ನೌಕರರ ಲೇ ಆಫ್ ಮಾಡಿದರೂ, ಮಾನವೀಯತೆಯಲ್ಲಿ ಗೆದ್ದ ಸಿಇಒ

ಬೆಂಗಳೂರು: ಹಲವಾರು ಟೆಕ್ ದೈತ್ಯ ಕಂಪನಿಗಳು (Company) ತಮ್ಮ ಉದ್ಯೋಗಿಗಳನ್ನು (Jobs) ಕೆಲಸದಿಂದ ತೆಗೆದುಹಾಕುತ್ತಿರುವುದು ಇಂದು ಕಾಮನ್ ಆಗಿದೆ. ಹಾಗಾಗಿ ಲೇ ಆಫ್ ಆಯ್ತಂತೆ, ಕಾಸ್ಟ್ ಕಟ್ಟಿಂಗ್, ಕೆಲಸದಿಂದ ಕಿತ್ತಾಕಿದ್ರಂತೆ ಅಂದಾಗ ಈ ದಿನಗಳಲ್ಲಿ ಯಾರೂ ಅಷ್ಟಾಗಿ ಕೇರ್ ಮಾಡುತ್ತಿಲ್ಲ, ಯಾಕೆಂದರೆ ಇಂಥಹ ಸುದ್ದಿ ಪ್ರತಿನಿತ್ಯ ನೋಡುತ್ತೇವೆ, ನೀವು ನೋಡದೆ ಇರೋ ಟ್ವಿಸ್ಟ್ ಈ ಘಟನೆಯಲ್ಲಿದೆ.
ಕಂಪನಿಯು ತನ್ನ 70 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿದ್ದ ನಂತರ ಪರಿಸ್ಥಿತಿಯನ್ನು ನಿಭಾಯಿಸಿದ ರೀತಿಗೆ ಓಕ್ಕ್ರೆಡಿಟ್ನ ಸಿಇಒ ಪ್ರಶಂಸೆ ಗಳಿಸುತ್ತಿದ್ದಾರೆ.

ಬೆಂಗಳೂರು ಮೂಲದ ಸಿಇಒ ಹರ್ಷ್ ಪೋಖರ್ಣ ಅವರು ಬಜೆಟ್ ನಿರ್ಬಂಧಗಳಿಂದಾಗಿ ಓಕ್ಕ್ರೆಡಿಟ್ 70 ಉದ್ಯೋಗಿಗಳನ್ನು ಕೆಲಸದಿಂದ ಕೈಬಿಡಬೇಕಾದ ಸಮಯದ ಮನಮುಟ್ಟುವ ಸ್ಟೋರಿಯೊಂದನ್ನು ಲಿಂಕ್ಡ್ಇನ್ನಲ್ಲಿ ಹಂಚಿಕೊಂಡಿದ್ದಾರೆ.
ಲಿಂಕ್ಡ್ಇನ್ ಮೂಲಕ ಪೋಸ್ಟ್ ಮಾಡಿದ ಅವರು, ಕಂಪನಿಯು ಉದ್ಯೋಗಿಗಳಿಗೆ ಹೊಸ ಉದ್ಯೋಗಗಳನ್ನು ಹುಡುಕಲು ಸಹಾಯ ಮಾಡುವುದಲ್ಲದೆ, ಅವರಲ್ಲಿ 67 ಜನರಿಗೆ ನೋಟಿಸ್ ಅವಧಿಯನ್ನು ಪೂರೈಸುವಾಗ ಇತರ ಕೆಲವು ಕಂಪನಿಗಳಲ್ಲಿ ಕೆಲಸ ಸಿಕ್ಕಿತು ಎಂಬುದನ್ನು ವಿವರಿಸಿದರು.
ಬೇರೆ ಉದ್ಯೋಗಗಳನ್ನು ಹುಡುಕಲು ಸಾಧ್ಯವಾಗದ ಆ ಮೂವರಿಗೆ, ಕಂಪನಿಯು ಅವರಿಗೆ 2 ತಿಂಗಳ ಹೆಚ್ಚುವರಿ ಸಂಬಳವನ್ನು ನೀಡಿತು ಎನ್ನುವುದನ್ನು ತಿಳಿಸಿದ್ದಾರೆ. ಇದನ್ನು ಕೇಳಿ ನೆಟ್ಟಿಗರು ವ್ಯಾಪಕವಾಗಿ ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದಾರೆ.
ಅವರ ಪೋಸ್ಟ್ ಹೀಗಿದೆ: 18 ತಿಂಗಳ ಹಿಂದೆ, ನಾವು 70 ಜನರನ್ನು ಕೆಲಸದಿಂದ ತೆಗೆದುಹಾಕಿದ್ದೇವೆ. ನಂತರ ಏನಾಯಿತು? ನಾವು ತುಂಬಾ ಕೆಲಸ ಮಾಡುತ್ತಿದ್ದೆವು. ತುಂಬಾ ವೇಗವಾಗಿ ನೇಮಕಾತಿಗಳನ್ನು ಮಾಡಿದೆವು. ಅದು ನಮ್ಮ ತಪ್ಪು. ನಮ್ಮ ತಪ್ಪುಗಳನ್ನು ನಾವು ಹೌದೆಂದು ಒಪ್ಪಿಕೊಳ್ಳುತ್ತೇವೆ. ಒಬ್ಬ ಸಂಸ್ಥಾಪಕನಾಗಿ ನಾನು ಮಾಡಿದ ಕಠಿಣ ಕೆಲಸಗಳಲ್ಲಿ ಇದು ಒಂದು ಎಂದು ಅವರು ಹೇಳಿದ್ದಾರೆ.
ಆದರೆ ನಾವು ಅದನ್ನು ಸರಿಯಾದ ರೀತಿಯಲ್ಲಿ ಮಾಡಲು ಪ್ರಯತ್ನಿಸಿದ್ದೇವೆ. ನಾವು ಅವರಿಗೆ 3 ತಿಂಗಳ ನೋಟಿಸ್ ನೀಡಿದ್ದೇವೆ. ರೆಫರೆನ್ಸ್, ಪರಿಚಯಗಳು, ಉದ್ಯೋಗ ಮುನ್ನಡೆಗೆ – ಸಹಾಯ ಮಾಡಬಹುದಾದ ಯಾವುದೇ ಸಂಗತಿ ಇದ್ದರೂ ನಾವು ಅಲ್ಲಿ ಸಹಾಯ ಮಾಡಿದ್ದೇವೆ. ನೋಟಿಸ್ ಅವಧಿ ಮುಗಿಯುವ ಮೊದಲು 67 ಜನರನ್ನು ಬೇರೆ ಕಂಪೆನಿಗಳು ನೇಮಿಸಿದವು. ನೇಮಕ ಆಗದ 3 ಜನರಿಗೆ, ನಾವು 2 ತಿಂಗಳ ಹೆಚ್ಚುವರಿ ಸಂಬಳವನ್ನು ನೀಡಿದ್ದೇವೆ ಎಂದು ಅವರು ಹೇಳಿದರು.