ತೆಲಂಗಾಣ ಔಷಧ ಘಟಕ ಸ್ಫೋಟದ ಕಾರಣ ನಿಖರ ಬಹಿರಂಗ

ಸಿಂಗಾರೆಡ್ಡಿ:ಸಿಗಾಚಿ ಇಂಡಸ್ಟ್ರೀಸ್ ಲಿಮಿಟೆಡ್ ಹಳೆಯ ಯಂತ್ರೋಪಕರಣಗಳನ್ನು ಬಳಸುತ್ತಿತ್ತು, ಬದಲಾಯಿಸಲು ಹಲವು ಬಾರಿ ಮನವಿ ಮಾಡಿದ್ದರು, ನಿರ್ಲಕ್ಷ್ಯಿಸಿದ್ದ ಸಂಸ್ಥೆ ಹಳೇಯ ಯಂತ್ರೋಪಕರಣಗಳನ್ನೆ ಬಳಸಲು ಕಾರ್ಮಿಕರನ್ನು ಒತ್ತಾಯಿಸುತ್ತಿತ್ತು ಎಂದು ಆಡಳಿತ ಮಂಡಳಿಯ ವಿರುದ್ಧ ದಾಖಲಿಸಲಾದ ಎಫ್ಐಆರ್ನಲ್ಲಿ ತಿಳಿಸಲಾಗಿದೆ.

ಎರಡು ದಿನಗಳ ಹಿಂದೆ ಕಂಪನಿಯ ಪಾಶಮೈಲಾರಂ ಘಟಕದಲ್ಲಿ ಸಂಭವಿಸಿದ ಸ್ಫೋಟದಲ್ಲಿ 36 ಜನರು ಸಾವನ್ನಪ್ಪಿದರು ಸುಮಾರು 17 ಮಂದಿ ಗಾಯಗೊಂಡಿದ್ದಾರೆ, ಸಂತ್ರಸ್ತರ ಕುಟುಂಬದ ಸದಸ್ಯರ ದೂರಿನ ಆಧಾರದ ಮೇಲೆ ಸಂಗರೆಡ್ಡಿ ಪೊಲೀಸರು ಸೋಮವಾರ ಕಾರ್ಖಾನೆ ಆಡಳಿತ ಮಂಡಳಿಯ ವಿರುದ್ಧ ಬಿಎನ್ಎಸ್ನ ಸೆಕ್ಷನ್ 105 (ಕೊಲೆಗೆ ಸಮಾನವಲ್ಲದ ಅಪರಾಧಿ ನರಹತ್ಯೆ), 110 (ಶಿಕ್ಷಾರ್ಹ ನರಹತ್ಯೆಗೆ ಯತ್ನಿಸುವುದು) ಮತ್ತು 117ರ (ಸ್ವಯಂಪ್ರೇರಿತವಾಗಿ ತೀವ್ರ ಗಾಯ ಉಂಟುಮಾಡುವುದು) ಅಡಿಯಲ್ಲಿ ಸ್ಫೋಟಕ್ಕೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಿಸಿದ್ದಾರೆ.
ದೂರುದಾರರ ತಂದೆ ಮತ್ತು ಸಿಗಾಚಿ ಕಂಪನಿಯ ಇತರ ಉದ್ಯೋಗಿಗಳು ಸಿಗಾಚಿ ಕಂಪನಿಯ ಆಡಳಿತ ಮಂಡಳಿಗೆ ಈಗಾಗಲೇ ಹಲವಾರು ಬಾರಿ ಯಂತ್ರೋಪಕರಣಗಳನ್ನು ಬದಲಾಯಿಸುವ ಬಗ್ಗೆ ಮನವಿ ಮಾಡಿದ್ದರು. ಏಕೆಂದರೆ ಅವು ತುಂಬಾ ಹಳೆಯದಾಗಿದ್ದವು ಅಪಾಯದ ಸಾಧ್ಯತೆಯ ಬಗ್ಗೆ ತಿಳಿಸಿದ್ದರು, ಹಳೇಯ ಯಂತ್ರೋಪಕರಣಗಳ ಬಳಕೆಯಿಂದ ಭಾರೀ ನಷ್ಟವನ್ನು ಉಂಟುಮಾಡಿದೆ ಎಂದು ಎಫ್ಐಆರ್ನಲ್ಲಿ ತಿಳಿಸಲಾಗಿದೆ. ಆದರೆ ಕಂಪನಿ ಆಡಳಿತ ಮಂಡಳಿಯು ಹಳೆಯ ಯಂತ್ರೋಪಕರಣಗಳನ್ನೇ ಬಳಸುತ್ತಿದ್ದರು, ಇದರಿಂದಾಗಿ ಘಟಕದಲ್ಲಿ ಸ್ಫೋಟ ಸಂಭವಿಸಿದೆ ಎಂದು ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ.
ಯಶವಂತ್ ರಾಜನಾಲಾ ಎಂಬುವರು ದೂರು ದಾಖಲಿಸಿದ್ದಾರೆ, ಅವರ ತಂದೆ ರಾಜನಾಲಾ ವೆಂಕಟ್ ಜಗನ್ ಮೋಹನ್ ಕಳೆದ 20 ವರ್ಷಗಳಿಂದ ಸಿಗಾಚಿಯಲ್ಲಿ ಉದ್ಯೋಗಿಯಾಗಿದ್ದರು. ಯಶವಂತ್ ಅವರ ತಂದೆ ತಮ್ಮ ಕುಟುಂಬ ಸದಸ್ಯರಿಗೆ ಇದನ್ನೇ ಹಲವು ಬಾರಿ ಹೇಳಿದ್ದರು ಎಂದು ಹೇಳಿದರು. ಆದರೆ ಕಂಪನಿಯ ಕಡೆಯಿಂದ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ಅವರು ಆರೋಪಿಸಿದರು.

ದುರಂತದ ದಿನದಂದು ಬೆಳಿಗ್ಗೆ 11 ಗಂಟೆಗೆ, ಯಶವಂತ್ ಅವರ ಚಿಕ್ಕಪ್ಪ (ಅವರ ತಂದೆಯ ಕಿರಿಯ ಸಹೋದರ ರಾಮ್ ಮೋಹನ್ ರಾವ್) ಅವರಿಗೆ ಕರೆ ಮಾಡಿ ಬೆಳಿಗ್ಗೆ 9.30 ರ ಸುಮಾರಿಗೆ ಸಿಗಾಚಿ ಕಂಪನಿಯಲ್ಲಿ ಬೆಂಕಿ ಅವಘಡ ಸಂಭವಿಸಿದೆ ಎಂದು ತಿಳಿಸಿದರು. ಕೆಲವು ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದರು, ಇತರರಿಗೆ ತೀವ್ರ ಸುಟ್ಟಗಾಯಗಳಾದವು. ಅವರು ತಕ್ಷಣ ಪತಂಚೇರು ಸರ್ಕಾರಿ ಏರಿಯಾ ಆಸ್ಪತ್ರೆಗೆ ಧಾವಿಸಿ ಅಲ್ಲಿ ಬಿದ್ದಿದ್ದ ತಮ್ಮ ತಂದೆಯ ಶವವನ್ನು ಗುರುತಿಸಿದರು.
ತೆಲಂಗಾಣ ಅಗ್ನಿಶಾಮಕ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಈ ಹಿಂದೆ ಕಂಪನಿಗೆ ಇಲಾಖೆಯಿಂದ ಯಾವುದೇ ಎನ್ಒಸಿ ಪಡೆದಿಲ್ಲ ಎಂದು ಹೇಳಿದ್ದಾರೆ. ಸ್ಥಾವರದಲ್ಲಿ ಅಗ್ನಿಶಾಮಕ ಎಚ್ಚರಿಕೆಗಳು ಮತ್ತು ಶಾಖ ಸಂವೇದಕಗಳು ಸೇರಿದಂತೆ ಯಾವುದೇ ಸಾಕಷ್ಟು ಸುರಕ್ಷತಾ ಕ್ರಮಗಳು ಇರಲಿಲ್ಲ. “ನಿರಪೇಕ್ಷಣಾ ಪ್ರಮಾಣಪತ್ರವನ್ನು ಪಡೆಯಲು ಒಂದು ಪ್ರಕ್ರಿಯೆ ಇದೆ. ಇದು ಆನ್ಲೈನ್ ಪ್ರಕ್ರಿಯೆಯಾಗಿದೆ. ಯಾವುದೇ ಸಂಸ್ಥೆಯು ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಿದ ನಂತರ, ಸಮಿತಿಯು ಅದರ ಬಗ್ಗೆ ನಿರ್ಧರಿಸುತ್ತದೆ. ಈ ಘಟಕವು ಯಾವುದೇ NOC ಗೆ ಅರ್ಜಿ ಸಲ್ಲಿಸಿಲ್ಲ ಮತ್ತು ಆದ್ದರಿಂದ ನಾವು ಅದನ್ನು ನೀಡಿಲ್ಲ” ಎಂದು ಅಧಿಕಾರಿ ಹೇಳಿದರು.
