Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಭಾರತದಲ್ಲಿ 3 ಎನ್‌ಎಂ ಚಿಪ್ ಡಿಸೈನ್ ಸೆಂಟರ್ ಸ್ಥಾಪನೆ: ಎಚ್‌ಸಿಎಲ್ ಮತ್ತು ಫಾಕ್ಸ್‌ಕಾನ್‌ನ ಸೆಮಿಕಂಡಕ್ಟರ್ ಘಟಕಕ್ಕೂ ಕೇಂದ್ರ ಅನುಮೋದನೆ

Spread the love

ನವದೆಹಲಿ: ಎಚ್​​ಸಿಎಲ್ ಟೆಕ್ನಾಲಜೀಸ್ ಮತ್ತು ಫಾಕ್ಸ್​​ಕಾನ್ ಸಂಸ್ಥೆಗಳು ಜಂಟಿಯಾಗಿ ಸ್ಥಾಪಿಸಬೇಕೆಂದಿರುವ ಸೆಮಿಕಂಡಕ್ಟರ್ ಘಟಕಕ್ಕೆ ಕೇಂದ್ರ ಸಂಪುಟ ಇಂದು ಬುಧವಾರ ಅನುಮೋದನೆ ನೀಡಿದೆ. ಈ ವಿಷಯವನ್ನು ಕೇಂದ್ರ ಐಟಿ ಮತ್ತು ಎಲೆಕ್ಟ್ರಾನಿಕ್ಸ್ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ. ಉತ್ತರಪ್ರದೇಶ ಜೇವರ್​​​ನಲ್ಲಿ 3,076 ರೂ ಹೂಡಿಕೆಯಲ್ಲಿ ಸೆಮಿಕಂಡಕ್ಟರ್ ಘಟಕ ನಿರ್ಮಾಣವಾಗಲಿದೆ. ಕೇಂದ್ರ ಅನುಮತಿಸಿರುವ ಆರನೇ ಸೆಮಿಕಂಡಕ್ಟರ್ ಘಟಕ ಇದಾಗಿದೆ. ಈ ಹಿಂದೆ ಅನುಮೋದನೆ ನೀಡಿರುವ ಐದು ಘಟಕಗಳು ಅಂತಿಮ ನಿರ್ಮಾಣ ಹಂತದಲ್ಲಿವೆ ಎನ್ನುವ ಮಾಹಿತಿಯನ್ನು ಎ ವೈಷ್ಣವ್ ನೀಡಿದ್ದಾರೆ.

2027ಕ್ಕೆ ಕಾರ್ಯಾರಂಭಿಸುವ ಉದ್ದೇಶ ಇರುವ ಎಚ್​​ಸಿಎಲ್ ಮತ್ತು ಫಾಕ್ಸ್​​ಕಾನ್​​ನ ಈ ಘಟಕದಲ್ಲಿ ಡಿಸ್​​ಪ್ಲೇ ಇರುವಂತಹ ಮೊಬೈಲ್ ಫೋನ್, ಲ್ಯಾಪ್​ಟಾಪ್, ಆಟೊಮೊಬೈಲ್, ಕಂಪ್ಯೂಟರ್ ಹಾಗೂ ಇತರ ಸಾಧನಗಳಿಗೆ ಡಿಸ್​​ಪ್ಲೇ ಡ್ರೈವರ್ ಚಿಪ್​​ಗಳನ್ನು ತಯಾರಿಸಲಾಗುತ್ತದೆ. ಒಂದು ತಿಂಗಳಲ್ಲಿ 20,000 ವೇಫರ್​​ಗಳು ಹಾಗೂ 3.6 ಕೋಟಿ ಚಿಪ್​​ಗಳನ್ನು ತಯಾರಿಸುವ ಸಾಮರ್ಥ್ಯ ಈ ಘಟಕಕ್ಕೆ ಇರಲಿದೆ. ಉತ್ತರಪ್ರದೇಶದ ಜೇವರ್ ವಿಮಾನ ನಿಲ್ದಾಣ ಸಮೀಪವೇ ಇರುವ ಕೈಗಾರಿಕಾ ಪ್ರದೇಶದಲ್ಲಿ ಸ್ಥಾಪನೆಯಾಗಲಿರುವ ಈ ಘಟಕದಲ್ಲಿ 2,000 ಉದ್ಯೋಗಸೃಷ್ಟಿಯಾಗುವ ನಿರೀಕ್ಷೆ ಇದೆ.

ಅನುಮೋದನೆಗೊಂಡಿರುವ ಇತರ ಐದು ಸೆಮಿಕಂಡ್ಟರ್ ಘಟಕಗಳು

  1. ಮೈಕ್ರಾನ್ ಟೆಕ್ನಾಲಜಿ, (ಸಾನಂದ್, ಗುಜರಾತ್)
  2. ಟಾಟಾ ಎಲೆಕ್ಟ್ರಾನಿಕ್ಸ್ ಮತ್ತು ಪವರ್​​ಚಿಪ್ ಸೆಮಿಕಂಡಕ್ಟರ್, (ಧೊಲೇರಾ ಗುಜರಾತ್)
  3. ಟಾಟಾ ಸೆಮಿಕಂಡಕ್ಟರ್ ಅಸೆಂಬ್ಲಿ ಅಂಡ್ ಟೆಸ್ಟ್, (ಅಸ್ಸಾಮ್)
  4. ಸಿಜಿ ಪವರ್, ರಿನಿಸಾಸ್ ಎಲೆಕ್ಟ್ರಾನಿಕ್ಸ್ ಮತ್ತು ಸ್ಟಾರ್ಸ್ ಮೈಕ್ರೋ ಎಲೆಕ್ಟ್ರಾನಿಕ್ಸ್ (ಸಾನಂದ್, ಗುಜರಾತ್)
  5. ಕೇನೆಸ್ ಸೆಮಿಕಾನ್ (ಸಾನಂದ್, ಗುಜರಾತ್)

ಭಾರತದಲ್ಲಿ ಅನುಮೋದನೆಗೊಂಡಿರುವ ಆರು ಸೆಮಿಕಂಡಕ್ಟರ್ ಘಟಕಗಳಲ್ಲಿ ನಾಲ್ಕು ಗುಜರಾತ್​​​ನಲ್ಲಿ ನಿರ್ಮಾಣವಾಗುತ್ತಿರುವುದು ವಿಶೇಷ.

ಬೆಂಗಳೂರು ಮತ್ತು ನೋಯ್ಡಾದಲ್ಲಿ ಭಾರತದ ಮೊದಲ 3 ಎನ್​​ಎಂ ಚಿಪ್ ಡಿಸೈನ್ ಸೆಂಟರ್

ಬಹಳ ಮುಖ್ಯವಾದ ಮತ್ತು ಕ್ಲಿಷ್ಟಕರಾದ 3 ನ್ಯಾನೋಮೀಟರ್ ಚಿಪ್ ಡಿಸೈನ್ ಸೌಲಭ್ಯ ಭಾರತದಲ್ಲಿ ಲಭ್ಯ ಇರಲಿದೆ. ನಿನ್ನೆ ಮಂಗಳವಾರ ಸಚಿವ ಎ ವೈಷ್ಣವ್ ಅವರು ಬೆಂಗಳೂರು ಮತ್ತು ನೋಯ್ಡಾದಲ್ಲಿ ಈ ಚಿಪ್ ಡಿಸೈನ್ ಸೆಂಟರ್​​​ಗಳನ್ನು ಉದ್ಘಾಟನೆ ಮಾಡಿದ್ದಾರೆ.

ಜಪಾನ್ ಮೂಲದ ರೆನಿಸಾಸ್ ಎಲೆಕ್ಟ್ರಾನಿಕ್ಸ್ ಸಂಸ್ಥೆಯು ಈ ಎರಡು ಕಡೆ 3 ಎನ್​ಎಂ ಚಿಪ್ ಸಿಸೈನ್ ಸೆಂಟರ್ ಸ್ಥಾಪಿಸುತ್ತಿದೆ. ಅಮೆರಿಕದ ಅಪ್ಲೈಡ್ ಮೆಟೀರಿಯಲ್ಸ್, ಲ್ಯಾಮ್ ರಿಸರ್ಚ್ ಸಂಸ್ಥೆಗಳೂ ಕೂಡ ಈ ಭಾರತದ ಸೆಮಿಕಂಡಕ್ಟರ್ ಉದ್ಯಮ ಬೆಳವಣಿಗೆಗೆ ಸಹಾಯಕವಾಗಿವೆ.

ಭಾರತದಲ್ಲಿ 5 ನ್ಯಾನೋಮೀಟರ್ ಮತ್ತು 7 ನ್ಯಾನೋಮೀಟರ್ ಚಿಪ್ ಡಿಸೈನ್ ಸೆಂಟರ್​​ಗಳಿವೆ. ಈಗ ಮೊದಲ ಬಾರಿಗೆ 3 ಎನ್​​ಎಂಗೆ ಅಪ್​​ಗ್ರೇಡ್ ಆಗಲಾಗುತ್ತಿದೆ. ಇಲ್ಲಿ ನ್ಯಾನೋಮೀಟರ್ ಅಂಕಿಯು ಚಿಪ್​​ನಲ್ಲಿರುವ ಟ್ರಾನ್ಸಿಸ್ಟರ್ ಗಾತ್ರವನ್ನು ಸೂಚಿಸುತ್ತದೆ. 5 ಎನ್​​ಎಂ ಚಿಪ್​​ಗಿಂತ 3 ಎನ್​​ಎಂ ಚಿಪ್ ಗಾತ್ರದಲ್ಲಿ ಚಿಕ್ಕದಾಗಿರುತ್ತದೆ, ಹೆಚ್ಚು ಟ್ರಾನ್ಸಿಸ್ಟರ್​​ಗಳನ್ನು ಹೊಂದಿರುತ್ತದೆ.

ಸದ್ಯ, ಉದ್ಯಮ ವಲಯದಲ್ಲಿ 3 ಎನ್​​ಎಂ ಚಿಪ್​​ಗಳು ಸ್ಟ್ಯಾಂಡರ್ಡ್ ಎನಿಸಿವೆ. 2 ಎನ್​ಎಂ ಮತ್ತು 1 ಎನ್​​ಎಂ ಚಿಪ್​​​ಗಳು ಇನ್ನೂ ಪ್ರಯೋಗ ಹಂತದಲ್ಲಿದ್ದು, ಕಮರ್ಷಿಯಲ್ ಬಿಡುಗಡೆ ಆಗಿಲ್ಲ. ಈ ಹಿನ್ನೆಲೆಯಲ್ಲಿ ಭಾರತದಲ್ಲಿ 3 ಎನ್​​ಎಂ ಚಿಪ್ ಡಿಸೈನ್ ಸೆಂಟರ್ ಆರಂಭವಾಗಿರುವುದು ಸ್ವಾಗತಾರ್ಹದ ಸಂಗತಿ.


Spread the love
Share:

administrator

Leave a Reply

Your email address will not be published. Required fields are marked *