Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಬ್ರೂಕ್ಲಿನ್ ಚರ್ಚ್‌ನಲ್ಲಿ ಸ್ಫೋಟ! ಐವರು ಭಕ್ತರಿಗೆ ಗಾಯ; ಅಮೆರಿಕದಲ್ಲಿ ಹೆಚ್ಚಿದ ಆತಂಕ.

Spread the love

ನ್ಯೂಯಾರ್ಕ್‌: ಇಲ್ಲಿನ ಬೂಮಿಲ್ಲೆ ಪಟ್ಟಣದ ಸ್ಟೇಟ್ ರೂಟ್ ನಂ. 12ರ ಅಬಂಡಂಟ್ ಲೈಫ್ ಫೆಲೋಶಿಪ್ ಚರ್ಚ್ ನಲ್ಲಿ ಸಂಭವಿಸಿದ ಭೀಕರ ಸ್ಫೋಟದಲ್ಲಿ ಕನಿಷ್ಠ ಐದು ಮಂದಿ ಗಾಯಗೊಂಡಿದ್ದಾರೆ.
ನ್ಯೂಯಾರ್ಕ್ ಸ್ಟೇಟ್ ಪೊಲೀಸರು ಘಟನೆ ಬಗ್ಗೆ ತನಿಖೆ ಆರಂಭಿಸಿದ್ದಾರೆ. ಅಮೆರಿಕ ಕಾಲಮಾನದ ಪ್ರಕಾರ ಬೆಳಿಗ್ಗೆ 10.23ರ ವೇಳೆಗೆ ಘಟನೆ ಸಂಭವಿಸಿದ್ದು, ಚರ್ಚ್ ನ ಒಳಭಾಗದಲ್ಲಿ ಅನಿಲದ ವಾಸನೆ ಬರುತ್ತಿದೆ ಎಂದು ವರದಿಯಾದ ಸ್ವಲ್ಪ ಹೊತ್ತಿನಲ್ಲೇ ಸ್ಫೋಟ ಸಂಭವಿಸಿದೆ. ಸ್ಫೋಟಕ್ಕೆ ಮುನ್ನ ಅನಿಲದ ವಾಸನೆ ಬಂದಿದ್ದಾಗಿ ಪ್ರತ್ಯಕ್ಷದರ್ಶಿಗಳು ತನಿಖಾಧಿಕಾರಿಗಳಿಗೆ ಹೇಳಿದ್ದಾರೆ.

ಘಟನೆ ಬಗ್ಗೆನ್ಯೂಸ್ ವೀಕ್ ಗೆ ಹೇಳಿಕೆ ನೀಡಿದ ಪೊಲೀಸರು, ಬೂನ್ವಿಲ್ಲೆ ಅಗ್ನಿಶಾಮಕ ದಳದ ಸಿಬ್ಬಂದಿ ಕಟ್ಟಡದ ಒಳಗೆ ಇದ್ದು, ನಾಲ್ವರು ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಒಬ್ಬ ನಾಗರಿಕ ಸೇರಿದಂತೆ ಐದು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಇಬ್ಬರ ಸ್ಥಿತಿ ಚಿಂತಾಜನಕವಾಗಿದ್ದು, ಉಳಿದ ಮೂವರಿಗೆ ಅಪಾಯ ಇಲ್ಲ ಎಂದು ಹೇಳಿದ್ದಾರೆ.
ಚರ್ಚ್ ಕಟ್ಟಡ ಸಂಪೂರ್ಣ ನಾಶವಾಗಿದ್ದು, ಯಾವುದೇ ಅಪರಾಧ ಚಟುವಟಿಕೆಯ ಸೂಚನೆಗಳು ಕಾಣುತ್ತಿಲ್ಲ. ಪ್ರೊಪೇನ್ ಸಿಲಿಂಡ‌ರ್ ಗಳಿಂದ ಸ್ಫೋಟ ಸಂಭವಿಸಿರಬೇಕು ಎಂದು ಅಂದಾಜಿಸಿದ್ದಾಗಿ ಪೊಲೀಸರು ವಿವರಿಸಿದ್ದಾರೆ.
ಚರ್ಚ್ ನ ಪಾಸ್ಟರ್ ಮತ್ತು ಇತರರು ಪ್ರೊಪೇನ್ ಕಂಪನಿಗೆ ಮನವಿ ಮಾಡಿಕೊಂಡಿದ್ದು, ಸ್ಫೋಟಕ್ಕೆ ಮುನ್ನ ಅನಿಲ ಸೋರಿಕೆ ಬಗ್ಗೆ ಮಾಹಿತಿ ನೀಡಿದ್ದರು ಎಂದು ಚರ್ಚ್ ಧರ್ಮಾಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *