Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಬೆಂಗಳೂರಿನ ಉದ್ಯಮಗಳಿಗೆ ಹೊರೆಯಾದ ಅಮೆರಿಕದ ಹೆಚ್ಚುವರಿ ತೆರಿಗೆ

Spread the love

ಬೆಂಗಳೂರು: ಭಾರತಕ್ಕೆ ಅಮೆರಿಕದ ಹೆಚ್ಚುವರಿ ತೆರಿಗೆ ಶಾಕ್‌ ನೀಡಿದೆ. ರಷ್ಯಾದಿಂದ ತೈಲ ಖರೀದಿಯ ನೆಪವೊಡ್ಡಿ ಈ ಹಿಂದೆ ಘೋಷಿಸಿದಂತೆ ಭಾರತದಿಂದ ಆಮದಾಗುವ ಉತ್ಪನ್ನಗಳ ಮೇಲೆ ಶೇ 25ರಷ್ಟು ಹೆಚ್ಚುವರಿ ತೆರಿಗೆ ವಿಧಿಸುವ ಅಮೆರಿಕದ ನಿರ್ಧಾರ ಬುಧವಾರದಿಂದಲೇ ಜಾರಿಗೆ ಬಂದಿದೆ. ಇದರೊಂದಿಗೆ ಭಾರತದ ಉತ್ಪನ್ನಗಳ ಮೇಲಿನ ಅಮೆರಿಕದ ತೆರಿಗೆ ಪ್ರಮಾಣ ಶೇ 50ಕ್ಕೆ ಏರಿಕೆಯಾಗಿದೆ. ಇದರ ಬಿಸಿ ಕರ್ನಾಟಕಕ್ಕೆ, ಅದರಲ್ಲೂ ಬೆಂಗಳೂರಿಗೆ ಹೆಚ್ಚಾಗಿ ತಟ್ಟಿದೆ.

ಭಾರತದಿಂದ ರಫ್ತಾಗುವ ಶೇ 66ರಷ್ಟು ಉತ್ಪನ್ನಗಳ ಮೇಲೆ ತೆರಿಗೆಯ ಕಾರ್ಮೋಡ ಕವಿದಿದೆ.ಬೆಂಗಳೂರು ಸರಿದಂತೆ ಸುತ್ತಮುತ್ತಲ ಸಣ್ಣ ಕೈಗಾರಿಕೆ, ಚರ್ಮದ ಉದ್ಯಮ, ಪೀಣ್ಯ ಗಾರ್ಮೆಂಟ್ಸ್ ಎಂಜನಿಯರಿಂಗ್ ಉಪಕರಣಗಳ ಮೇಲೂ ಹೆಚ್ಚುವರಿ ತೆರಿಗೆ ಬಿಸಿ ತಟ್ಟಲಿದೆ ಎಂದು ಎಫೆಕೆಸಿಸಿಐ ತಿಳಿಸಿದೆ.

