ಟ್ರಂಪ್‌ಗೆ ಸೆಡ್ಡು ಹೊಡೆದ ಎಲಾನ್ ಮಸ್ಕ್: ಅಮೆರಿಕಾದಲ್ಲಿ ಹೊಸ ರಾಜಕೀಯ ಪಕ್ಷ ಸ್ಥಾಪನೆಗೆ ಚಿಂತನೆ!

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump), ಉದ್ಯಮಿ ಎಲಾನ್ ಮಸ್ಕ್ (Elon Musk) ನಡುವೆ ಸಂಘರ್ಷ ತಾರಕ್ಕೇರಿದೆ. ಅವರಿಬ್ಬರ ನಡುವಿನ ಸಂಘರ್ಷ ಅಮೆರಿಕ ಪಾರ್ಟಿ ಎಂಬ ಹೊಸ ರಾಜಕೀಯ ಪಕ್ಷವನ್ನು ಸ್ಥಾಪಿಸಲು ಎಲಾನ್ ಮಸ್ಕ್ ಮುಂದಾಗಿದ್ದಾರೆ. ಡೊನಾಲ್ಡ್ ಟ್ರಂಪ್ ಅವರ ತೆರಿಗೆ ಮಸೂದೆಯನ್ನು ತೀವ್ರವಾಗಿ ವಿರೋಧಿಸಿದ ನಂತರ ಎಲಾನ್ ಮಸ್ಕ್ ಈ ನಿರ್ಧಾರವನ್ನು ಕೈಗೊಂಡಿದ್ದಾರೆ.

ಈ ಹಿಂದೆ ಸಾಮಾಜಿಕ ಜಾಲತಾಣ ಎಕ್ಸ್( ಹಿಂದಿನ ಟ್ವಿಟರ್) ನಲ್ಲಿ ಹೊಸ ಪಕ್ಷದ ಅಗತ್ಯವಿದೆಯೇ ಎಂದು ಪ್ರಶ್ನಿಸಿದ್ದರು. ಆದರೆ ನಂತರ ದಿನಗಳಲ್ಲಿ ನಮ್ಮ ಬೆಂಬಲಿಗರು ಪ್ರತಿಕ್ರಿಯೆಗಳು ಕ್ರಮ ಕೈಗೊಳ್ಳಲು ಪ್ರೋತ್ಸಾಹಿಸಿದವು ಎಂದು ಎಲಾನ್ ಮಸ್ಕ್ ಹೇಳಿದ್ದಾರೆ.
ವಿಶ್ವದ ದೊಡ್ಡಣ್ಣ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇತ್ತೀಚಿನ ತೆರಿಗೆ ಕಡಿತ ಮತ್ತು ಖರ್ಚು ಶಾಸನವು ಮಸ್ಕ್‌ಗೆ ನಿರ್ಣಾಯಕವಾಗಿತ್ತು. ಈ ಹಿಂದೆ ಟ್ರಂಪ್ ಅವರ ಕಟ್ಟಾ ಬೆಂಬಲಿಗರಾಗಿದ್ದ ಎಲಾನ್ ಮಸ್ಕ್, ಅವರ ಮರು-ಚುನಾವಣಾ ಪ್ರಚಾರದಲ್ಲಿ ಭಾರಿ ಹೂಡಿಕೆ ಮಾಡಿದ್ದರು. ಅಲ್ಲದೆ ಸರ್ಕಾರಿ ದಕ್ಷತೆಯಿಂದಾಗಿ ಇಲಾಖೆಯನ್ನೂ ಮುನ್ನಡೆಸಿದ್ದರು. ಆದರೆ, ಟ್ರಂಪ್ ಅವರ ನೀತಿಗಳಿಂದ ಹೆಚ್ಚಿದ ಕೊರತೆಯನ್ನು ಅವರು ಅದು ವಿರೋಧ ಕೂಡ ಮಾಡಿದ್ದರು.
