ಮೊರೆನಾದಲ್ಲಿ ವಿಧವೆ ಸೊಸೆಯನ್ನು ಗುಂಡಿಕ್ಕಿ ಕೊಂದ ಮಾಜಿ ಯೋಧ: ಮರುಮದುವೆಗೆ ನಿರಾಕರಣೆ ಕಾರಣ?

ಮೊರೆನಾ(ಮಧ್ಯಪ್ರದೇಶ): ಮಾಜಿ ಸೇನಾಧಿಕಾರಿಯೊಬ್ಬರು ವಿಧವೆ ಸೊಸೆಯನ್ನೇ ಗುಂಡಿಕ್ಕಿ ಕೊಂದಿರುವ ಘಟನೆ ಮಧ್ಯಪ್ರದೇಶದ ಮೊರೆನಾ ಜಿಲ್ಲೆಯಲ್ಲಿ ನಡೆದಿದೆ.
ಆರೋಪಿ ಜ್ಞಾನ್ ಸಿಂಗ್ ಗುರ್ಜರ್ (65) ತನ್ನ ಸೊಸೆ ಪ್ರಿಯಾಂಕಾ(38) ಬಳಿ ತಮ್ಮ ಕುಟುಂಬದೊಳಗೆ ಮರುಮದುವೆಯಾಗಬೇಕೆಂಬ ಬೇಡಿಕೆಯನ್ನಿಟ್ಟಿದ್ದರು.
ಆದರೆ ಆಕೆ ಆತನ ಬೇಡಿಕೆಯನ್ನು ನಿರಾಕರಿಸಿದ್ದಾಳೆ.
ಇದೇ ವಿಷಯವಾಗಿ ಬುಧವಾರ (ಜೂ.12) ರಾತ್ರಿ 10 ಗಂಟೆಯ ಸುಮಾರಿಗೆ ಆತ ಪ್ರಿಯಾಂಕಾಳನ್ನು ಬಂದೂಕಿನಿಂದ ಗುಂಡಿಕ್ಕಿ ಹತ್ಯೆಗೈದು ಪರಾರಿಯಾಗಿದ್ದಾನೆ ಎಂದು ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯ ಉಸ್ತುವಾರಿ ದರ್ಶನ್ ಲಾಲ್ ಶುಕ್ಲಾ ಪಿಟಿಐಗೆ ತಿಳಿಸಿದ್ದಾರೆ.
ಮೊರೆನಾ ಜಿಲ್ಲಾ ಕೇಂದ್ರದಿಂದ ಸುಮಾರು 8 ಕಿ.ಮೀ ದೂರದಲ್ಲಿರುವ ಸಿವಿಲ್ ಲೈನ್ಸ್ ಪೊಲೀಸ್ ಠಾಣೆ ಪ್ರದೇಶದ ಸಿಕ್ರೋಡಾ ಕಾಲುವೆಯ ಬಳಿ ಗುಂಡಿನ ದಾಳಿ ನಡೆದಿದ್ದು, ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತನ್ನ ಪತಿಯ ಮರಣದ ನಂತರ, ಮಹಿಳೆ ತನ್ನ ಮೂವರು ಮಕ್ಕಳೊಂದಿಗೆ ತಾಯಿಯ ಮನೆಯಲ್ಲಿ ವಾಸಿಸುತ್ತಿದ್ದರು. ಆದಾಗ್ಯೂ, ನಾಲ್ಕು ದಿನಗಳ ಹಿಂದೆ ಅವಳು ತನ್ನ ಗಂಡನ ಮನೆಗೆ ಮರಳಿದ್ದಳು.
ಪ್ರಿಯಾಂಕಾಳ ಅವರ ಮಾವ ಗುರ್ಜರ್ ತನ್ನ ಅಣ್ಣನ ಮಗ ಧ್ರುವನೊಂದಿಗೆ ಮರುಮದುವೆ ಆಗುವಂತೆ ಅವಳ ಮೇಲೆ ಒತ್ತಡ ಹೇರುತ್ತಿದ್ದರು. ಆದರೆ ಈ ಪ್ರಸ್ತಾಪ ಅವಳಿಗೆ ಇಷ್ಟವಿರಲಿಲ್ಲ. ಜೊತೆಗೆ ತನ್ನ ತಂಗಿಗೆ ಈಗಾಗಲೇ ಮೂರು ಮಕ್ಕಳಿರುವುದರಿಂದ ಅವಳು ನಿರಾಕರಿಸಿದ್ದಳು. ಈ ವಿಷಯಕ್ಕೆ ಆಗಾಗ್ಗೆ ಜಗಳಗಳಿಗೆ ಕಾರಣವಾಗಿತ್ತು.ಈ ಕಾರಣಕ್ಕೆ ತನ್ನ ಸಹೋದರಿಯನ್ನು ಆತ ಹತ್ಯೆ ಮಾಡಿದ್ದಾನೆ ಎಂದು ಮೃತ ಮಹಿಳೆಯ ಸಹೋದರ ಮುಖೇಶ್ ಆರೋಪಿಸಿದ್ದಾರೆ.
ಮುಖೇಶ್ ಅವರ ಆರೋಪದ ಮೇರೆಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಆರೋಪಿಯು ಕಳೆದ 18 ತಿಂಗಳಲ್ಲಿ ತನ್ನ ಇಬ್ಬರು ಗಂಡು ಮಕ್ಕಳನ್ನು ಕಳೆದುಕೊಂಡಿದ್ದ. ಮೃತ ಪ್ರಿಯಾಂಕಾ ಅವರಿಗೆ ಮೂವರು ಮಕ್ಕಳಿದ್ದು, ಏಳು ವರ್ಷದ ಮಗಳು ಮತ್ತು 5, 3 ವರ್ಷದ ಇಬ್ಬರು ಗಂಡು ಮಕ್ಕಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.