Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

“ಇಂದಿರಾಗಾಂಧಿ ಕೈಯಲ್ಲೂ ಆಗಿಲ್ಲ, ಪ್ರಿಯಾಂಕ್ ಖರ್ಗೆ ಆರ್ಎಸ್ಎಸ್ ಬಂದ್ ಮಾಡ್ತಾರಾ?”:

Spread the love

ಉಡುಪಿ: ಇಂದಿರಾಗಾಂಧಿಯವರಿಗೆ ಆರ್‌ಎಸ್‍ಎಸ್ ಬಂದ್ ಮಾಡಲು ಆಗಿಲ್ಲ. ಪ್ರಿಯಾಂಕ ಖರ್ಗೆ ಮಾಡ್ತಾರಂತೆ ಮಾಡಲಿ ನೋಡೋಣ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿಕೆ ನೀಡಿದ್ದಾರೆ.

ಆರ್‌ಎಸ್‍ಎಸ್ ಬಗ್ಗೆ ಪ್ರಿಯಾಂಕ ಖರ್ಗೆ ನೀಡಿರುವ ಹೇಳಿಕೆ ವಿಚಾರವಾಗಿ ಉಡುಪಿಯಲ್ಲಿ ಮಾತನಾಡಿದ ಅವರು ಈ ಬಗ್ಗೆ ನಾನು ವ್ಯಕ್ತಿಗತ ದೂಷಣೆ ಮಾಡುವುದಿಲ್ಲ. ಪ್ರಧಾನಿಯಾಗಿದ್ದ ನೆಹರು ಅವರಿಗೆ ಆರ್ ಎಸ್ ಎಸ್ ರದ್ದು ಮಾಡಲು ಸಾಧ್ಯವಾಗಿಲ್ಲ. ಅವರೇ ಪಥ ಸಂಚಲದಲ್ಲಿ ಅವಕಾಶ ಕೊಟ್ಟು ಗೌರವಿಸಿದರು. ಚೀನಾ ಯುದ್ದದಲ್ಲಿ ಸೇನೆಗೆ ಬೆಂಬಲವಾಗಿ ನಿಂತದ್ದು ಆರ್ ಎಸ್ ಎಸ್ . ಪ್ರಿಯಾಂಕ ಖರ್ಗೆ ಅವರಿಗೆ ಇದೆಲ್ಲ ಅರ್ಥವಾಗಬೇಕು. ತುರ್ತು ಪರಿಸ್ಥಿತಿ ಕಾಲದಲ್ಲಿ ಇಂದಿರಾಗಾಂಧಿಯವರಿಗೆ ಆರ್ ಎಸ್ ಎಸ್ ಬಂದ್ ಮಾಡಲು ಆಗಿಲ್ಲ. ಪ್ರಿಯಾಂಕ ಖರ್ಗೆ ಮಾಡ್ತಾರಂತೆ ಮಾಡ್ಲಿ ನೋಡೋಣ ಎಂದರು.


Spread the love
Share:

administrator

Leave a Reply

Your email address will not be published. Required fields are marked *