ಅಮೆರಿಕ ಹೆಚ್ಚುವರಿ ತೆರಿಗೆಯಿಂದ ಬೆಂಗಳೂರಿನ ಯಾವೆಲ್ಲ ಉದ್ಯಮಗಳಿಗೆ ಹೊರೆ?
ಬಟ್ಟೆ ಹಾಗೂ ಜವಳಿ
ಹರಳುಗಳು ಮತ್ತು ಆಭರಣಗಳು
ಫರ್ನಿಚರ್‌ಗಳು, ಕಾರ್ಪೆಟ್‌ಗಳು
ಯಂತ್ರೋಪಕರಣಗಳು
ಸಿಗಡಿ, ಇತರ ಸಮುದ್ರ ಉತ್ಪನ್ನಗಳು
ಚರ್ಮದ ಉದ್ಯಮ
ಯಾವೆಲ್ಲ ವಸ್ತುಗಳಿಗೆ ಹೆಚ್ಚುವರಿ ತೆರಿಗೆಯಿಂದ ವಿನಾಯಿತಿ?
ಔಷಧ, ಉಕ್ಕು,
ಅಲ್ಯುಮಿನಿಯಂ
ತಾಮ್ರದ ವಸ್ತುಗಳು
ಪ್ಯಾಸೆಂಜರ್‌ ಕಾರು
ಕಡಿಮೆ ಸಾಮರ್ಥ್ಯದ ಟ್ರಕ್‌, ಆಟೋ ಬಿಡಿಭಾಗಗಳು
ಎಲೆಕ್ಟ್ರಾನಿಕ್ಸ್‌ ಉಪಕರಣ
ಭಾರತದಿಂದ ಅಮೆರಿಕಕ್ಕೆ ರಫ್ತಾಗುವ ಉತ್ಪನ್ನಗಳ ತೆರಿಗೆ ಏರಿಕೆ ಮಾಡಿರುವುದಕ್ಕೆ ಜನ ಸಾಮಾನ್ಯರು, ರೈತರು ಹಾಗೂ ಐಟಿ ಉದ್ಯೋಗಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಉದ್ಯೋಗ ಕಡಿತದ ಆತಂಕ
ಶೇ 50ರಷ್ಟು ತೆರಿಗೆಯಿಂದಾಗಿ ಕಾರ್ಮಿಕ ಕೇಂದ್ರಿತ ಹಾಗೂ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಮೇಲೆ ನೇರ ಹೊರೆ ಬೀಳುತ್ತಿದೆ. ಬೇಡಿಕೆ ಕುಸಿತದಿಂದ ಹಲವು ಕಂಪನಿಗಳಲ್ಲಿ ಉದ್ಯೋಗ ಕಡಿತದ ಆತಂಕ ಹೆಚ್ಚಾಗಲಿದೆ. ಭಾರತದ ಜಿಡಿಪಿಗೆ ಶೇ 0.2ರಿಂದ 1ರಷ್ಟು ಹೊಡೆತ ಬೀಳುವ ನಿರೀಕ್ಷೆ ಇದ್ದು ಭಾರತ ಇದನ್ನು ಹೇಗೆ ನಿಭಾಯಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಕೇಂದ್ರದ ವಿರುದ್ಧ ಕರ್ನಾಟಕ ಸಚಿವರ ಆಕ್ರೋಶ
ಗಂಡ-ಹೆಂಡತಿ ಜಗಳದಲ್ಲಿ ಕೂಸು ಬಡವಾಯಿತು ಎಂಬಂತೆ ಅಮೆರಿಕ-ರಷ್ಯಾ ನಡುವಣ ಶೀತಲ ಸಮರ ಭಾರತಕ್ಕೆ ಏಟು ನೀಡಿದೆ. ರಷ್ಯಾದಿಂದ ಭಾರತ ತೈಲೋತ್ಪನ್ನಗಳನ್ನು ಆಮದು ಮಾಡಿಕೊಳ್ಳುತ್ತಿರುವುದು ಟ್ರಂಪ್‌ ಹೊಟ್ಟೆ ಉರಿಗೆ ಕಾರಣವಾಗಿದೆ. ಇದೇ ನೆಪವೊಡ್ಡಿ ಭಾರತದ ಉತ್ಪನ್ನಗಳ ಮೇಲಿದ್ದ ತೆರಿಗೆ ಏರಿಕೆ ಮಾಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹಾಗೂ ಉನ್ನತ ಶಿಕ್ಷಣ ಸಚಿವ ಎಂಸಿ ಸುಧಾಕರ್, ನಮಗೆ ಯಾರು ಸ್ನೇಹಿತರು ಎಂಬುದೇ ತಿಳಿಯುತ್ತಿಲ್ಲ. ಮೋದಿಯವರು ಟ್ರಂಪ್ ಬಹಳ ಆಪ್ತರು ಎನ್ನುತ್ತಾರೆ. ಒಳ್ಳೆಯ ಸಂಬಂಧ ಇದೆ ಅಂತಾರೆ. ಟ್ರಂಪ್ ಅಧ್ಯಕ್ಷರಾದಗ ಬಿಜೆಪಿಯವರು ತುಂಬಾ ಸಂತೋಷ ಪಟ್ಟಿದ್ದರು. ಈಗ ಟ್ರಂಪ್ ನಮ್ಮ ದೇಶದ ಬಗ್ಗೆ ಯಾವುದೇ ಕಾಳಜಿ ತೋರಿಸುತ್ತಿಲ್ಲ. ಪಾಕ್ ಜತೆ ಯುದ್ಧವಾದಾಗಲೂ ಉತ್ತಮ ಬಾಂಧವ್ಯ ತೊರಿಸಿಲ್ಲ. ಪಾಕ್ ಜೊತೆ ಅಮೆರಿಕ ಉತ್ತಮ ಸಂಬಂಧ ಹೊಂದಿದೆ. ಪಾಕಿಸ್ತಾನವನ್ನು ಅಮೆರಿಕ ಹೋಗುಳುತ್ತಿದೆ ಎಂದರು.

ಎಲ್ಲಿದೆ ಒಳ್ಳೆಯ ಸ್ನೇಹ ಎಲ್ಲ? ನಮಗೆ ಒಳ್ಳೆಯ ಮಿತ್ರ ದೇಶಗಳೇ ಇಲ್ಲ. ಇತ್ತ ಚೀನಾ ಬೆಂಬಲವೂ ಇಲ್ಲ. ನಮಗೆ ನೆರೆ ದೇಶಗಳ ಬೆಂಬಲ ಇಲ್ಲ. ನಮ್ಮ ವಿದೇಶಾಂಗ ನೀತಿ ಸಂಪೂರ್ಣವಾಗಿ ವಿಫಲವಾಗಿದೆ. ಕೇವಲ ಪ್ರಚಾರಕ್ಕೆ ಮಾತ್ರ ಸಿಮೀತವಾಗಿದೆ ಎಂದು ಸಚಿವರು ಹೇಳಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *