ನಮ್ಮ ‌ಮೆಟ್ರೋ ಬಳಿ ಹಣವಿಲ್ವಂತೆ, ಆದರೆ ರಾತ್ರಿ ವೇಳೆ ಪಿಲ್ಲರ್​ಗಳು ಚೆನ್ನಾಗಿ ಕಾಣಿಸಲು ಕಲರ್ ಕಲರ್ ಲೈಟಿಂಗ್ಸ್ ಹಾಕಲು ಮಾತ್ರ ಹಣವಿದೆಯಂತೆ.

ಹಸಿರು ಮತ್ತು ನೇರಳೆ ಮಾರ್ಗದ 160 ಮೆಟ್ರೋ ಪಿಲ್ಲರ್​ಗಳಿಗೆ ಲೈಟಿಂಗ್ಸ್ ಹಾಕಲು ಬಿಎಂಆರ್​​ಸಿಎಲ್​ ಟೆಂಡರ್ ಕರೆದಿದೆ. ಎಂಜಿ ರೋಡ್, ಬ್ರಿಗೇಡ್ ರೋಡ್, ಅನಿಲ್ ಕುಂಬ್ಳೆ ಸರ್ಕಲ್ ಸೇರಿದಂತೆ ಬೆಂಗಳೂರಿನ ಹತ್ತು ಹೈಟೆಕ್ ಮತ್ತು ಕ್ಲಾಸ್ ಜಂಕ್ಷನ್​ಗಳಲ್ಲಿ ಈ ಲೈಟಿಂಗ್ಸ್ ಅಳವಡಿಸಲು ನಮ್ಮ ಮೆಟ್ರೋ ಮುಂದಾಗಿದೆ.

ಪ್ರಯಾಣಿಕರು ಆಕ್ರೋಶ 

ಇನ್ನೂ ಮೊದಲ ಹಂತದಲ್ಲಿ ನಗರದ ಹತ್ತು ಜಂಕ್ಷನ್​ಗಳಲ್ಲಿನ ಮೆಟ್ರೋ ಪಿಲ್ಲರ್​ಗಳಿಗೆ ಲೈಟಿಂಗ್ಸ್ ಅಳವಡಿಸವುದು, ನಂತರ ನಗರದ ಎಲ್ಲಾ ಮೆಟ್ರೋ ಪಿಲ್ಲರ್​ಗಳಿಗೂ ಲೈಟಿಂಗ್ಸ್ ಅಳವಡಿಸಲು ಟೆಂಡರ್ ಕರೆಯಲು ಬಿಎಂಆರ್ಸಿಎಲ್ ಪ್ಲಾನ್ ನಡೆಸಿದೆ. ಇನ್ನು ನಗರದ ಕೆಲವೊಂದು ಭಾಗದಲ್ಲಿ ಮಾತ್ರ ಮೆಟ್ರೋ ಪಿಲ್ಲರ್​ಗಳಿಗೆ ಸುಣ್ಣಬಣ್ಣ ಮಾಡಲಾಗಿದೆ. ಆದರೆ ಬಹುತೇಕ ಪಿಲ್ಲರ್​ಗಳಿಗೆ ಕಲರ್ ಮಾಡಿಲ್ಲ. ಇಂತಹ ಸಂದರ್ಭದಲ್ಲಿ ಕೋಟ್ಯಂತರ ರೂ ವೆಚ್ಚದಲ್ಲಿ ಈ ಲೈಟಿಂಗ್ಸ್ ಅಳವಡಿಸುವುದು ಬೇಕಿತ್ತಾ ಎಂದು ಮೆಟ್ರೋ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಒಟ್ಟಿನಲ್ಲಿ ನಮ್ಮ ಮೆಟ್ರೋ, ಇರುವ ಪಿಲ್ಲರ್​ಗಳಿಗೆ ಸರಿಯಾಗಿ ಪೇಂಟಿಂಗ್ ಮಾಡುವ ಮೂಲಕ ಅದರ ಅಂದವನ್ನು ಹೆಚ್ಚಿಸುವುದು ಬಿಟ್ಟು, ರಾತ್ರಿ ವೇಳೆಯಲ್ಲಿ ಪಿಲ್ಲರ್​ಗಳು ಕಲರ್ ಕಲರ್ ಆಗಿ ಕಾಣಲಿ ಎಂದು ಕೋಟ್ಯಂತರ ರೂ. ಖರ್ಚು ಮಾಡಲು ಮುಂದಾಗಿರುವುದು ಆಕ್ರೋಶಕ್ಕೆ ಕಾರಣವಾಗಿದೆ.


Spread the love
Share:

administrator

Leave a Reply

Your email address will not be published. Required fields are marked *