Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಅಜ್ಜಿಯ ಹುಟ್ಟುಹಬ್ಬಕ್ಕೆ ಮೊಮ್ಮಗಳ ಭಾವನಾತ್ಮಕ ‘ಗಿಫ್ಟ್’!

Spread the love

ಇತ್ತೀಚೆಗಿನ ದಿನಗಳಲ್ಲಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಅನ್ನೋದು ಟ್ರೆಂಡ್ ಆಗಿದೆ. ಈಗಂತೂ ಎಲ್ಲೇ ಹೋದರೂ ನಾವು ಕೃತಕ ಬುದ್ದಿಮತ್ತೆ ಎಂದರೆ ಅರ್ಟಿಫಿಷಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನದ ಬಗ್ಗೆಯೇ ಕೇಳುತ್ತಿದ್ದೇವೆ. ಪ್ರತಿಯೊಂದು ಕೆಲಸಕ್ಕೂ ನಾವು ಎಐ ತಂತ್ರಜ್ಞಾನವನ್ನು ಬಳಸುತ್ತಿದ್ದೇವೆ.

ಎಐ ತಂತ್ರಜ್ಞಾನ ಎಂಬುದು ನಮ್ಮನ್ನು ದಿನದಿಂದ ದಿನಕ್ಕೆ ಹೆಚ್ಚು ಅವರಿಸಿಕೊಳ್ಳುತ್ತಿದೆ. ಎಐ ನಿಂದ ಜನರು ಅನೇಕ ಕೆಲಸಗಳನ್ನು ಸಲೀಸಾಗಿ ಮಾಡಿ ಮುಗಿಸುತ್ತಿದ್ದಾರೆ ಅನ್ನೋದನ್ನ ಸಾಮಾಜಿಕ ಮಾಧ್ಯಮಗಳಲ್ಲಿ ನೋಡುತ್ತಿದ್ದೇವೆ.

ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಬಳಸಿ, ಹಳೆಯ ಫೋಟೋಗಳು ಮತ್ತು ವೀಡಿಯೊಗಳನ್ನು ಆಧಾರವಾಗಿ ತೆಗೆದುಕೊಂಡು, ಗತಿಸಿದ ವ್ಯಕ್ತಿಯ ಡಿಜಿಟಲ್ ಅವತಾರವನ್ನು ಸೃಷ್ಟಿಸುವುದು ಈಗ ಸಾಧ್ಯವಾಗಿದೆ. ಈ ತಂತ್ರಜ್ಞಾನದಿಂದ, ಕುಟುಂಬದ ಸದಸ್ಯರು ತಮ್ಮ ಪ್ರೀತಿಯವರನ್ನು ಮತ್ತೆ “ಕಾಣುವ” ಅನುಭವವನ್ನು ಪಡೆಯುತ್ತಿದ್ದಾರೆ. ಇಂತಹ ವಿಡಿಯೊಗಳಲ್ಲಿ, ಅಜ್ಜಿ ತನ್ನ ಗತಿಸಿದ ಪತಿಯೊಂದಿಗೆ ಕೈ ಹಿಡಿದು ನಡೆಯುತ್ತಿರುವ ದೃಶ್ಯಗಳು ಭಾವನಾತ್ಮಕವಾಗಿ ನೆಟ್ಟಿಗರನ್ನು ತಟ್ಟಿದೆ.

ಇದೀಗ ಇಲ್ಲೊಬ್ಬ ಮೊಮ್ಮಗಳು ತನ್ನ ಅಜ್ಜಿಯ ಹುಟ್ಟುಹಬ್ಬಕ್ಕೆ ಎಐ ಬಳಸಿ ಭಾವನಾತ್ಮಕ ಕ್ಷಣವನ್ನು ಮರುಸೃಷ್ಟಿಸುವ ಕೆಲಸ ಮಾಡಿದ್ದಾಳೆ. ಅಜ್ಜಿಯೊಬ್ಬಳು ತನ್ನ ಗತಿಸಿದ ಪತಿಯೊಂದಿಗೆ ಕೈ ಹಿಡಿದು ನಡೆಯುವ ಎಐ ಆಧರಿತ ವಿಡಿಯೊವನ್ನು ನೋಡಿ ಭಾವುಕರಾಗಿರುವ ಘಟನೆ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಗತಿಸಿದ ಪತಿಯೊಂದಿಗೆ ಕೈ ಹಿಡಿದು ನಡೆಯುವ ಎಐ ಆಧರಿತ ವಿಡಿಯೊವನ್ನು ನೋಡಿ ಅಜ್ಜಿ ಭಾವುಕಳಾಗಿದ್ದಾಳೆ. ಈ ಹೃದಯಸ್ಪರ್ಶಿ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅಜ್ಜಿಯ ನಗು ಮತ್ತು ಆಕೆಯ ಸಂತೋಷದ ಕಣ್ಣೀರು ನೆಟ್ಟಿಗರ ಮನಸ್ಸನ್ನು ತಟ್ಟಿದೆ.

