KSRTC ಟಿಕೆಟ್ ‘ರೌಂಡ್ ಆಫ್’ ಪದ್ಧತಿಗೆ ಅಂತ್ಯ: 1.57 ಕೋಟಿ ರೂ. ಹಣ ಸಂಗ್ರಹ ಬಹಿರಂಗ!

ಬೆಂಗಳೂರು: ಪ್ರತಿನಿತ್ಯ KSRTC ಬಸ್‌ಗಳಲ್ಲಿ ಸಂಚರಿಸುವ ಪ್ರತಿಯೊಬ್ಬರಿಗೂ ಶಾಕ್ ಆಗುವ ಮಾಹಿತಿಯೊಂದು ಹೊರಬಿದ್ದಿದೆ. ಚಿಲ್ಲರೆ ಸಮಸ್ಯೆಯನ್ನು ನಿವಾರಿಸಲು ಕೈಗೊಂಡ ಆ ಒಂದು ಯೋಜನೆ ಪರಿಣಾಮದಿಂದ ಈಗ ಬರೊಬ್ಬರಿ 1.57 ಕೋಟಿ ಹಣ ಸರ್ಕಾರದ ಬೊಕ್ಕಸಕ್ಕೆ ಸೇರಿದೆ.

ಟಿಕೆಟ್ ರೌಂಡ್‌ಆಫ್ :
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಕಳೆದ ಹಲವಾರು ವರ್ಷಗಳಿಂದ ಒಂದು ವಿಶಿಷ್ಟ ಪದ್ಧತಿಯನ್ನು ಅನುಸರಿಸುತ್ತಿತ್ತು.ಉದಾಹರಣೆಗೆ 36 ರೂಪಾಯಿ ಟಿಕೇಟ್ ದರವಾದರೆ 40 ರೂಪಾಯಿ, 117 ರೂಪಾಯಿ ಅದರೆ 120 ರೂಪಾಯಿ ರೌಂಡ್‌ಆಫ್ ಮಾಡಿ ಸಂಗ್ರಹಿಸಲಾಗುತ್ತಿತ್ತು. ಟಿಕೆಟ್ ಬೆಲೆ 91 ರೂಪಾಯಿಯಿಂದ 94 ರೂಪಾಯಿವರೆಗೆ ಇದ್ದರೆ, ಅದನ್ನು 90 ರೂಪಾಯಿಗೆ ಇಳಿಸಲಾಗುತ್ತಿತ್ತು.ಅದೇ ರೀತಿ, 95 ರೂಪಾಯಿಯಿಂದ 99 ರೂಪಾಯಿವರೆಗೆ ಇದ್ದರೆ, ಅದನ್ನು 100 ರೂಪಾಯಿಗೆ ಹೆಚ್ಚಿಸಲಾಗುತ್ತಿತ್ತು. ಪ್ರತಿದಿನ ಸಾವಿರಾರು ಪ್ರಯಾಣಿಕರು ಈ ರೀತಿ ತಮ್ಮ ಚಿಲ್ಲರೆ ಹಣವನ್ನು ತಮಗರಿವಿಲ್ಲದೆ ಕಳೆದುಕೊಳ್ಳುತ್ತಿದ್ದರು. ಈ ಪದ್ದತಿಯನ್ನು ಸ್ವತಃ KSRTC ತಮ್ಮ ಪ್ರಯಾಣಿಕರಿಗೆ ಚಿಲ್ಲರೆ ಕೊಡುವ ಸಮಸ್ಯೆಯನ್ನು ಪರಿಹರಿಸಲು 2016ರಲ್ಲಿ ಪ್ರೀಮಿಯಂ ಬಸ್ಸುಗಳ ಟಿಕೆಟ್ ದರವನ್ನು ರೌಂಡ್‌ಆಫ್ ಮಾಡುವ ವ್ಯವಸ್ಥೆಯನ್ನು ಜಾರಿಗೆ ತಂದಿತ್ತು.