ಡೊನಾಲ್ಡ್ ಟ್ರಂಪ್ ತೆರಿಗೆ ಮಸೂದೆಯನ್ನು ವಿರೋಧಿಸಿ ಮಾತನಾಡಿದ ಅವರು ಮಸ್ಕ್ ಇದು ಅಮೆರಿಕವನ್ನು ದಿವಾಳಿ ಮಾಡುವ ಅಪಾಯವನ್ನುಂಟುಮಾಡುವ ಸಂಗತಿ ಎಂದು ಮಸ್ಕ್ ಎದುರೇಟು ಕೊಟ್ಟಿದ್ದರು. ಅತಿಯಾದ ಖರ್ಚು ಮತ್ತು ಭ್ರಷ್ಟಾಚಾರದಿಂದ ಕಾಂಗ್ರೆಸ್ ದೇಶವನ್ನು ಆರ್ಥಿಕವಾಗಿ ವಿನಾಶದತ್ತ ಕೊಂಡೊಯ್ಯುತ್ತಿದೆ ಎಂದು ಅವರು ಸಹ ಹೇಳಿದ್ದರು.
ಟೀಕೆಗಳಿಗೆ ಪ್ರತಿಕ್ರಿಯೆಯಾಗಿ ಟ್ರಂಪ್, ಮಸ್ಕ್‌ನ ಟೆಸ್ಲಾ ಮತ್ತು ಸ್ಪೇಸ್‌ಎಕ್ಸ್‌ನಂತಹ ಕಂಪನಿಗಳಿಗೆ ನೀಡಲಾಗುತ್ತಿದ್ದ ಸಬ್ಸಿಡಿಗಳನ್ನು ಹಿಂತೆಗೆದುಕೊಳ್ಳುವ ಬೆದರಿಕೆ ಹಾಕಿದ್ದಾರೆ. ಆದರೂ ಕೂಡ ಎಲಿನ್ ಮಸ್ಕ್ ತಮ್ಮ ನಿರ್ಧಾರದಿಂದ ಹಿಂದೆ ಸರಿದಿಲ್ಲ.
ಮಿಲಿಟರಿ ತಂತ್ರಗಳಿಂದ ಪ್ರೇರಿತರಾಗಿ ಟ್ರಂಪ್ ಅವರ ಮಸೂದೆಯನ್ನು ವಿರೋಧಿಸುವ ಅಭ್ಯರ್ಥಿಗಳಿಗೆ ಆರ್ಥಿಕವಾಗಿ ಬೆಂಬಲ ನೀಡಲು ಅವರು ಯೋಜನೆಯನ್ನು ಕೂಡ ಮಾಡಿದ್ದಾರೆ. ಪ್ರಜಾಪ್ರಭುತ್ವದ ವೇಷದಲ್ಲಿರುವ ಏಕಪಕ್ಷೀಯ ವ್ಯವಸ್ಥೆಯನ್ನು ಕೆಡವುವದು ಅವರ ಗುರಿಯಾಗಿದೆ.

ರಾಜಕೀಯದ ಮೇಲೆ ಪರಿಣಾಮ
ಎಲಾನ್ ಮಸ್ಕ್ ಮತ್ತು ಡೊನಾಲ್ಡ್ ಟ್ರಂಪ್ ಅವರ ನಡುವಿನ ಭಿನ್ನಾಭಿಪ್ರಾಯವು ಮುಂಬರುವ ಚುನಾವಣೆಗಳಲ್ಲಿ ಉಂಟಾಗುವ ಪರಿಣಾಮಗಳ ಬಗ್ಗೆ ಸಾರ್ವಜನಿಕರಿಗೆ ಚಿಂತೆಗೀಡುವಂತೆ ಮಾಡಿದೆ. 2024 ರಲ್ಲಿ, ಮಸ್ಕ್ ರಿಪಬ್ಲಿಕನ್ ಪ್ರಚಾರಗಳಿಗೆ ಸುಮಾರು $300 ಮಿಲಿಯನ್ ದೇಣಿಯನ್ನು ಕೊಟ್ಟಿದ್ದರು. ಇದು ಡೊನಾಲ್ಡ್ ಟ್ರಂಪ್ ಮತದಾರರನ್ನು ಸೆಳೆಯಲು ಸಹಾಯ ಮಾಡಿತು. ಆರ್ಥಿಕ ಬೆಂಬಲದ ಹೊರತಾಗಿಯೂ, ರಿಪಬ್ಲಿಕನ್ನರು ವಿಸ್ಕಾನ್ಸಿನ್ ಸುಪ್ರೀಂ ಕೋರ್ಟ್ ಸ್ಥಾನವನ್ನು ಕಳೆದುಕೊಂಡರು.
