“ನಕಲಿಗಳಿಗೆ ಪಾಠ ಕಲಿಸಲು ಹಿಂದೂ ಪಕ್ಷದ ಸ್ಥಾಪನೆಯೇ ಉತ್ತರ” ರಾಜೇಶ್ ಪವಿತ್ರನ್, ಹಿಂದೂ ಮಹಾ ಸಭಾ

ಭಾರತೀಯ ಜನತಾ ಪಕ್ಷದ ವಿರೋಧ ಪಕ್ಷದ ನಾಯಕರಾದ ಆರ್ ಅಶೋಕ್ ರವರು ಹಿಂದುತ್ವದ ಪ್ರತೀಕವಾದ ತಿಲಕವನ್ನು ಧರಿಸಲು ನಿರಾಕರಿಸಿದ್ದು,ಇದು ಬಹುಸಂಖ್ಯಾತ ಹಿಂದು ಸಮಾಜಕ್ಕೆ ಮಾಡಿದ ಅಪಮಾನ ಮಾತ್ರವಲ್ಲ ಇದು ಧರ್ಮಕ್ಕೆ ಮಾಡಿದ ದ್ರೋಹದ ಎಂದು ಹಿಂದೂ ಮಹಾ ಸಭಾದ ದುರೀಣರಾದ ರಾಜೇಶ್ ಪವಿತ್ರನ್ ಆಕ್ರೋಶ ವ್ಯಕ್ತ ಪಡಿಸಿದರು.

ಭಾರತೀಯ ಜನತಾ ಪಕ್ಷದ ನಕಲಿ ಹಿಂದುತ್ವದ ಅಸಲಿ ಮುಖವಾಡ ಕಳಚಿ ಬಿದ್ದಿದ್ದು ನಕಲಿ ಹಿಂದುತ್ವಕ್ಕೆ ಬುದ್ದಿ ಕಲಿಸಲು ಹೊಸ ಹಿಂದೂ ಪಕ್ಷ ಸ್ಥಾಪನೆಯೇ ಉತ್ತರ ಎಂದು ರಾಜೇಶ್ ಪವಿತ್ರನ್ ಅಭಿಪ್ರಾಯ ವ್ಯಕ್ತ ಪಡಿಸಿದರು.
