Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಕಳ್ಳನಿಗೂ ‘ಟೇಸ್ಟ್’ ಇದೆ! ಬ್ರ್ಯಾಂಡೆಡ್ ಬಟ್ಟೆಗಳ ಮೇಲೆ ಕಣ್ಣು ಹಾಕಿ ಕಳವು

Spread the love

ಬೆಂಗಳೂರು: ಮನೆ ಮುಂಭಾಗ ಒಣಗಲು ಹಾಕಿದ್ದ ಬಟ್ಟೆಗಳ ಪೈಕಿ ಬ್ರ್ಯಾಂಡೆಡ್‌ ಬಟ್ಟೆಗಳನ್ನೇ ಕಳ್ಳನೊಬ್ಬ ಹಾಡಹಗಲೇ ಕದ್ದು ಪರಾರಿಯಾಗಿರುವ ಘಟನೆ ಪುಲಿಕೇಶಿನಗರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಹುಚಿನ್ಸ್‌ ರಸ್ತೆಯ ಎರಡನೇ ಕ್ರಾಸ್‌ನಲ್ಲಿ ಮೇ 13ರಂದು ಮಧ್ಯಾಹ್ನ 1.33ಕ್ಕೆ ಈ ಘಟನೆ ನಡೆದಿದೆ.
ಈ ಸಂಬಂಧ ಮಾಧುರಿ ಅದ್ನಾಲ್‌ ಎಂಬುವರು ಎಕ್ಸ್‌ ಖಾತೆಯಲ್ಲಿ ಸಿಸಿ ಕ್ಯಾಮೆರಾ ವಿಡಿಯೋ ಸಮೇತ ಪೋಸ್ಟ್‌ ಮಾಡಿ ನಗರ ಪೊಲೀಸರಿಗೂ ಟ್ಯಾಗ್‌ ಮಾಡಿದ್ದಾರೆ.

ಕೆಲ ದಿನಗಳ ಹಿಂದೆ ಇದೇ ರೀತಿ ಘಟನೆ ನಡೆದಿತ್ತು. ಇದೀಗ ಮತ್ತೆ ಗುಣಮಟ್ಟದ ಬಟ್ಟೆಗಳನ್ನೇ ಕಳವು ಮಾಡಿ ಪರಾರಿಯಾಗಿದ್ದಾನೆ ಎಂದು ಮಾಧುರಿ ಅದ್ನಾಲ್‌ ತಮ್ಮ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ನಗರ ಪೊಲೀಸರು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಹಾಡಹಗಲೇ ಬಟ್ಟೆಗಳ ಕಳವು ಮಾಡುತ್ತಿರುವುದಕ್ಕೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದು, ಆತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ವಿಡಿಯೋದಲ್ಲಿ ಏನಿದೆ?: ದೋಷ ಪೂರಿತ ನಂಬರ್‌ ಪ್ಲೇಟ್‌ ಅಳವಡಿಸಿದ್ದ ದ್ವಿಚಕ್ರ ವಾಹನದಲ್ಲಿ ಬಂದಿರುವ ಕಳ್ಳ, ಮನೆ ಎದುರು ದ್ವಿಚಕ್ರ ವಾಹನ ನಿಲ್ಲಿಸಿ ಸುತ್ತಮುತ್ತ ಯಾರಾದರೂ ಇದ್ದಾರೆಯೇ ಎಂದು ಗಮನಿಸಿದ್ದಾನೆ. ಬಳಿಕ ಗೇಟ್‌ ತೆಗೆದುಕೊಂಡು ಒಳಗೆ ಬಂದು ಮನೆ ಎದುರು ಒಣಗಲು ಹಾಕಿದ್ದ ಬಟ್ಟೆಗಳ ಪೈಕಿ ಕೇವಲ ಬ್ರ್ಯಾಂಡೆಡ್‌ ಬಟ್ಟೆಗಳನ್ನು ಕದ್ದು ಬೈಕ್‌ನಲ್ಲಿ ಪರಾರಿಯಾಗಿದ್ದಾನೆ. ಈ ಘಟನೆ ಕುರಿತ ದೂರಿಗೆ ಎಕ್ಸ್‌ ಖಾತೆಯಲ್ಲೇ ಪ್ರತಿಕ್ರಿಯಿಸಿರುವ ನಗರ ಪೊಲೀಸರು ಘಟನೆ ಕುರಿತು ಹೆಚ್ಚಿನ ಮಾಹಿತಿ ಪಡೆದುಕೊಂಡು ಆರೋಪಿ ಪತ್ತೆ ಕಾರ್ಯ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *