Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಎನ್‌ಕೌಂಟರ್ ಸ್ಪೆಷಲಿಸ್ಟ್ ದಯಾ ನಾಯಕ್‌ ಎಸಿಪಿ ಹುದ್ದೆಗೆ ಲಗ್ಗೆ

Spread the love

ಮುಂಬೈ:ಮುಂಬೈ ಪೊಲೀಸ್‌ ಆಧಿಕಾರಿ ಕಾರ್ಕಳ ಎಣ್ಣೆ ಹೊಳೆ ಮೂಲದ ದಯಾ ನಾಯಕ್‌ ಅಸಿಸ್ಟಂಟ್‌ ಕಮಿಷನರ್‌ ಆಫ್‌ ಪೊಲೀಸ್‌(ಎಸಿಪಿ) ಆಗಿ ಭಡ್ತಿ ಹೊಂದಿದ್ದಾರೆ.

ಭೂಗತ ಜಗತ್ತಿಗೆ ಸಿಂಹಸ್ವಪ್ನರಾಗಿದ್ದ ದಯಾ ನಾಯಕ್‌ ಮುಂಬಯಿ ಕ್ರೈಂ ಬ್ರಾಂಚ್ ಸೀನಿಯ‌ರ್ ಇನ್‌ಸ್ಪೆಕ್ಟ‌ರ್ ಆಗಿ ಸೇವೆ ಸಲ್ಲಿಸುತ್ತಿದ್ದರು. 1995ರಲ್ಲಿ ಪೊಲೀಸ್‌ ಇಲಾಖೆಗೆ ಸೇರ್ಪಡೆಗೊಂಡ ಅವರು 2004ರ ವೇಳೆಗೆ ಮುಂಬಯಿ ಭೂಗತ ಲೋಕದ 85 ಕ್ಕೂ ಹೆಚ್ಚು ಪಾತಕಿಗಳನ್ನು ಎನ್‌ಕೌಂಟ‌ರ್ ಮಾಡಿದ್ದರು.ಮಹಾರಾಷ್ಟ್ರ ಭಯೋತ್ಪಾದಕ ನಿಗ್ರಹದ ದಳದಲ್ಲೂ ಕರ್ತವ್ಯ ಸಲ್ಲಿಸಿದ್ದರು. ಕಳೆದ ಹಲವು ವರ್ಷಗಳಿಂದ ಮುಂಬಯಿಯನ್ನು ಆವರಿಸಿದ್ದ ಡ್ರಗ್ಸ್ ಮಾಫಿಯಾಕ್ಕೂ ಕಡಿವಾಣ ಹಾಕುವಲ್ಲಿ ಅವರು ಯಶಸ್ವಿಯಾಗಿದ್ದರು. ಮುಂಬಯಿ ಹಾಗೂ ಹಲವಾರು ಉಪನಗರಗಳಲ್ಲಿ ನಡೆಯುತ್ತಿದ್ದ ಡ್ರಗ್ಸ್ ದಂಧೆ ಜಾಲಗಳನ್ನು ಭೇದಿಸುವಲ್ಲಿ ಅವರು ನಾಯಕತ್ವ ವಹಿಸಿದ್ದರು.


Spread the love
Share:

administrator

Leave a Reply

Your email address will not be published. Required fields are marked *