ಈ ವಿಡಿಯೊಗಳಲ್ಲಿ ಅಜ್ಜಿಯ ನಗು, ಸಂತೋಷದ ಕಣ್ಣೀರುಗಳು ಸ್ಪಷ್ಟವಾಗಿದ್ದು, ಈ ವಿಡಿಯೋವನ್ನ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿವೆ. ಜನರು ಈ ಕ್ಷಣಗಳನ್ನು ತುಂಬಾ ಭಾವನಾತ್ಮಕವಾಗಿ ಸ್ವೀಕರಿಸುತ್ತಿದ್ದಾರೆ, ಮತ್ತು ತಂತ್ರಜ್ಞಾನ ಮಾನವ ಸಂಬಂಧಗಳಿಗೆ ಹೊಸ ಅರ್ಥವನ್ನು ನೀಡುತ್ತಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.

ಜೊತೆಗಿರದ ಜೀವ ಎಂದೆಂದಿಗೂ ಜೀವಂತ ಎನ್ನುವ ಮಾತಿದೆ. ಆದರೆ ನಮ್ಮವರು, ಆತ್ಮೀಯ ವ್ಯಕ್ತಿಗಳು ದೈಹಿಕವಾಗಿ ಜೊತೆಗಿಲ್ಲ ಎನ್ನುವ ನೋವು ಯಾರಿಗಾದ್ರೂ ಜೀವನ ಪರ್ಯಂತ ಕಾಡುತ್ತಲೇ ಇರುತ್ತದೆ. ವರುಷಗಳು ಉರುಳಿದ ಬಳಿಕ ಅಗಲಿದ ಆತ್ಮೀಯ ವ್ಯಕ್ತಿಯ ಫೋಟೋ, ವಿಡಿಯೋ ನೋಡಿದಾಗ ಕಣ್ಣಂಚಲಿ ನೀರೂ ಬರುವುದು ಸಹಜ. ಅವರ ಜೊತೆಗೆ ಕಳೆದ ನೆನಪುಗಳು ಪ್ರತಿ ಹಂತದಲ್ಲೂ ಕಾಡುತ್ತಲೇ ಇರುತ್ತದೆ. ಆದರೆ ಇನ್ಫ್ಲುಯೆನ್ಸರ್ ಅಪೂರ್ವ ವಿಜಯ್ ಕುಮಾರ್ ಎನ್ನುವವರು ತಮ್ಮ ಅಜ್ಜಿಯ ಹುಟ್ಟುಹಬ್ಬಕ್ಕೆ ಊಹೆ ಮಾಡಲಾಗದ ಉಡುಗೊರೆಯನ್ನು ನೀಡಿ ಅಜ್ಜಿಯನ್ನು ಭಾವುಕರನ್ನಾಗಿಸಿದ್ದಾಳೆ.

ಅಜ್ಜಿಯ ಹುಟ್ಟುಹಬ್ಬಕ್ಕೆ ಮೊಮ್ಮಗಳು ಎಐ ತಂತ್ರಜ್ಞಾನ ಬಳಸಿ ಅಗಲಿದ ಅಜ್ಜನು ಅಜ್ಜಿಯ ಕೈ ಹಿಡಿದು ನಡೆಯುವ ವಿಡಿಯೋವನ್ನು ಮರುಸೃಷ್ಟಿಸಿ ಅಜ್ಜಿಗೆ ವಿಶೇಷ ಗಿಫ್ಟ್ ನೀಡಿದ್ದಾಳೆ. ಈ ಹೃದಯಸ್ಪರ್ಶಿ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಬಳಕೆದಾರರು ಮೊಮ್ಮಗಳ ಈ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. apoorva-vijaykumar ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಎಐ ರಚಿತ ವಿಡಿಯೋ ಶೇರ್ ಮಾಡಿಕೊಂಡು, ಅಜ್ಜಿಗೆ ಪ್ರೀತಿಯ ಜನುಮ ದಿನದ ಶುಭಾಶಯಗಳನ್ನು ಮೊಮ್ಮಗಳು ಕೋರಿದ್ದಾಳೆ. ಅಲ್ಲದೇ ಜನ್ಮದಿನದ ಶುಭಾಶಯಗಳು ಅಮ್ಮು, ಅಪ್ಪುಪನ್ ಇಲ್ಲದೇ ಬದುಕುವುದು ಕಷ್ಟ ಎಂದು ನನಗೆ ತಿಳಿದಿದೆ. ಆದರೆ ಪ್ರತಿ ಕ್ಷಣ ಹಾಗೂ ಪ್ರತಿ ಸಂತೋಷದಲ್ಲಿ ಅವ್ರು ಇದ್ದಾರೆ. ನೀವು ಅವರನ್ನು ನೋಡದೇ ಇರಬಹುದು. ಆದರೆ ಅವರು ನಿಮ್ಮನ್ನು ಸದಾ ನೋಡುತ್ತಾರೆ. ನಿಮ್ಮನ್ನು ರಕ್ಷಿಸುತ್ತಾರೆ. ನಿಮ್ಮ ಪಕ್ಕದಲ್ಲಿ ಸದಾ ನಡೆಯುತ್ತಾರೆ ಎಂದಿದ್ದಾಳೆ.


Spread the love
Share:

administrator

Leave a Reply

Your email address will not be published. Required fields are marked *