Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಸಲಾಹ್ ಬಂದರಿನ ತೈಲ ಘಟಕದ ಮೇಲೆ ಸ್ಫೋಟ; ಇರಾನ್ ಡ್ರೋನ್ ದಾಳಿಯ ಶಂಕೆ

Spread the love

ಟೆಹರಾನ್: ಇರಾನ್- ಅಮೆರಿಕ ಮತ್ತು ಇಸ್ರೇಲ್ ನಡುವಿನ ಸಮರ ಮತ್ತಷ್ಟು ತಾರಕಕ್ಕೇರಿದ್ದು, ಕೊಲ್ಲಿ ಪ್ರದೇಶದ ಅತ್ಯಂತ ಆಯಕಟ್ಟಿನ ಮಹತ್ವದ ಸಾಗರ ಕೇಂದ್ರಗಳಿಗೆ ವ್ಯಾಪಿಸಿದೆ. ಬುಧವಾರ ಒಮಾನ್ ದೇಶದ ಸಲಾಲಾ ಬಂದರಿನ ತೈಲ ಸಂಗ್ರಹ ಟ್ಯಾಂಕ್ ಗಳಿಗೆ ಹಲವು ಇರಾನಿ ಡೋನ್‌ಗಳು ಬಡಿದಿವೆ. ಇದು ಬೆಂಕಿಗೆ ಕಾರಣವಾಗಿದ್ದು, ಜಾಗತಿಕವಾಗಿ ಇಂಧನ ಹಾಗೂ ಶಿಪ್ಪಿಂಗ್ ಮಾರುಕಟ್ಟೆಯಲ್ಲಿ ತಲ್ಲಣಕ್ಕೆ ಕಾರಣವಾಗಿದೆ. ಹಲವು ಡೋನ್‌ಗಳನ್ನು ಛೇದಿಸಲಾಗಿದ್ದರೂ ಕೆಲ ಇತರ ಡೋನ್‌ಗಳು ವಾಯುರಕ್ಷಣಾ ವ್ಯವಸ್ಥೆಯನ್ನು ಭೇದಿಸಿ ಬಂದರಿನಲ್ಲಿ ತೈಲ ಸಂಗ್ರಹ ಮೂಲಸೌಕರ್ಯಕ್ಕೆ ಅಪ್ಪಳಿಸಿವೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.

ದಾಳಿಯಿಂದ ಕನಿಷ್ಠ ಎರಡು ಇಂಧನ ಟ್ಯಾಂಕ್ ಗಳಲ್ಲಿ ದೊಡ್ಡಪ್ರಮಾಣದ ಬೆಂಕಿ ಅನಾಹುತ ಸಂಭವಿಸಿದ್ದರೂ, ಯಾವುದೇ ಸಾವು ನೋವು ಸಂಭವಿಸಿಲ್ಲ. ಅಲ್ಲೇ ಪಕ್ಕದಲ್ಲಿ ಲಂಗರು ಹೂಡಿದ್ದ ವ್ಯಾಪಾರಿ ಹಡಗುಗಳಿಗೂ ಹಾನಿಯಾಗಿಲ್ಲ. ಆದರೆ ಈ ಘಟನೆಯಿಂದ ಯುದ್ಧವು ಇರಾನ್, ಇಸ್ರೇಲ್ ಮತ್ತು ಅಮೆರಿಕದ ನೆಲೆಗಳನ್ನು ದಾಟಿ ಪಸರಿಸುತ್ತಿದ್ದು, ಕೊಲ್ಲಿ ರಾಷ್ಟ್ರಗಳ ಇಂಧನ ಮೂಲಸೌಕರ್ಯ ಮತ್ತು ಸಾಗರ ವ್ಯಾಪಾರ ಮಾರ್ಗಗಳಿಗೆ ಭಾರಿ ಅಪಾಯ ಒದಗಿದೆ.
ಅರಬ್ಬಿ ಸಮುದ್ರದಲ್ಲಿರುವ ಒಮಾನ್ ದೇಶದ ಧೋಫಾರ್ ಪ್ರದೇಶದಲ್ಲಿರುವ ಸಲಾಲಾ ಬಂದರು ಮಧ್ಯಪ್ರಾಚ್ಯದ ಪ್ರಮುಖ ಶಿಪ್ಪಿಂಗ್ ಮತ್ತು ಲಾಜಿಸ್ಟಿಕ್ ಕೇಂದ್ರವಾಗಿದೆ. ಈ ಬಂದರು ಕಂಟೈನರ್ ಸಂಚಾರ ಮತ್ತು ತೈಲ ಸಂಗ್ರಹಾಗಾರಗಳನ್ನು ನಿರ್ವಹಿಸುತ್ತದೆ ಮತ್ತು ಏಷ್ಯಾ ಯೂರೋಪ್ ಹಾಗೂ ಆಫ್ರಿಕಾ ನಡುವೆ ಸಂಚರಿಸುವ ಹಡಗುಗಳಿಗೆ ಬಂಕರ್ ಕಾರ್ಯಾಚರಣೆ ಸೌಲಭ್ಯವನ್ನು ಒದಗಿಸುತ್ತದೆ. ಈ ವ್ಯವಸ್ಥೆಯ ಮೇಲೆ ಡೋನ್ ದಾಳಿ ನಡೆದಾಗ ಬಂದರಿನ ಸಂಗ್ರಹ ಪ್ರದೇಶದಲ್ಲಿದ್ದ ತೈಲ ಟ್ಯಾಂಕ್ ಗಳಿಗೆ ಬೆಂಕಿ ಹತ್ತಿಕೊಂಡಿದೆ. ಇದರಿಂದ ಆಕಾಶದಲ್ಲಿ ದಟ್ಟವಾದ ಹೊಗೆ ವ್ಯಾಪಿಸಿದೆ. ತೈಲ ಡಿಪೋದ ಪ್ರದೇಶದಲ್ಲಿ ಬೆಂಕಿಯ ಕೆನ್ನಾಲಿಗೆ ಚಾಚುತ್ತಿರುವ ವಿಡಿಯೊಗಳು ವೈರಲ್ ಆಗಿವೆ.


Spread the love
Share:

administrator

Leave a Reply

Your email address will not be published. Required fields are marked *