“ನಾಯಕತ್ವ ಬದಲಾವಣೆ, ಸಂಪುಟ ಪುನರ್‌ರಚನೆ ಬಗ್ಗೆ ಯಾರೂ ಮಾತನಾಡದೆ ಬಾಯಿ ಮುಚ್ಚಿಕೊಂಡಿರಬೇಕು” – ಸಚಿವ ಬೋಸರಾಜು ಆಕ್ರೋಶ

ಬೆಂಗಳೂರು: ನಾಯಕತ್ವ ಬದಲಾವಣೆ ಮತ್ತು ಸಚಿವ ಸಂಪುಟ ಪುನರ್ ರಚನೆ (Cabinet Reshuffle) ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಬೇರೆ ಯಾರು ಈ ಬಗ್ಗೆ ಮಾತಾಡದೇ ಬಾಯಿ ಮುಚ್ಚಿಕೊಂಡು ಸುಮ್ಮನೆ ಇರಬೇಕು ಎಂದು ಸ್ವಪಕ್ಷದವರ ವಿರುದ್ಧವೇ ಸಚಿವ ಬೋಸರಾಜು (NS Boseraju) ಆಕ್ರೋಶ ಹೊರಹಾಕಿದ್ದಾರೆ.

ನಾಯಕತ್ವ ಬದಲಾಣೆ ಮತ್ತು ಸಂಪುಟ ವಿಸ್ತರಣೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಯಾರು ಏನೇ ಹೇಳಿದ್ರು ಹೈಕಮಾಂಡ್ ತೀರ್ಮಾನ ಮಾಡುತ್ತದೆ. ನಾನು 25 ವರ್ಷ ಕಾಂಗ್ರೆಸ್‌ನಲ್ಲಿ (Congress) ವಿವಿಧ ಹುದ್ದೆಯಲ್ಲಿ ಕೆಲಸ ಮಾಡಿದ್ದೇನೆ. ಯಾವತ್ತು ನಾನು ಅಧಿಕಾರ ಕೇಳಿಲ್ಲ. ಅಧಿಕಾರ ಬೇಕು ಅಂತ ಬಯೋಡಾಟಾ ರೆಡಿ ಮಾಡಿಲ್ಲ. ಮಂತ್ರಿ ಆಗಬೇಕು ಅಂತ ನಾನು ಶಾಸಕ, ಎಂಎಲ್‌ಸಿ ಆಗಲಿಲ್ಲ. ಫೋನ್ ಮಾಡಿದ್ರು ಬಂದು ಮಂತ್ರಿಯಾದೆ. ಒಂದು ಪಕ್ಷ ಶಿಸ್ತಿನ ರೀತಿ ಇರಬೇಕು. 100 ವರ್ಷದ ಇತಿಹಾಸದ ಪಕ್ಷ. ನಾವು ಮಾತಾಡಿದ ಕೂಡಲೇ ಮಾಧ್ಯಮಗಳು ಕೇಳುತ್ತಾರೆ. ಪರಮೇಶ್ವರ್, ಮುನಿಯಪ್ಪ ಯಾರಿಗೆ ಪ್ರಶ್ನೆ ಕೇಳಿದ್ರು ಒಂದೊಂದು ಹೇಳಿಕೆ ಮಾಧ್ಯಮಗಳಿಗೆ ಹೇಳಿದ್ದಾರೆ. ಸಿಎಂ ಅವರು ಹೈಕಮಾಂಡ್ ಹೇಳಿದಂತೆ ಕೇಳ್ತೀನಿ ಅಂತ ಹೇಳಿದ್ದಾರೆ. ಡಿಸಿಎಂ ಅವರು ಸಿಎಂ ಹೇಳಿದ ಮೇಲೆ ಮುಗೀತು ಅಂದಿದ್ದಾರೆ. ಶಿಸ್ತಿನ ಪಕ್ಷದಲ್ಲಿ ಎಲ್ಲರೂ ಬಾಯಿಮುಚ್ಚಿಕೊಂಡು ಇರಬೇಕು ಎಂದು ಸ್ವಪಕ್ಷದವರಿಗೆ ಕಿವಿಮಾತು ಹೇಳಿದರು.
ಹೈಕಮಾಂಡ್ ಇದೆ ಎಲ್ಲವನ್ನು ನೋಡಿಕೊಳ್ಳುತ್ತದೆ. ಎಲ್ಲರು ಮಾತಾಡೋದು ಸರಿಯಲ್ಲ. ಶಾಸಕರಾಗಿ ಶಾಸಕರ ಕೆಲಸ, ಮಂತ್ರಿಯಾಗಿ ಮಂತ್ರಿ ಕೆಲಸ ಮಾಡಬೇಕು. ಇಲ್ಲದೆ ಹೋದರೆ ಬಿಜೆಪಿ ತರಹ ಕಾಂಗ್ರೆಸ್ ಕೂಡಾ 4 ಬಾಗಿಲು ಆಗುತ್ತದೆ. ಅಶೋಕ್, ವಿಜಯೇಂದ್ರ, ಜೋಷಿ ಬಣ ಆದ ಹಾಗೆ ಕಾಂಗ್ರೆಸ್‌ನಲ್ಲೂ ಆಗಬೇಕಾ? ಹೈಕಮಾಂಡ್, ಸಿಎಂ, ಡಿಸಿಎಂ ಹೇಳಿದಾಗೆ ಕೇಳಬೇಕು. ಬಾಯಿ ಮುಚ್ಚಿಕೊಂಡು ಸುಮ್ಮನೆ ಇರಬೇಕು. ಜನರು ನಮಗೆ ಅಧಿಕಾರ ಕೊಟ್ಟಿರೋದು ಜನ ಸೇವೆ ಮಾಡಲು. ಹೈಕಮಾಂಡ್ ಎಲ್ಲವನ್ನು ತೀರ್ಮಾನ ಮಾಡುತ್ತದೆ. ಹೈಕಮಾಂಡ್ ಸಮಯ ಬಂದಾಗ ಹೇಳುತ್ತಾರೆ. ಹೈಕಮಾಂಡ್ ಈಗಾಗಲೇ ಮಾಡಿ ತೋರಿಸಿದೆ. ಅದೇ ರೀತಿ ಕಾದು ಕಾದು ಹೈಕಮಾಂಡ್ ನಿರ್ಧಾರ ಮಾಡುತ್ತದೆ ಎಂದು ತಿಳಿಸಿದರು.
ಯಾವುದೇ ನಾಯಕರು ಮಾತಾಡೋದು ಸರಿಯಲ್ಲ. ನಾವೆಲ್ಲರು ಬಾಯಿ ಮುಚ್ಚಿಕೊಂಡು ಇರಬೇಕು. ಯಾವುದೇ ಆದರು ಹೈಕಮಾಂಡ್ ಸಮಯ ಬಂದಾಗ ಏನು ಮಾಡಬೇಕೋ ಮಾಡುತ್ತಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಮಾಡಲು ಆಗಿಲ್ಲ. ಮೋದಿ, ಅಮಿತ್ ಶಾ ಇದ್ದರು ಮಾಡಲು ಆಗಿಲ್ಲ. ಇಲ್ಲ ವಿಜಯೇಂದ್ರ ಮುಂದುವರೆತ್ತಾರೆ ಅಂತ ಹೇಳೋರು ಇಲ್ಲ. ಯತ್ನಾಳ್, ಈಶ್ವರಪ್ಪ ಒಂದೊಂದು ಮಾತನಾಡುತ್ತಾರೆ. ಅವರು ನಮ್ಮ ಪಕ್ಷದ ಬಗ್ಗೆ ಮಾತಾಡೋದು ಬೇಡ ಎಂದು ಕಿಡಿಕಾರಿದರು
ಡಿಕೆಶಿ ಸಿಎಂ ಆದರೆ ಕೆಪಿಸಿಸಿ ಕಚೇರಿ ಬಾಗಿಲು ಹಾಕಬೇಕು ಎಂದ ಮಾಜಿ ಸಚಿವ ರಾಜಣ್ಣ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಅದು ಅವರ ವೈಯಕ್ತಿಕ ಅಭಿಪ್ರಾಯ. ವೈಯಕ್ತಿಕ ಅಭಿಪ್ರಾಯ ಹೇಳೋಕೆ ಎಲ್ಲರಿಗೂ ಅವಕಾಶ ಇದೆ. ಮೋದಿ, ಅಮಿತ್ ಶಾ ಬಗ್ಗೆಯೂ ಅವರ ಪಕ್ಷದಲ್ಲಿ ಮಾತಾಡಿದ್ದಾರೆ ತೊರಿಸಲಾ? ಹಾಗೆ ನಮ್ಮಲ್ಲು ಮಾತನಾಡುತ್ತಾರೆ. ಪರಮೇಶ್ವರ್ ಹೇಳಿಕೆ ಕೂಡಾ ಅವರ ಅಭಿಪ್ರಾಯವೇ ಎಂದರು
ಹೈಕಮಾಂಡ್ ಹೇಳಿದ್ರೆ ಇವತ್ತೆ ನಾವು ಸಚಿವ ಸ್ಥಾನ ಬಿಟ್ಟು ಕೊಡೋಕೆ ನಾವೆಲ್ಲರು ತಯಾರಿದ್ದೇವೆ. ನಾವು ಯಾರು ವಿಸ್ತರಣೆ ಬಗ್ಗೆ ಮಾತನಾಡುತ್ತಿಲ್ಲ. ಆದ್ರು ಪೇಪರ್, ಚಾನಲ್‌ನಲ್ಲಿ ಬರೋದೆ ಭಯ ಆಗುತ್ತಿದೆ. ನಾವು ಅಭಿವೃದ್ಧಿ ಕೆಲಸ ಮಾಡುತ್ತಿದ್ದರೂ ನಮ್ಮನ್ನ ಹರಾಜು ಹಾಕಿದ್ರೆ ಹೇಗೆ? ಪರಮೇಶ್ವರ್ ಅಭಿಪ್ರಾಯ ಅವರದ್ದು. ನಮ್ಮದು ಹೈಕಮಾಂಡ್ ತೀರ್ಮಾನ ಅಂತಿಮ. ಹೈಕಮಾಂಡ್ ಮಾತು ಕೇಳಿದವರು ಮಾತ್ರ ಈ ಪಕ್ಷದಲ್ಲಿ ಇರಬೇಕು. 2.5 ವರ್ಷ ಆಗಿದೆ. ಸಂಪುಟ ವಿಸ್ತರಣೆ ಬಗ್ಗೆ ಹೈಕಮಾಂಡ್‌ಗೆ ಹೇಳ್ತೀನಿ, ಹೈಕಮಾಂಡ್ ಹೇಳಿದಂತೆ ಕೇಳ್ತೀನಿ ಅಂತ ಸಿಎಂ ಹೇಳಿದ್ದಾರೆ ಅದು ಸರಿ ಇದೆ. ಅದು ಬಿಟ್ಟು ಎಲ್ಲರು ಒಂದೊಂದು ಮಾತಾಡೋದು ಸರಿಯಲ್ಲ. ಬಾಯಿಮುಚ್ಚಿಕೊಂಡು ಇರಬೇಕು ಎಂದು ವಾಗ್ದಾಳಿ ನಡೆಸಿದರು