ಇದರನುಸಾರ ಈ ಕಾಯ್ದೆಯನ್ನು ಪ್ರಮುಖವಾಗಿ ಐರಾವತ, ರಾಜಹಂಸ, ಇವಿ ಸೇರಿದಂತೆ ಪ್ರೀಮಿಯಂ ಬಸ್‌ಗಳ ಪ್ರಯಾಣಿಕರಿಂದ ಸಂಗ್ರಹ ಮಾಡಲಾಗುತ್ತಿತ್ತು. ಈ ರೀತಿ ಲಕ್ಷಾಂತರ ಜನರಿಂದ ಪ್ರತಿದಿನ ಹೆಚ್ಚುವರಿಯಾಗಿ ಸಂಗ್ರಹಿಸಿದ ಹಣ KSRTCಗೆ ಭಾರಿ ಆದಾಯ ತಂದುಕೊಟ್ಟಿದೆ. ಈ ಚಿಲ್ಲರೆ ಹಣದ ಒಟ್ಟೂ ಮೊತ್ತ ವರ್ಷಾಂತ್ಯದಲ್ಲಿ ಕೋಟಿಗಳನ್ನು ತಲುಪುತ್ತಿದೆ ಇಲ್ಲಿಯವರೆಗೂ 1,57,52,210 ರೂಪಾಯಿಗಳನ್ನು KSRTC ಸಂಗ್ರಹಿಸಿದೆ ಎಂಬ ಮಾಹಿತಿ ಸಿಕ್ಕಿದೆ. ಈ ಮಾಹಿತಿ ಹೊರಬಿದ್ದ ಮೇಲೆ ಸಾರ್ವಜನಿಕರಿಂದ ಆಕ್ಷೇಪ ಉಂಟಾಯಿತು. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಷಯವನ್ನು ಹೆಚ್ಚು ಚರ್ಚಿಸಲಾಯಿತು ಮತ್ತು ಇದರ ಬಗ್ಗೆ ಸಾಕಷ್ಟು ವಿರೋಧಗಳು ಸಹ ಕೇಳಿಬಂದವು.
ಪರಿಣಾಮವಾಗಿ ರಾಜ್ಯ ಸರ್ಕಾರ ಹಾಗೂ ಸಾರಿಗೆ ಇಲಾಖೆ ತಕ್ಷಣವೇ ಕ್ರಮ ಕೈಗೊಂಡಿದೆ. ಈಗ ಇಂತಹ ಟಿಕೆಟ್ ದರದ ‘ರೌಂಡ್ ಆಫ್’ ಪದ್ಧತಿಯನ್ನು ಸಂಪೂರ್ಣವಾಗಿ ನಿಲ್ಲಿಸಲು ಯೋಚಿಸಿದೆ. ಇದೀಗ KSRTC ಎಲ್ಲ ಪ್ರಯಾಣಿಕರಿಗೆ ನಿಖರ ದರದ ಟಿಕೆಟ್ ನೀಡಬೇಕು ಮತ್ತು ಅದಕ್ಕೆ ಸಮನಾದ ಹಣ ಪಡೆಯಬೇಕೆಂದು ಕಡ್ಡಾಯ ಮಾರ್ಗಸೂಚಿ ನೀಡಲಾಗಿದೆ. ಈ ನಿರ್ಧಾರದಿಂದ ಪ್ರಯಾಣಿಕರ ಟಿಕೇಟ್ ಹಣ ಉಳಿಯತ್ತದೆ.
ಇದೀಗ KSRTC ಸೇವೆಯಲ್ಲಿ ಪಾರದರ್ಶಕತೆ ತರಲು ಸಾರ್ವಜನಿಕರಿಗೆ ನ್ಯಾಯ ದೊರಕಿಸಿಕೊಡುವ ಹೊಸ ಹೆಜ್ಜೆಯನ್ನು ಇಟ್ಟಿದೆ. ಇಂತಹ ನಿರ್ಧಾರಗಳು ಸಾರ್ವಜನಿಕ ಸಂಸ್ಥೆಗಳ ಮೇಲೆ ವಿಶ್ವಾಸವನ್ನು ಹೆಚ್ಚಿಸುತ್ತವೆ ಮತ್ತು ಎಲ್ಲರಿಗೂ ಸಮಾನವಾಗಿ ನ್ಯಾಯ ಒದಗಿಸುವ ಈ ಕಾರ್ಯ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.
