ಎಲೋನ್ ಮಸ್ಕ್ ಟ್ರಂಪ್ ಸರ್ಕಾರದ ತೆರಿಗೆ ನೀತಿಗೆ ಕೆಂಡಾಮಂಡಲ

ವಾಷಿಂಗ್ಟನ್: ಅಮೆರಿಕ ಸರ್ಕಾರದಿಂದ ಹೊರಬಂದ ಬೆನ್ನಲ್ಲೇ ಎಲೋನ್ ಮಸ್ಕ್ ಅವರು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಕೆಂಡಾಮಂಡಲವಾಗಿದ್ದಾರೆ.
ಟ್ರಂಪ್ ಅವರ ಕನಸಿನ ತೆರಿಗೆ ಬಿಲ್‌ಗೆ ಸಂಬಂಧಿಸಿದಂತೆ ಉಂಟಾದ ಭಿನ್ನಭಿಪ್ರಾಯದಿಂದ DOGE ಹುದ್ದೆಯನ್ನು ಮಸ್ಕ್ ತೊರೆದಿದ್ದರು. ಈಗ ಅದೇ ವಿಚಾರವನ್ನು ಇಟ್ಟುಕೊಂಡು ಟ್ರಂಪ್ ನೀತಿಯನ್ನು ಬಹಿರಂಗವಾಗಿಯೇ ವಿರೋಧಿಸಿದ್ದಾರೆ.ಟ್ರಂಪ್ ಅವರ ಕನಸಿನ ತೆರಿಗೆ ಬಿಲ್‌ಗೆ ಸಂಬಂಧಿಸಿದಂತೆ ಉಂಟಾದ ಭಿನ್ನಭಿಪ್ರಾಯದಿಂದ DOGE ಹುದ್ದೆಯನ್ನು ಮಸ್ಕ್ ತೊರೆದಿದ್ದರು. ಈಗ ಅದೇ ವಿಚಾರವನ್ನು ಇಟ್ಟುಕೊಂಡು ಟ್ರಂಪ್ ನೀತಿಯನ್ನು ಬಹಿರಂಗವಾಗಿಯೇ ವಿರೋಧಿಸಿದ್ದಾರೆ.
ಕ್ಷಮಿಸಿ, ಇನ್ನು ಮುಂದೆ ನಾನು ಸಹಿಸಲಾರೆ. ಈ ಅತಿರೇಕದ ಮಸೂದೆಯು ಅಸಹ್ಯಕರವಾಗಿದೆ. ಇದಕ್ಕೆ ಮತ ಹಾಕಿದವರಿಗೆ ನಾಚಿಕೆಯಾಗಬೇಕು. ನೀವು ತಪ್ಪು ಮಾಡಿದ್ದೀರಿ ಎನ್ನುವುದು ನಿಮಗೆ ತಿಳಿದಿದೆ. ಈ ಮಸೂದೆ 2.5 ಟ್ರಿಲಿಯನ್ ಡಾಲರ್ ಬಜೆಟ್ ಕೊರತೆಯನ್ನು ಹೆಚ್ಚಿಸುತ್ತದೆ ಮತ್ತು ಅಮೆರಿಕ ಜನರ ಮೇಲೆ ಭಾರೀ ಪ್ರಮಾಣದ ಸಾಲದ ಹೊರೆಯನ್ನು ಹೊರಿಸುತ್ತದೆ ಎಂದು ಎಕ್ಸ್‌ನಲ್ಲಿ ಖಾರವಾಗಿ ಬರೆದು ಪೋಸ್ಟ್ ಮಾಡಿದ್ದಾರೆ.
ಡೊನಾಲ್ಡ್ ಟ್ರಂಪ್ ಅವರ ತೆರಿಗೆ ನೀತಿಯನ್ನು ಟೀಕಿಸಿದ ಒಂದು ದಿನದ ಬಳಿಕ ವಿಶ್ವದ ಶ್ರೀಮಂತ ವ್ಯಕ್ತಿ ಎಲೋನ್ ಮಸ್ಕ್ (Elon Musk) ಅವರು ಅಮೆರಿಕದ ಸರ್ಕಾರಿ ದಕ್ಷತೆ ಇಲಾಖೆಯ (DOGE) ಮುಖ್ಯಸ್ಥ ಹುದ್ದೆಯಿಂದ ಕಳೆದ ವಾರ ಕೆಳಗೆ ಇಳಿದಿದ್ದರು.
ಆದಾಯಕ್ಕಿಂತ ಖರ್ಚು ಹೆಚ್ಚಾದರೆ ಡಿಒಜಿಇ ದಕ್ಷತೆಯ ಮೇಲೆ ಪರಿಣಾಮ ಬೀರಲಿದ್ದು ಇಲಾಖೆಯನ್ನು ದುರ್ಬಲಗೊಳಿಸಲಿದೆ ಎಂದು ಮಸ್ಕ್ ಅಸಮಾಧಾನ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.
ಡೊನಾಲ್ಡ್ ಟ್ರಂಪ್ ಅವರು ವೆಚ್ಚ ಕಡಿತಗೊಳಿಸಲು ಬಿಗ್ ಬ್ಯುಟಿಫುಲ್ ಮಸೂದೆಯನ್ನು ಪರಿಚಯಿಸಿದ್ದರು. ಈ ಮಸೂದೆಯ ಬಗ್ಗೆ ಅಮೆರಿಕದ ಆರ್ಥಿಕ ತಜ್ಞರು ವಿರೋಧ ವ್ಯಕ್ತಪಡಿಸಿದ ಬೆನ್ನಲ್ಲೇ ಮಸ್ಕ್, ಈ ಮಸೂದೆ ಬಜೆಟ್ ಕೊರತೆಯನ್ನು ಹೆಚ್ಚಿಸುತ್ತದೆ. ಮಸೂದೆ ದೊಡ್ಡದಾಗಿರಬಹುದು ಅಥವಾ ಸುಂದರವಾಗಿರಬಹುದು. ಆದರೆ ಅದು ಎರಡೂ ಆಗಬಹುದೇ ಎಂದು ನನಗೆ ತಿಳಿದಿಲ್ಲ. ನನ್ನ ವೈಯಕ್ತಿಕ ಅಭಿಪ್ರಾಯ ಎಂದಿದ್ದರು.
ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಮಸ್ಕ್ ಅವರು ಡೊನಾಲ್ಡ್ ಟ್ರಂಪ್ ಪರ ಮತಯಾಚನೆ ಮಾಡಿದ್ದರು. ನಂತರ ಟ್ರಂಪ್ DOGE ಮುಖ್ಯಸ್ಥರನ್ನಾಗಿ ಮಸ್ಕ್ ಅವರನ್ನು ನೇಮಿಸಿದ್ದರು. ನೇಮಿಸಿದ ನಂತರ ಹಲವಾರು ಸರ್ಕಾರಿ ಇಲಾಖೆಗಳನ್ನು ಮುಚ್ಚಿದ್ದರು. ಉದ್ಯೋಗಿಗಳನ್ನು ಮನೆಗೆ ಕಳುಹಿಸಿದರು. ಅಮೆರಿಕದ ಹಲವು ದೇಶಗಳಿಗೆ ನೀಡುತ್ತಿದ್ದ USAID ನಿಲ್ಲಿಸಿದ್ದರು. ಇದರಿಂದಾಗಿ ಸರ್ಕಾರಿ ಇಲಾಖೆಯ ಕೆಂಗಣ್ಣಿಗೆ ಮಸ್ಕ್ ಗುರಿಯಾಗಿದ್ದರು.
ಟ್ರಂಪ್ ಆಡಳಿತದಲ್ಲಿ ಮಸ್ಕ್ ಅವರ ಪಾತ್ರ ಹೆಚ್ಚಾಗುತ್ತಿದ್ದಂತೆ ಅಮೆರಿಕದ ಹಲವು ಕಡೆ ಟೆಸ್ಲಾ ಶೋರೂಂ ಮೇಲೆ ದಾಳಿಗಳು ಆಗುತ್ತಿತ್ತು. ಇದರಿಂದಾಗಿ ಟೆಸ್ಲಾ ಕಂಪನಿಗೆ ಭಾರೀ ನಷ್ಟವಾಗಿತ್ತು.