ಇಲಾನ್ ಮಸ್ಕ್ ಹೊಸ ರಾಜಕೀಯ ಪಕ್ಷ: ಟ್ರಂಪ್ ವಿರುದ್ಧ ವ್ಯಂಗ್ಯ

ನ್ಯೂಯಾರ್ಕ್:ಉದ್ಯಮಿ ಇಲಾನ್ ಮಸ್ಕ್ ಅವರು ಹೊಸ ಪಕ್ಷ ಘೋಷಣೆ ಮಾಡಿರುವುದು ‘ಹಾಸ್ಯಾಸ್ಪದ’ವಾಗಿದ್ದು, ಅವರು ಸಂಪೂರ್ಣವಾಗಿ ದಾರಿ ತಪ್ಪಿದ್ದಾರೆ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಲೇವಡಿ ಮಾಡಿದ್ದಾರೆ.

ಒಂದು ಕಾಲದಲ್ಲಿ ಟ್ರಂಪ್ ಜೊತೆಗೆ ಗುರುತಿಸಿಕೊಂಡಿದ್ದ ಮಸ್ಕ್ ಅವರು, ಈಗ ರಿಪಬ್ಲಿಕನ್ ಹಾಗೂ ಡೆಮಾಕ್ರಟಿಕ್ ಪಕ್ಷಕ್ಕೆ ಪರ್ಯಾಯವಾಗಿ ‘ಅಮೆರಿಕನ್ ಪಕ್ಷ’ ಸ್ಥಾಪನೆ ಮಾಡುವುದಾಗಿ ಘೋಷಣೆ ಮಾಡಿದ್ದಾರೆ.
ಇದರಿಂದ ಅವರಿಗೆ ಸಂತೋಷವಾಗಿರಬಹುದು, ಆದರೆ ನನಗೆ ಹಾಸ್ಯಾಸ್ಪದ ರೀತಿ ಕಾಣುತ್ತಿದೆ’ ಎಂದಿದ್ದಾರೆ.

ಟ್ರಂಪ್ ಜೊತೆಗಿನ ಭಿನ್ನಾಭಿಪ್ರಾಯದ ಬೆನ್ನಲ್ಲೇ ಭಾನುವಾರ ‘ಅಮೆರಿಕ ಪಾರ್ಟಿ’ ಎಂಬ ಹೆಸರಿನ ಹೊಸ ರಾಜಕೀಯ ಪಕ್ಷ ಘೋಷಿಸಿದ್ದ ಇಲಾನ್ ಮಸ್ಕ್, ಈ ಬಗ್ಗೆ ತಮ್ಮ ಒಡೆತನದ ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್‌ನಲ್ಲಿ ಮಾಹಿತಿ ನೀಡಿದ್ದರು. ಅಮೆರಿಕದ ಜನರ ಸ್ವಾತಂತ್ರ್ಯವನ್ನು ಹಿಂದಿರುಗಿಸಲು ಪಕ್ಷವನ್ನು ಸ್ಥಾಪಿಸಿರುವುದಾಗಿಯೂ ಹೇಳಿಕೊಂಡಿದ್ದರು.
ತೆರಿಗೆ ಮತ್ತು ವೆಚ್ಚ ಮಸೂದೆ ಸಂಬಂಧಪಟ್ಟಂತೆ ಟ್ರಂಪ್ ಮತ್ತು ಮಸ್ಕ್ ನಡುವೆ ಒಡಕು ಮೂಡಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಪರಸ್ಪರ ವಿರುದ್ಧ ದ್ವೇಷಕಾರುವ ಮೂಲಕ ಬಟಾಬಯಲಾಗಿತ್ತು. ಸ್ವಲ್ಪ ಕಾಲ ತಣ್ಣಾಗಾಗಿದ್ದ ವೈರತ್ವ, ಮಸೂದೆ ಜಾರಿಗೊಳಿಸಲು ಟ್ರಂಪ್ ಆಡಳಿತ ಮುಂದಾಗುತ್ತಿದ್ದಂತೆ ಮತ್ತೆ ಹೆಡೆ ಎತ್ತಿದೆ.