ರಾಜಕೀಯ ಭಿನ್ನಾಭಿಪ್ರಾಯದಿಂದಾಗಿ ಷೇರುಮಾರುಕಟ್ಟೆಯಲ್ಲಿ ಟೆಸ್ಲಾ ಷೇರುಗಳ ಕಾರ್ಯಕ್ಷಮತೆಯ ಮೇಲೂ ಕೂಡ ಹೆಚ್ಚಿನ ಪರಿಣಾಮವನ್ನು ಬೀರಿದೆ.ಡೊನಾಲ್ಡ್ ಟ್ರಂಪ್ ಅವರ ಮರು-ಚುನಾವಣೆಯ ನಂತರ ಟೆಸ್ಲಾ ಷೇರುಗಳು ಏರಿಕೆ ಕಂಡರೂ, ನಂತರ ಅವುಗಳ ಮೌಲ್ಯದ ಅರ್ಧಕ್ಕಿಂತ ಹೆಚ್ಚು ಕುಸಿತವನ್ನು ಕಾಣಲು ಕಾರಣವಾಗಿದೆ.
ಅಮೆರಿಕಾ ರಾಜಕೀಯದ ದೀರ್ಘಕಾಲದ ಆಡಳಿತವನ್ನು ನೋಡುವುದಾದರೆ ಎಲಾನ್ ಮಸ್ಕ್ ದ್ವಿಪಕ್ಷೀಯ ವ್ಯವಸ್ಥೆಯನ್ನು ಅಡ್ಡಿಪಡಿಸುವ ಮಹತ್ವಾಕಾಂಕ್ಷೆ ಕಷ್ಟಕರವಾಗುವಂತೆ ಕಾಣುತ್ತದೆ. ಡೊನಾಲ್ಡ್ ಟ್ರಂಪ್ ಅವರ ಎರಡನೇ ಅವಧಿಯಲ್ಲಿ ಅವರ ಅನುಮೋದನೆ ರೇಟಿಂಗ್‌ಗಳು ಶೇ.40 ಹೆಚ್ಚಿದ್ದರೂ, ಮಸ್ಕ್ ಇನ್ನೂ ಅಮೆರಿಕ ಪಕ್ಷವನ್ನು ನೋಂದಾಯಿಸಿಲ್ಲ. ಆದರೆ ಮುಂದಿನ ವರ್ಷದ ಚುನಾವಣೆಯಲ್ಲಿ ಭಾಗವಹಿಸುವಂತ ಸಾಧ್ಯತೆ ಹೆಚ್ಚಾಗಿ ಇದೆ.
ಇಂದುವರೆಗೂ ಎಲಾನ್ ಮಸ್ಕ್ ಅವರ ರಾಜಕೀಯ ತಂತ್ರಗಳ ಬಗ್ಗೆ ಡೊನಾಲ್ಡ್ ಟ್ರಂಪ್ ಆಗಲಿ ಅಥವಾ ಅವರ ಆಡಳಿತವಾಗಲಿ ಸಾರ್ವಜನಿಕವಾಗಿ ಯಾವುದೇ ಹೇಳಿಕೆ ಕೊಟ್ಟಿಲ್ಲ. ಎಲಾನ್ ಮಸ್ಕ್ ತನ್ನನ್ನು ಸ್ವಾತಂತ್ರ್ಯ ಮತ್ತು ಹಣಕಾಸಿನ ಜವಾಬ್ದಾರಿಯ ಪ್ರತಿಪಾದಕ ಎಂದು ಹೇಳಿಕೊಂಡಿದ್ದಾರೆ. ಆದರೆ ಅವರ ಉದ್ದೇಶದ ಹಿಂದೆ ಎಷ್ಟು ಜನರು ಎಲಾನ್ ಮಸ್ಕ್ ಕಡೆಗೆ ಒಟ್ಟುಗೂಡಿ ಬಂದಿದ್ಧಾರೆ ಎಂಬುವುದನ್ನು ಕಾದುನೋಡಬೇಕಿದೆ.
